ಮೈಸೂರು: ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲು ಮಸೂದೆಯು ಕೇವಲ ಚುನಾವಣಾ ಗಿಮಿಕ್. ಹೆಣ್ಣು ಮಕ್ಕಳಿಗೆ ಮೀಸಲಾತಿ ಕೊಡಬೇಕು ಎಂಬ ಪ್ರಾಮಾಣಿಕತೆ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

ಇಲ್ಲಿ ಮಂಗಳವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು ‘ ಕಾಯ್ದೆಗೆ 15 ವರ್ಷ ಆಯಸ್ಸು ಎನ್ನುತ್ತಾರೆ. ದೇಶದಲ್ಲಿ 2011ರ ಜನಗಣತಿ ವರದಿಯೇ ಇನ್ನೂ ಬಂದಿಲ್ಲ. 2021ರಲ್ಲಿ ಮತ್ತೊಂದು ಜನಗಣತಿ ನಡೆಯಬೇಕಿದ್ದು, ಅದು ಮುಂದೂಡಲ್ಪಟ್ಟಿದೆ. ಜನಗಣತಿ ಆದ ಬಳಿಕ ಅದನ್ನು ಗೆಜೆಟ್‌ನಲ್ಲಿ ಪ್ರಕಟಿಸಲು ಎರಡು ವರ್ಷ ಬೇಕು. ಆ ವರದಿ ಆಧರಿಸಿ, 2026ರಿಂದ 2028ರವರೆಗೆ ಕ್ಷೇತ್ರಗಳ ಪುನರ್ ವಿಂಗಡನೆ ಆಗಲಿದೆ. ಅದಾದ ಬಳಿಕವಷ್ಟೇ ಮಹಿಳೆಯರಿಗೆ ಮೀಸಲು ಕಲ್ಪಿಸಲು ಸಾಧ್ಯ. ಹೀಗಾಗಿ ಈ ಲೋಕಸಭೆ ಚುನಾವಣೆಗಲ್ಲ, ಮುಂದಿನ ಚುನಾವಣೆಗೂ ಮಹಿಳೆಯರಿಗೆ ಮೀಸಲು ಸಿಗದು. ಹೀಗಿರುವಾಗ ತರಾತುರಿಯಲ್ಲಿ ಮಸೂದೆಯನ್ನು ಮಂಡಿಸುವ ಅಗತ್ಯ ಏನಿತ್ತು? ಹಳೇ ಜನಗಣತಿ ವರದಿ ಆಧರಿಸಿ ಈಗಲೇ ಯಾಕೆ ಮೀಸಲು ನೀಡಲಿಲ್ಲ’ ಎಂದು ಪ್ರಶ್ನಿಸಿದರು.

‘ಇಡೀ ದೇಶದಲ್ಲಿ ಬಿಜೆಪಿ ವಿರುದ್ಧವಾದ ಶಕ್ತಿಗಳು ಈ ಸರಿ ಒಂದುಗೂಡುತ್ತಿವೆ. ಬಿಜೆಪಿಯವರು ಕಳೆದ ಒಂಭತ್ತು ವರ್ಷಗಳಲ್ಲಿ ನುಡಿದಂತೆ ನಡೆದಿಲ್ಲ. ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಸಮಾಜವನ್ನು ಒಡೆಯುವ ಕೆಲಸ ಮಾಡಿದ್ದಾರೆ. ಈ ಸತ್ಯ ಗೊತ್ತಾದ ಮೇಲೆ ಅನೇಕರು ಬಿಜೆಪಿಯೇತರ ಕೂಟದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ’ ಎಂದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.