ಮೈಸೂರು: ‘ಎಚ್.ಡಿ.ಕುಮಾರಸ್ವಾಮಿ ಬಳಿ ನನ್ನ ಮಾತೇನೂ ನಡೆಯುವುದಿಲ್ಲ. ಹೀಗಿದ್ದರೂ, ಶಾಸಕ ಜಿ.ಟಿ.ದೇವೇಗೌಡ ಅವರಿಗೆ ನನ್ನಿಂದ ರಾಜಕೀಯವಾಗಿ ತೊಂದರೆ ಆಗಿದೆ ಎಂದು ಭಾವಿಸಿದ್ದರೆ ಚಾಮುಂಡಿಬೆಟ್ಟಕ್ಕೆ ಬರಲಿ, ಅಲ್ಲಿ ಪ್ರಮಾಣ ಮಾಡಲು ನಾನು ಸಿದ್ಧ’ ಎಂದು ಮಾಜಿ ಸಚಿವ ಸಾ.ರಾ. ಮಹೇಶ್ ಆಹ್ವಾನಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಭಾನುವಾರ ಮಾತನಾಡಿ, ‘ಯಾರಿಗೂ ತೊಂದರೆ ಕೊಟ್ಟು ರಾಜಕೀಯ ಮಾಡುವ ಅಗತ್ಯ ನನಗಿಲ್ಲ. ಈಗಾಗಲೇ ರಾಜಕೀಯ ಚಟುವಟಿಕೆಗಳಿಂದ ದೂರವಿದ್ದೇನೆ. ಜನರು ಸೋಲಿಸಿ ವಿರಾಮ ಕೊಟ್ಟ ಮೇಲೆ ನಾನು ಜಾಸ್ತಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಕುಮಾರಸ್ವಾಮಿ ಅವರೊಂದಿಗೆ ಇದ್ದೇ ಇರುತ್ತೇನೆ’ ಎಂದರು.

‘ನಮ್ಮ ನಾಯಕರು ಅನುಮತಿ ಕೊಟ್ಟರೆ ಎಲ್ಲದರ ಬಗ್ಗೆಯೂ ಮುಕ್ತವಾಗಿ ಮಾತನಾಡಲು ಸಿದ್ಧವಿದ್ದೇನೆ. ಜಿಟಿಡಿ ಅವರನ್ನು ಕೋರ್ ಕಮಿಟಿ ಅಧ್ಯಕ್ಷರನ್ನಾಗಿ ಮಾಡಲಾಯಿತು. ಶಾಸಕಾಂಗ ಪಕ್ಷದ ನಾಯಕನ ಸ್ಥಾನ ತಪ್ಪಿಸಿದ್ದು ಯಾರೆಂದು ತಿಳಿಸಿದರೆ ಅವರನ್ನು ದೂರವಿಡುವ ಕೆಲಸವನ್ನು ಕುಮಾರಸ್ವಾಮಿ ಜೊತೆ ಮಾತನಾಡಿ ಮಾಡೋಣ’ ಎಂದು ಹೇಳಿದರು.

‘ಜನರೇ ಹಾಗೆ, ಅಂದುಕೊಂಡಿದ್ದು ಸಿಗದಿದ್ದರೆ ಅನ್ಯಾಯವಾಯಿತು ಎನ್ನಲು ಶುರು ಮಾಡುತ್ತಾರೆ. ಕುಮಾರಸ್ವಾಮಿ ಅವರನ್ನು ಬಯ್ಯುತ್ತಾರೆ. ಅಮೇಲೆ ಪಕ್ಷದ ಬೆನ್ನಿಗೆ ಚೂರಿ ಹಾಕಿ ಹೋಗುತ್ತಾರೆ’ ಎಂದು ಲೇವಡಿ ಮಾಡಿದರು.

‘ಹಿಂದುಳಿದ ವರ್ಗದ ನಾಯಕನಿಗೆ ಅವಕಾಶ ಆಗಲೆಂದು ಸುರೇಶ್ ಬಾಬು ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಮಾಡಲಾಯಿತು’ ಎಂದರು.

‘ಚನ್ನಪಟ್ಟಣ ಉಪ ಚುನಾವಣೆ ಪ್ರಚಾರಕ್ಕೆ ಬರುವಂತೆ ಜಿ.ಟಿ. ದೇವೇಗೌಡರನ್ನು ವರಿಷ್ಠ ದೇವೇಗೌಡರೇ ಫೋನ್ ಮಾಡಿ ಕರೆದಿದ್ದರು. ನಾವು ಚುನಾವಣೆಗೂ ಮುನ್ನ ತಯಾರಿ ಮಾಡಿಕೊಂಡಿರಲಿಲ್ಲ. ನಾನಾ ಕಾರಣದಿಂದ ಸೋಲಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.