ಮೈಸೂರು: ಇಲ್ಲಿನ ಕುವೆಂಪುನಗರದಲ್ಲಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಆಯುಕ್ತರ ಅಧಿಕೃತ ನಿವಾಸದಲ್ಲಿದ್ದ ಡಿವಿಆರ್ ಹಾಗೂ 2 ಸಿಸಿಟಿವಿ ಕ್ಯಾಮೆರಾಗಳು ನಾಪತ್ತೆಯಾದ ತಿಂಗಳುಗಳ ಬಳಿಕ, ಅಧಿಕಾರಿಗಳು ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಮುಡಾದ ಹಿಂದಿನ ಆಯುಕ್ತ ಜಿ.ಟಿ. ದಿನೇಶ್ಕುಮಾರ್ ಇದೇ ನಿವಾಸದಲ್ಲಿ ವಾಸವಿದ್ದರು. ಜುಲೈನಲ್ಲಿ ಅವರ ವರ್ಗಾವಣೆಯಾಗಿದ್ದು, ನಂತರ ಈ ಮನೆಯನ್ನು ನವೀಕರಣ ಮಾಡಲಾಗುತ್ತಿದೆ. ಇದೇ ಸೆಪ್ಟೆಂಬರ್ನಲ್ಲಿ ಕಾಮಗಾರಿ ಆರಂಭದ ಸಂದರ್ಭದಲ್ಲೇ ಇಲ್ಲಿನ ಡಿವಿಆರ್ ಹಾಗೂ ಸಿಸಿಟಿವಿ ಕ್ಯಾಮೆರಾಗಳು ನಾಪತ್ತೆಯಾಗಿರುವ ಕುರಿತು ಸುದ್ದಿಯಾಗಿತ್ತು. ಅಧಿಕಾರಿಗಳು ಈಗ ದೂರು ದಾಖಲಿಸಿದ್ದಾರೆ.

ಇ.ಡಿ. ಹಾಗೂ ಲೋಕಾಯುಕ್ತ ವಿಚಾರಣೆ ನಂತರ ಅಧಿಕಾರಿಗಳು ಎಚ್ಚೆತ್ತಿದ್ದು, ತಡವಾಗಿ ದೂರು ನೀಡಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಈ ಕುರಿತು ಮುಡಾದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ‘ಆಯುಕ್ತರ ನಿವಾಸದಲ್ಲಿ ಕೆಲವು ವಸ್ತುಗಳು ನಾಪತ್ತೆಯಾದ ಕುರಿತು ಆಂತರಿಕ ತನಿಖೆ ನಡೆಸಲಾಗಿತ್ತು. ಆ ವರದಿ ಬರುವುದು ತಡವಾಯಿತು. ವರದಿ ಆಧರಿಸಿ ಈಗ ದೂರು ನೀಡಿದ್ದೇವೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.