ಮೈಸೂರು: ‘ವಿಧಾನಸಭೆ ಚುನಾವಣೆ–2023ರ ಸಿದ್ಧತೆಗಳು ಭರದಿಂದ ಸಾಗಿದ್ದು, ಮತದಾನ ಪ್ರಕ್ರಿಯೆಯ ಭಾಗವಾದ ವಿ.ವಿ.ಪ್ಯಾಟ್ ಯಂತ್ರಗಳನ್ನು (ವಿದ್ಯುನ್ಮಾನ ಮತಯಂತ್ರ) ಫೆ.13ರಂದು ಜಿಲ್ಲೆಗೆ ತರಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.

ಇಲ್ಲಿ ಶುಕ್ರವಾರ ನಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಅಂದು ಹೈದರಾಬಾದ್‌ನಿಂದ 9 ಲಾರಿಗಳಲ್ಲಿ ಯಂತ್ರಗಳನ್ನು ತರಲಾಗುವುದು. ಎಲ್ಲಾ ಪಕ್ಷಗಳ ಪ್ರತಿನಿಧಿಗಳು ಅವುಗಳನ್ನು ಪರಿಶೀಲಿಸಬಹುದು. ಯಾವುದೇ ಸಂದೇಹಗಳಿದ್ದರೆ ಪರಿಹರಿಸಿಕೂಳ್ಳಬಹುದು’ ಎಂದರು.

‘ಯಂತ್ರಗಳನ್ನು ನಮ್ಮ ಅಧಿಕಾರಿಗಳು ಸ್ವೀಕರಿಸಿದ ಕ್ಷಣದಿಂದ ವಿಡಿಯೊ ಚಿತ್ರೀಕರಣ ಮಾಡಲಾಗುತ್ತದೆ. ಪ್ರತಿ ಹಂತವನ್ನೂ ನೋಡಬಹುದು. ನಂತರ ಅಣಕು ಮತದಾನ ನಡೆಸಲಾಗುವುದು. ಒಟ್ಟಾರೆ ಯಾವುದೇ ಸಂದೇಹಕ್ಕೆ ಆಸ್ಪದವಿಲ್ಲದಂತೆ ಚುನಾವಣೆ ನಡೆಸುವುದು ನಮ್ಮ ಉದ್ದೇಶವಾಗಿದೆ’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ 2,905 ಮತಗಟ್ಟೆಗಳಿದ್ದು, ಮತದಾರರ ಪಟ್ಟಿಗೆ ಹೆಸರು ಸೇರಿಸುವ ಹಾಗೂ ತೆಗೆಯುವ ಕೆಲಸ ಪ್ರಗತಿಯಲ್ಲಿದೆ. ಯಾವುದೇ ಹಂತದಲ್ಲಿ ಬಿಎಲ್‌ಒಗಳು ಸ್ಪಂದಿಸದಿದ್ದರೆ ದೂರು ನೀಡಬೇಕು’ ಎಂದರು.

ವಿವಿಧ ಇಲಾಖೆಗಳ ಅಧಿಕಾರಿಗಳು, ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.