ಮೈಸೂರು: ಸಹಜ ಸಮೃದ್ಧ ಮತ್ತು ಅಕ್ಷಯ ಕಲ್ಪ ಆರ್ಗಾನಿಕ್ಸ್ ಸಂಸ್ಥೆಯು ಇಲ್ಲಿನ ನಂಜರಾಜ ಛತ್ರದಲ್ಲಿ ಆಯೋಜಿಸಿರುವ ‘ಬಾಳೆ ಮೇಳ’ದಲ್ಲಿ 150ಕ್ಕೂ ಹೆಚ್ಚಿನ ಅಪರೂಪದ ಬಾಳೆ ತಳಿ ಪ್ರದರ್ಶನಗೊಂಡಿತು. ವಿದೇಶಿ ತಳಿ ಹಾಗೂ ಬೃಹತ್ ಗಾತ್ರದ ಬಾಳೆ ಗೊನೆಗಳು ಜನರನ್ನು ಆಕರ್ಷಿಸಿದವು.

ಶಿರಸಿಯ ಪ್ರಸಾದ್ ರಾಮ ಹೆಗಡೆ ಅಪರೂಪದ ಬಾಳೆ ಮತ್ತು ಕಂದುಗಳನ್ನು ಮೇಳಕ್ಕೆ ತಂದಿದ್ದು, 16 ಅಡಿ ಉದ್ದದ ಸಹಸ್ರ ಬಾಳೆ ಗಮನ ಸೆಳೆಯುತ್ತಿದೆ. ಮೇಳದಲ್ಲಿ ಬಾಳೆಯಿಂದ ಮಾಡಿದ ಹತ್ತಾರು ತಿಂಡಿ ತಿನಿಸುಗಳು ಮಾರಾಟಕ್ಕಿವೆ. ಬಾಳೆ ಹಣ್ಣು, ದಿಂಡು, ಗಡ್ಡೆಯಿಂದ ತಯಾರಿಸಿದ ದೋಸೆ, ಹೋಳಿಗೆ, ಬಜ್ಜಿ, ಹಲ್ವ, ಚಿಪ್ಸ್, ಪಾಯಸ, ರಸಾಯನ, ಕೇಕ್, ಸೂಪ್, ಜ್ಯೂಸ್, ಉಪ್ಪಿನಕಾಯಿ ಪ್ರದರ್ಶನದಲ್ಲಿದೆ.

ಕಾರ್ಯಕ್ರಮಕ್ಕೆ ಚಾಲನೆ: ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆಯಲಿರುವ ‘ಬಾಳೆ ಮೇಳ’ಕ್ಕೆ ಸಿನಿಮಾ ನಿರ್ದೇಶಕಿ ಸುಮನ ಕಿತ್ತೂರು ಚಾಲನೆ ನೀಡಿದರು.

ಬಳಿಕ ಮಾತನಾಡಿ, ‘ಬಾಳೆ ಹಾಗೂ ವೈವಿಧ್ಯದ ಬೆಳೆ ಬೆಳೆಯುತ್ತಿದ್ದ ಜಮೀನನ್ನು ಹೊಗೆ ಸೊಪ್ಪು, ಮುಸುಕಿನ ಜೋಳ ಮುಂತಾದ ವಾಣಿಜ್ಯ ಬೆಳೆಗಳು ಆಕ್ರಮಿಸಿದ್ದು, ಅನ್ನ ನೀಡುವ ಬೆಳೆಗಳು ಕಣ್ಮರೆಯಾಗಿವೆ. ಅವನ್ನು ಮರಳಿ ತರಬೇಕಿದೆ. ಬಾಳೆಯ ವಿವಿಧ ತಳಿಗಳನ್ನು ಸಂರಕ್ಷಿಸಬೇಕಿದೆ’ ಎಂದರು.

