ಇನ್ಮುಂದೆ ಪ್ರತಿ ಶನಿವಾರ ಮಧ್ಯಾಹ್ನ 2.30ರಿಂದ ಸಂಜೆ 6ರವರೆಗೂ ಕೆಪಿಎಂಎ ವಿಷಯಗಳಿಗೆ ಸಂಬಂಧಿಸಿದಂತೆ ವೈದ್ಯರು ನನ್ನನ್ನು ನೇರವಾಗಿ ಕಚೇರಿಯಲ್ಲಿ ಭೇಟಿಯಾಗಬಹುದು
ಡಾ.ಪಿ.ಸಿ. ಕುಮಾರಸ್ವಾಮಿ ಡಿಎಚ್‌ಒ ಮೈಸೂರು
‘ಕೆಲವರ ಕಣ್ಣು ಕೆಂಪಾಗಿದೆ’
‘ಅಕ್ರಮದ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ 35 ಕ್ಲಿನಿಕ್ (ಸಂಸ್ಥೆ)ಗಳನ್ನು ಮುಚ್ಚಿಸಿದ್ದೇವೆ. ಎರಡು ಕ್ರಿಮಿನಲ್ ಪ್ರಕರಣವನ್ನೂ ದಾಖಲಿಸಲಾಗಿದೆ. ಮಾನದಂಡಗಳನ್ನು ಪೂರೈಸುವ ಅರ್ಜಿಗಳನ್ನು 3–4 ತಿಂಗಳಲ್ಲಿ ವಿಲೇವಾರಿಗೆ ಪ್ರಯತ್ನಿಸಲಾಗುವುದು. ವಿಚಕ್ಷಣೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತಿರುವುದಕ್ಕೆ ಕೆಲವರ ಕಣ್ಣು ಕೆಂಪಾಗಿದೆ. ಆಕ್ಷೇಪಣೆ ವ್ಯಕ್ತವಾದಾಗ ಸರಿಯಾದ ಉತ್ತರವನ್ನೇ ಕೊಟ್ಟಿರುವುದಿಲ್ಲ’ ಎಂದು ಡಿಎಚ್‌ಒ ಕುಮಾರಸ್ವಾಮಿ ಹೇಳಿದರು. ‘ನಾನು ಬಂದ ಮೇಲೆ 50ಕ್ಕೂ ಹೆಚ್ಚು ಅರ್ಜಿಗಳನ್ನು ಪರಿಶೀಲಿಸಿ ನೋಂದಣಿಪತ್ರ ನವೀಕರಣ ಪತ್ರ ಕೊಟ್ಟಿದ್ದೇವೆ. ಅದಕ್ಕೆ ಅವರು ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ’ ಎನ್ನುತ್ತಾರೆ ಅವರು.