ಸಾಲಿಗ್ರಾಮ: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕೆ.ಆರ್. ನಗರ ಬಸ್ ಡಿಪೊ ಚಾಲಕ ನಾಗೇಶ್ ಮತ್ತು ನಿರ್ವಾಹಕ ಶಿವನಂಜು ಅವರು ಕೆಎಸ್ಆರ್ಟಿಸಿ ಬಸ್ಗೆ ‘ಕನ್ನಡ ತೇರು’ ಎಂದು ನಾಮಕರಣ ಮಾಡಿ 9 ವರ್ಷಗಳಿಂದ ಭಾಷಾಭಿಮಾನ ಮೆರೆಯುತ್ತಿದ್ದಾರೆ.

ಕನ್ನಡ ಸಾಹಿತ್ಯ ಕ್ಷೇತ್ರದ ದಿಗ್ಗಜರ ಭಾವಚಿತ್ರವನ್ನು ಬಸ್ ಕಿಟಕಿ ಗಾಜುಗಳ ಮೇಲೆ ಅಂಟಿಸಿದ್ದಾರೆ. ರಾಷ್ಟ್ರಕವಿಗಳ ಭಾವಚಿತ್ರಗಳ ಜೊತೆಯಲ್ಲಿ ಯಾವ ಕೃತಿಗೆ ಪ್ರಶಸ್ತಿ ಬಂದಿದೆ ಎಂಬ ಮಾಹಿತಿಯನ್ನು ನೀಡಿದ್ದಾರೆ.

‘ಕನ್ನಡದ ತೇರು’ ಇಲ್ಲಿನ ಬಸ್ ನಿಲ್ದಾಣಕ್ಕೆ ಶುಕ್ರವಾರ ಬರುತ್ತಿದ್ದಂತೆಯೇ, ಪ್ರಯಾಣಿಕರು ಬಸ್ ಏರುವುದನ್ನು ಮರೆತು ಕನ್ನಡದ ಕವಿಗಳ ಸೂಕ್ತಿಗಳನ್ನು ಓದುತ್ತಾ ತಲ್ಲೀನರಾದರು. ಬಸ್ ಬಳಿ ನಿಂತು ಸೆಲ್ಫಿ ತೆಗೆದುಕೊಂಡು ಚಾಲಕ ಮತ್ತು ನಿರ್ವಾಹಕರಿಬ್ಬರಿಗೂ ಅಭಿನಂದನೆ ಸಲ್ಲಿಸಿ ಸಿಹಿ ಕೊಟ್ಟು ಸಂತಸ ಹಂಚಿಕೊಂಡರು.

‘ಪ್ರತಿ ವರ್ಷ ನವೆಂಬರ್ 1ರಂದು ರಾಜ್ಯೋತ್ಸವದ ಸವಿನೆನಪಿಗೆ ಇಬ್ಬರೂ ಸ್ವಂತ ಖರ್ಚಿನಲ್ಲಿ ಕನ್ನಡ ನಾಡು, ನುಡಿಯ ಹಿರಿಮೆ–ಗರಿಮೆಯನ್ನು ಬಸ್ನಲ್ಲಿ ಕಾಣಿಸುತ್ತಾರೆ. ಭಾಷೆಯ ಬಗ್ಗೆ ಅಭಿಮಾನ ಹೆಚ್ಚುವಂತೆ ಸಂದೇಶ ನೀಡುತ್ತಾರೆ. ಇದು ಸಮಾಜ ಮೆಚ್ಚುವಂತ ಕೆಲಸ’ ಎಂದು ಸಾಹಿತಿ ಹೆಗ್ಗಂದೂರು ಪ್ರಭಾಕರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಕನ್ನಡದ ಬಳಕೆ ಯುವ ಪೀಳಿಗೆಯಲ್ಲಿ ಕಡಿಮೆಯಾಗುತ್ತಿರುವುದು ಆತಂಕದ ವಿಚಾರ. ಅವರಲ್ಲಿ ಭಾಷಾಭಿಮಾನ ಹೆಚ್ಚಿಸಲು 9 ವರ್ಷಗಳಿಂದ ಕೈಲಾದ ಸೇವೆ ಮಾಡುತ್ತಿದ್ದೇವೆ’ ಎಂದು ನಾಗೇಶ್ ಮತ್ತು ಶಿವನಂಜು ಪ್ರತಿಕ್ರಿಯಿಸಿದರು.

‘ಬಸ್ ಅನ್ನು ಶೃಂಗರಿಸಲು ಡಿಪೋದಲ್ಲಿ ವಿವಿಧ ವಿಭಾಗದ ಸಿಬ್ಬಂದಿ ಕೈಜೋಡಿಸಿದ್ದರಿಂದಲೇ, ಅಭಿಮಾನಿಗಳಿಗೆ ಕನ್ನಡದ ಕಂಪನ್ನು ಹರಡಲು ಸಾಧ್ಯವಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.