ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕನಕದಾಸರ ಸಾಹಿತ್ಯ ಜನಮನ ತಲುಪಲಿ: ಎಚ್‌.ಎಂ.ರೇವಣ್ಣ ಅಭಿಮತ

Published : 21 ಸೆಪ್ಟೆಂಬರ್ 2024, 14:06 IST
Last Updated : 21 ಸೆಪ್ಟೆಂಬರ್ 2024, 14:06 IST
ಫಾಲೋ ಮಾಡಿ
Comments

ಮೈಸೂರು: ‘ಕನಕದಾಸರ ಸಾಹಿತ್ಯ ಜನಮನವನ್ನು ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ತಲುಪಬೇಕು’ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್‌.ಎಂ. ರೇವಣ್ಣ ತಿಳಿಸಿದರು.

ಜನಪರ ಸಾಹಿತ್ಯ ಪರಿಷತ್ತು, ಎಂ. ಶಾಂತಾ ರಾಮಕೃಷ್ಣ ಅಭಿಮಾನಿಗಳ ಸಂಘ, ಸ್ವಾಮಿ ಎಂ. ರಾಜೇಶ್‌ ಅಭಿಮಾನಿಗಳ  ಬಳಗದ ಸಹಯೋಗದಲ್ಲಿ ಇಲ್ಲಿನ ಜೆಎಲ್‌ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ‘ಕನಕಮಾರ್ಗ’ ಸಿನಿಮಾ ಪ್ರದರ್ಶನ, ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕನಕಮಾರ್ಗ’ ಚಲನಚಿತ್ರಕ್ಕೆ ರಾಜ್ಯ ಸರ್ಕಾರ ತೆರಿಗೆ ವಿನಾಯಿತಿ ನೀಡಿದ್ದು, ಇದು ಎಲ್ಲೆಡೆ ಪ್ರದರ್ಶನವಾಗಿ ಕನಕರ ಸಂದೇಶ ಪ್ರಸಾರವಾಗಬೇಕು’ ಎಂದು ಆಶಿಸಿದರು.

ಕೊಳ್ಳೇಗಾಲ ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್. ದತ್ತೇಶ್‌ಕುಮಾರ್‌ ಮಾತನಾಡಿ, ‘ಯುವಕರು ಮೊಬೈಲ್‌ ಫೋನ್‌, ಟಿವಿ, ಬೈಕ್‌, ಕಾರಿಗೆ ಹೆಚ್ಚಿನ ಆದ್ಯತೆ ನೀಡಿ ತಂದೆ– ತಾಯಿಯನ್ನು ಮರೆಯುತ್ತಿದ್ದಾರೆ’ ಎಂದು ವಿಷಾದ ವ್ಯಕ್ತಪಡಿಸಿದರು.‌

ವಿಧಾನ ಪರಿಷತ್‌ ಮಾಜಿ ಉಪ ಸಭಾಪತಿ ಮರಿತಿಬ್ಬೇಗೌಡ, ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಬಿ.ಕೆ. ರವಿ ಮಾತನಾಡಿದರು.

ಕೆ.ಆರ್‌. ನಗರದ ಕನಕ ಗುರು ಪೀಠದ ಶಿವಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಶೆಫರ್ಡ್ಸ್‌ ಇಂಡಿಯಾ ಇಂಟರ್‌ನ್ಯಾಷನಲ್‌ ರಾಷ್ಟ್ರೀಯ ಮಹಿಳಾ ಘಟಕದ ಅಧ್ಯಕ್ಷೆ ಕೆ.ಆರ್‌. ಪ್ರಭಾವತಿ, ಜನಪರ ಸಾಹಿತ್ಯ ಪರಿಷತ್‌ ಗೌರವಾಧ್ಯಕ್ಷ ಡಿ. ರವಿ, ರಾಜ್ಯಾಧ್ಯಕ್ಷ ಎಂ.ಮಹೇಶ್ ಚಿಕ್ಕಲ್ಲೂರು, ಉಪಾಧ್ಯಕ್ಷ ಸಾಲುಂಡಿ ದೊರೆಸ್ವಾಮಿ, ರಾಜ್ಯ ಮಹಿಳಾ ನಿರ್ದೇಶಕಿ ಎಂ. ಶಾಂತಾ ರಾಮಕೃಷ್ಣ, ಸ್ವಾಮಿ ಎಂ. ರಾಜೇಶ್‌ ಪಾಲ್ಗೊಂಡಿದ್ದರು.

ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ

ಕೊಪ್ಪಳ ವಿವಿ ಕುಲಪತಿ ಬಿ.ಕೆ. ರವಿ ಎಂ. ಹೇಮಾವತಿ (ಆಡಳಿತ) ರಾಜ್ಯ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ಪಾಲಿಕೆ ಮಾಜಿ ಸದಸ್ಯ ಎಂ. ಶಿವಣ್ಣ ಚಿಕ್ಕಮಗಳೂರಿನ ಜೆ.ಎಸ್. ರೇಖಾ ಹುಲಿಯಪ್ಪಗೌಡ ಮಾಜಿ ಮೇಯರ್‌ ಪುಷ್ಪಲತಾ ಚಿಕ್ಕಣ್ಣ ಎಂ. ಮಹೇಂದ್ರ ಕಾಗಿನೆಲೆ ಆರ್. ಸುಮಿತ್‌ ಎಸ್‌.ಎಂ. ಮನೋಹರ್‌ ಡಿ.ಕೆ. ಗಿರೀಶ್‌ (ಸಂಘಟನೆ) ವಿ. ಅಂಜನಪ್ಪ ಎಸ್. ಲಕ್ಷ್ಮಿ (ಸಮಾಜಸೇವೆ) ಮೈಸೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎಂ. ಮಹದೇವಸ್ವಾಮಿ (ಕಾನೂನು) ಡಿಎಚ್‌ಒ ಡಾ.ಪಿ.ಸಿ. ಕುಮಾರಸ್ವಾಮಿ. ಕೆ.ಆರ್‌. ಆಸ್ಪತ್ರೆ ವೈದ್ಯ ಪ್ರದೀಪ್‌ (ವೈದ್ಯಕೀಯ) ಮದ್ರಾಸ್‌ ವಿವಿ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಎಂ. ರಂಗಸ್ವಾಮಿ (ಸಾಹಿತ್ಯ) ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಬಿ. ಸೋಮೇಗೌಡ ಎಚ್‌. ಬ್ರಹ್ಮಲಿಂಗಯ್ಯ ಕೊಡಗು ವಿವಿ ಸಿಂಡಿಕೇಟ್‌ ಸದಸ್ಯೆ ಕಾವೇರಿ ಪ್ರಕಾಶ್ (ಶಿಕ್ಷಣ) ಮೈಸೂರು ಕೋ-ಆಪ್‌ ಬ್ಯಾಂಕ್‌ ಅಧ್ಯಕ್ಷೆ ಪಿ. ರಾಜೇಶ್ವರಿ (ಬ್ಯಾಂಕಿಂಗ್‌ ವ್ಯವಹಾರ) ಅವರಿಗೆ ‘ಕನಕಮಾರ್ಗ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT