ಮೈಸೂರು: ‘ಸಂಸದ ವಿ.ಶ್ರೀನಿವಾಸಪ್ರಸಾದ್ ಅವರು ಚುನಾವಣೆ ಸಂದರ್ಭದಲ್ಲಿ ಪಕ್ಷದಿಂದ ಹಣ ಪಡೆದಿಲ್ಲವೇ?’ ಎಂದು ಬಿಜೆಪಿಯ ವಿಧಾನಪರಿಷತ್ ಸದಸ್ಯ ಎ.ಎಚ್.ವಿಶ್ವನಾಥ್ ತಿರುಗೇಟು ನೀಡಿದರು.

‘ಹುಣಸೂರು ಉಪ ಚುನಾವಣೆಗೆಂದು ಬಿಜೆಪಿಯವರು ಕೊಟ್ಟಿದ್ದ ₹ 15 ಕೋಟಿಯಲ್ಲಿ ₹ 10 ಕೋಟಿಯನ್ನು ವಿಶ್ವನಾಥ್ ಜೇಬಿಗಿಳಿಸಿಕೊಂಡ’ ಎಂಬ ಶ್ರೀನಿವಾಸಪ್ರಸಾದ್ ಹೇಳಿಕೆಗೆ ಇಲ್ಲಿ ಶನಿವಾರ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.

‘ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆಯಾವುದೇ ಪಕ್ಷ ಹಣ ಕೊಡುವುದು–ತೆಗೆದುಕೊಳ್ಳುವುದು ಸಹಜ. ಅದು ಅವರಿಗೆ ಗೊತ್ತಿಲ್ಲದಿರುವಂಥದ್ದೇನಲ್ಲ. ಅದನ್ನು ಈಗ ಹೇಳುವಂಥದ್ದು ಏನಿತ್ತು? ಅವರು ಹಲವು ಚುನಾವಣೆಗಳನ್ನು ನಡೆಸಿದ್ದಾರೆ. ಹಾಗಾದರೆ, ಯಾರಿಂದಲೂ ಹಣ ಪಡೆದಿಲ್ಲವೇ, ಪಕ್ಷದವರು ಕೊಟ್ಟಿಲ್ಲವೇ’ ಎಂದು ಪ್ರಶ್ನಿಸಿದರು. ‘ಸುಮ್ಮನೆ ಪೆದ್ದು ಪೆದ್ದಾಗಿ ಮಾತನಾಡುವುದನ್ನೆಲ್ಲಾ ಒಪ್ಪುವುದಿಲ್ಲ’ ಎಂದರು.

‘ಪ್ರಸಾದ್ ನನ್ನ ಮಿತ್ರ. ಅವರು ಮಾಡಿರುವ ಟೀಕೆಗಳಿಗೆಲ್ಲಾ ಶೀಘ್ರದಲ್ಲೇ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ಕೊಡಲಿದ್ದೇನೆ’ ಎಂದು ತಿಳಿಸಿದರು.

ಇವನ್ನೂ ಓದಿ...

ಶ್ರೀನಿವಾಸ ಪ್ರಸಾದ್ ಅಲೆಮಾರಿಗಳ ರಾಜ: ಸ್ನೇಹಿತನ ವಿರುದ್ಧ ವಿಶ್ವನಾಥ್ ವಾಗ್ದಾಳಿ

₹15 ಕೋಟಿಯಲ್ಲಿ ₹10 ಕೋಟಿ ಜೇಬಿಗಿಳಿಸಿದ ವಿಶ್ವನಾಥ್: ಶ್ರೀನಿವಾಸ ಪ್ರಸಾದ್ ಆರೋಪ

ಬಿಜೆಪಿ ಪಥ್ಯವಾಗದಿದ್ದರೆ ಇದ್ದೀರೇಕೆ: ವಿಶ್ವನಾಥ್ಗೆ ಸಂಸದಪ್ರತಾಪ ಪ್ರಶ್ನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.