ಈ ಸಂದರ್ಭದಲ್ಲಿ ಬಾಳೆ ತಳಿಗಳನ್ನು ಸಂರಕ್ಷಿಸಿರುವ ಕೇರಳದ ವಿನೋದ್ ನಾಯರ್, ಶಿರಸಿಯ ಪ್ರಸಾದ್ ಕೃಷ್ಣ ಹೆಗಡೆ ಮತ್ತು ತಮಿಳುನಾಡಿನ ಸೇಂದಿಲ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಮಂಜುನಾಥ ಅಂಗಡಿ, ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಬಿ.ಎನ್.ಜ್ಞಾನೇಶ್, ಆಹಾರ ತಜ್ಞೆ ರತ್ನಾ ರಾಜಯ್ಯ, ಸಹಜ ಸಮೃದ್ಧ ಸಂಸ್ಥೆಯ ನಿರ್ದೇಶಕ ಜಿ.ಕೃಷ್ಣ ಪ್ರಸಾದ್, ಅಕ್ಷಯಕಲ್ಪ ಆರ್ಗಾನಿಕ್ಸ್ನ ಮಂಜಪ್ಪ ಹೊನ್ನಪ್ಪನವರ್ ಇದ್ದರು.

ಅಭಯ್ ನ್ಯಾಚುರಲ್ ಆಶ್ರಯದಲ್ಲಿ ಮೌಲ್ಯವರ್ಧನೆಯ ಅವಕಾಶಗಳ ಬಗ್ಗೆ ತರಬೇತಿ ನಡೆಯಿತು. ಹುಣಸೂರಿನ ರತ್ನಗಿರಿಯ ನವೀನ್ ಕುಮಾರ್ ಮತ್ತು ಚಾಮರಾಜನಗರದ ವರ್ಷಾ ಮೌಲ್ಯವರ್ಧನೆಯ ಅನುಭವ ಹಂಚಿಕೊಂಡರು.

ಬಾಳೆ ಮೇಳವು ನ.24ರವರೆಗೆ ನಡೆಯಲಿದ್ದು, ಭಾನುವಾರ ಬೆಳಿಗ್ಗೆ 10.30 ಕ್ಕೆ ಮಕ್ಕಳ ಚಿತ್ರಕಲಾ ಸ್ಪರ್ಧೆ ಹಾಗೂ ಮಧ್ಯಾಹ್ನ 12 ಘಂಟೆಗೆ ಬಾಳೆ ಅಡುಗೆ ಸ್ಪರ್ಧೆ ಆಯೋಜಿಸಲಾಗಿದೆ.

120 ಬಾಳೆ ತಳಿ ಪ್ರದರ್ಶಿಸಿದ ವಿನೋದ್

ಕೇರಳದ ವಿನೋದ್ ನಾಯರ್ 120 ಬಗೆಯ ಬಾಳೆ ತಳಿಗಳನ್ನು ಪ್ರದರ್ಶನಕ್ಕೆ ತಂದಿದ್ದು ಅವನ್ನು ನೋಡಲು ಜನ ಮುತ್ತಿಕ್ಕಿದರು. ಪೂಜಾ ಕದಳಿ ಮಟ್ಟಿ ಬ್ಲೂ ಜಾವ ಮೊಟ್ಟ ಪೂವನ್ ಸಹಸ್ರ ಪೂವನ್ ಚಮ್ಮಟ್ಟಿ ತೇಜನ್ ಕದಳಿ ತುಳುವನ್ ಮುಂತಾದ ಅಪರೂಪದ ತಳಿಗಳನ್ನು ಪ್ರದರ್ಶನಕ್ಕಿಡಲಾಗಿದೆ. ಏಲಕ್ಕಿ ಬಾಳೆ ನಂಜನಗೂಡು ರಸಬಾಳೆ ಚಂದ್ರ ಬಾಳೆ ನೇಂದ್ರ ಬಾಳೆ ಮದರಂಗ ಬೂದು ಬಾಳೆ ಮಟ್ಟಿ ಬಾಳೆ ಗಿಡಗಳು ಮಾರಾಟಕ್ಕಿಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.