ಮೈಸೂರು: ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಜವಾಹರಲಾಲ್ ನೆಹರೂ ವಿರುದ್ಧ ಹಾಗೂ ಪ್ರಿಯಾಂಕ ಖರ್ಗೆ ಅಟಲ್ ಬಿಹಾರಿ ವಾಜಪೇಯಿ ವಿರುದ್ಧ ಟೀಕಿಸಿರುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್ ವಿಶ್ವನಾಥ್ ಹೇಳಿದರು.

ನೆಹರೂ ಅವರು ತಮ್ಮ ಅಧಿಕಾರದ ಅವಧಿಗಿಂತ ಹೆಚ್ಚು ದಿನಗಳನ್ನು ಜೈಲಿನಲ್ಲಿ ಕಳೆದರು. ಇವರ ಇಡೀ ಕುಟುಂಬವೆ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿತ್ತು. ಇಂತಹವರ ಬಗ್ಗೆ ಲಘುವಾಗಿ ಮಾತನಾಡಿರುವುದು ಸಿ.ಟಿ.ರವಿ ಅವರಿಗೆ ಮಾತ್ರವಲ್ಲ ಬಿಜೆಪಿಗೆ ಶೋಭೆ ತರುವಂತದ್ದಲ್ಲ ಎಂದು ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನೆಹರೂ ನಿಧನರಾದಾಗ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತಾಂಬೆಯ ರಾಜಕುಮಾರನೊಬ್ಬ ಭಾರತವನ್ನು ಅಗಲಿದರು ಎಂದು ಶ್ಲಾಘಿಸಿದರು. ಆಗ ವಾಜಪೇಯಿ ಮಾಡಿರುವ ಭಾಷಣವನ್ನು ರವಿ ಓದಬೇಕು ಎಂದು ಸಲಹೆ ನೀಡಿದರು.

ನೆಹರೂ ದೇಶಕ್ಕಾಗಿ ತಮ್ಮ ಆಸ್ತಿ ಬರೆದಿದ್ದಾರೆ. ರವಿ ದೇಶಕ್ಕೆ ಹತ್ತು ಪೈಸೆಯನ್ನೂ ಕೊಟ್ಟಿಲ್ಲ. ಇವರು ಬಳಸುವ ಪದಗಳನ್ನು ಗಮನಿಸಿದರೆ ಕನ್ನಡ ಕೊಲೆಯಾಗುತ್ತಿದೆ ಎಂದು ಕಿಡಿಕಾರಿದರು.

ಇದನ್ನೂ ಓದಿ: ನೆಹರು, ಇಂದಿರಾ ಪಾದದ ಧೂಳಿಗೆ ನಾನು ಸಮನಲ್ಲ, ಆದರೆ...:ರವಿ ಟ್ವೀಟ್ನಲ್ಲಿ ಏನಿದೆ?

ನೆಹರೂ ಭಾರತದ ಅಸ್ಮಿತೆ. ಯಾರನ್ನೋ ರಮಿಸಲು ಹೋಗಿ ಭಾರತದ ಅಸ್ಮಿತೆಯನ್ನು, ಗೌರವವನ್ನು ಕಳೆಯಬಾರದು. ತಕ್ಷಣ ತಮ್ಮ ಹೇಳಿಕೆಯನ್ನು ರವಿ ವಾಪಸ್ ತೆಗೆದುಕೊಂಡು ಸಮಜಾಯಿಷಿ ನೀಡಬೇಕು ಎಂದು ಒತ್ತಾಯಿಸಿದರು.

ರವಿ ಅವರಿಗೆ ಪ್ರತಿಯಾಗಿ ವಾಜಪೇಯಿ ಅವರನ್ನು ಪ್ರಿಯಾಂಕ ಖರ್ಗೆ ಟೀಕಿಸಿರುವುದು ಸರಿಯಲ್ಲ. ವಾಜಪೇಯಿ ಅವರ ಭಾಷಣಗಳನ್ನು ಕೇಳಿ ನಂತರ ಮಾತನಾಡಬೇಕು. ಕನಿಷ್ಠ ತಮ್ಮ ತಂದೆ ಧೀಮಂತ ರಾಜಕಾರಣಿ ಆಗಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ನೋಡಿಯಾದರೂ ಪ್ರಿಯಾಂಕ ಖರ್ಗೆ ಕಲಿಯಬೇಕು ಎಂದು ಕಿವಿಮಾತು ಹೇಳಿದರು.

ಈ ತರಹ ಮಾತುಗಳು ಬರುತ್ತಿದ್ದರೂ ಮಾಜಿ ಮುಖ್ಯಮಂತ್ರಿಗಳು, ಆಯಾಯ ಪಕ್ಷಗಳ ಹಿರಿಯ ನಾಯಕರು ಬಾಯಿ ಮುಚ್ಚಿ ಎಂದು ಹೇಳುತ್ತಿಲ್ಲ. ಇವರನ್ನು ಸುಮ್ಮನಿರಿಸಲು ಮಾತನಾಡುವ ನೈತಿಕತೆಯನ್ನು ನಾಯಕರು ಕಳೆದುಕೊಂಡಿದ್ದಾರೆ. ಪಕ್ಷ ರಾಜಕಾರಣಕ್ಕೆ ಸೋಲಾಗಿದ್ದು, ರಾಕ್ಷಸ ರಾಜಕಾರಣ ಆರಂಭವಾಗಿದೆ. ಪಕ್ಷದ ಆಂತರಿಕ ಪ್ರಜಾಪ್ರಭುತ್ವ ನಶಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಚಿವರು ತಮಗೆ ಇಂತದ್ದೆ ಖಾತೆ ಬೇಕು ಎಂದು ಹಟ ಹಿಡಿಯುವುದು ಸರಿಯಲ್ಲ. ಎಲ್ಲ ಖಾತೆಯಲ್ಲೂ ಕೆಲಸ ಇದೆ. ಕೇವಲ ದುಡ್ಡು ಹೆಚ್ಚಿರುವ ಖಾತೆ ಎಲ್ಲರೂ ತಮಗೆ ಬೇಕು ಎಂದರೆ ಹೇಗೆ ಎಂದು ಪ್ರಶ್ನಿಸಿದರು.

ಮೈಸೂರು ಭಾಗದಲ್ಲಿ ಹಿರಿಯರಾಗಿರುವ ಎಸ್.ಎ.ರಾಮದಾಸ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.