ಬಿಜೆಪಿ- ಜೆಡಿಎಸ್ ಜೊತೆಯಾಗಿ ಹಮ್ಮಿಕೊಂಡಿರುವ 'ಮೈಸೂರು ಚಲೋ' ಪಾದಯಾತ್ರೆಯ ಸಮಾರೋಪ ಸಮಾವೇಶದ ಪ್ರಮುಖ ಅಂಶಗಳು ಇಲ್ಲಿವೆ

ಸಮಾವೇಶದಲ್ಲಿ ಪಾಲ್ಗೊಂಡವರು

ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನದಾಸ್ ಅಗರವಾಲ್, ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ, ಪ್ರಹ್ಲಾದ ಜೋಶಿ, ಸಂಸದರಾದ ಬಸವರಾಜ ಬೊಮ್ಮಾಯಿ, ಬಿ.ವೈ. ರಾಘವೇಂದ್ರ, ಗೋವಿಂದ ಕಾರಜೋಳ,

ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ವಿಪಕ್ಷ ನಾಯಕ ಆರ್. ಅಶೋಕ್, ಪರಿಷತ್ತಿನ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಬಿಜೆಪಿ ಮುಖಂಡರಾದ ಜನಾರ್ಧನ ರೆಡ್ಡಿ, ಬಿ. ಶ್ರೀರಾಮುಲು, ಎನ್. ಮಹೇಶ್, ರಘು ಕೌಟಿಲ್ಯ, ಪ್ರತಾಪ ಸಿಂಹ ಶಾಸಕರಾದ ಮುನಿರತ್ನ, ಅರವಿಂದ ಬೆಲ್ಲದ, ಎ. ಮಂಜು, ಟಿ.ಎಸ್. ಶ್ರೀವತ್ಸ, ಜೆಡಿಎಸ್ ಮುಖಂಡರಾದ ಸಾ.ರಾ. ಮಹೇಶ್, ಅನ್ನದಾನಿ

–ಮೈಸೂರಿನಿಂದ ವರದಿ

ಬಿಜೆಪಿ- ಜೆಡಿಎಸ್ ಜೊತೆಯಾಗಿ ಹಮ್ಮಿಕೊಂಡಿರುವ 'ಮೈಸೂರು ಚಲೋ' ಪಾದಯಾತ್ರೆಯ ಸಮಾರೋಪ ಸಮಾವೇಶಕ್ಕೆ ಕ್ಷಣಗಣನೆ ಆರಂಭ ಆಗಿದೆ.

ಅರಮನೆ ಸಮೀಪದ ಕೋಟೆ ಆಂಜನೇಯಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸುವ ಮೂಲಕ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಮೆರವಣಿಗೆ ಹೊರಟಿದ್ದಾರೆ. ಅಲ್ಲಿಂದ ಸುಮಾರು ಎರಡು ಕಿ.ಮೀ. ನಡಿಗೆಯ ಮೂಲಕ ಮಹಾರಾಜ ಕಾಲೇಜು ಮೈದಾನಕ್ಕೆ ಬರಲಿದ್ದಾರೆ. ಅಲ್ಲಿ ಸಮಾವೇಶ ನಡೆಯಲಿದೆ.

ಸಮಾವೇಶದಲ್ಲಿ ಒಂದು ಲಕ್ಷದಷ್ಟು ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಸುತ್ತಮುತ್ತಲ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಈಗಾಗಲೇ ಬಂದಿದ್ದಾರೆ.

ಸಿದ್ದರಾಮಯ್ಯ ರಾಜ್ಯ ಕಂಡ ಭ್ರಷ್ಟ ಮುಖ್ಯಮಂತ್ರಿ: ಕೌಟಿಲ್ಯ ರಘು ಟೀಕೆ

ದಲಿತರು, ಹಿಂದುಳಿದ ವರ್ಗಗಳಿಗೆ ಮೀಸಲಿಟ್ಟ ಅನುದಾನವನ್ನು ದುರ್ಬಳಕೆ ಮಾಡುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕ ಕಂಡ ಭ್ರಷ್ಟ ಮುಖ್ಯಮಂತ್ರಿ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚ ರಾಜ್ಯ ಅಧ್ಯಕ್ಷ ರಘು ಕೌಟಿಲ್ಯ ಹೇಳಿದರು.

ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ ನಡೆದಿರುವ ಮೈಸೂರು ಚಲೋ ಸಮಾರೋಪ ಸಮಾವೇಶದಲ್ಲಿ ಅವರು ಮಾತನಾಡಿದರು. ಸಿದ್ದರಾಮಯ್ಯ 40 ವರ್ಷ ರಾಜಕಾರಣ ಮಾಡಿದ್ದಾರೆ. ಆದರೆ ಕನಿಷ್ಢ ಮೈಸೂರು ಜನರಿಗೆ ಒಂದು ನಿವೇಶನ ಕೊಡುವ ಯೋಜನೆ ರೂಪಿಸಲಿಲ್ಲ. ಬದಲಾಗಿ, ಜನಸಾಮಾನ್ಯರಿಗೆ ಸೇರಬೇಕಾದ ನಿವೇಶನಗಳನ್ನೇ ಕಸಿದಿದ್ದಾರೆ ಎಂದು ದೂರಿದರು.

ಭ್ರಷ್ಟ ಮಂತ್ರಿಗಳು ಅಧಿಕಾರದಿಂದ ಕೆಳಗೆ ಇಳಿಯಬೇಕು. ಈ ಭ್ರಷ್ಟಾಚಾರದ ಪಿತಾಮಹ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ದೇವರಾಜ ಅರಸು ಮಾಡಿದ್ದು ಸಾಮಾಜಿಕ ಕ್ರಾಂತಿ. ಆದರೆ ನೀವು ಮಾಡುತ್ತಿರುವುದು ಸಾಮಾಜಿಕ ಶೋಷಣೆ. ಹೀಗಾಗಿ ಅರಸು ಹೆಸರು ಹೇಳಲು ನೈತಿಕತೆ ಇಲ್ಲ ಎಂದು ಟೀಕಿಸಿದರು.

ಸಮಾಜವಾದಿ ಅಲ್ಲ ಮಜಾವಾದಿ

ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಎನ್. ರವಿಕುಮಾರ್ ಮಾತನಾಡಿ ' 14 ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಬಜೆಟ್ ಗೆ ಒಂದು ಸೈಟು ಎಂಬಂತೆ 14 ಸೈಟು ತೆಗೆದುಕೊಂಡಿದ್ದಾರೆ. ಇದೇನಾ ಸಮಾಜವಾದ' ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ತಮ್ಮ 2013ರ ಚುನಾವಣಾ ಅಫಿಡವಿಟ್ ನಲ್ಲಿ ಏಕೆ ಈ ಜಮೀನಿನ ಉಲ್ಲೇಖ ಮಾಡಲಿಲ್ಲ? ಎಂದು ಪ್ರಶ್ನಿಸಿದರು. ಸಿದ್ದರಾಮಯ್ಯ ಸಮಾಜವಾದಿ ಅಲ್ಲ ಮಜಾವಾದಿ ಎಂದು ಲೇವಡಿ ಮಾಡಿದರು.

ಜನಕ್ಕೆ ಗೊತ್ತಾದರೆ ವಾಪಸ್ ಕೊಡುವುದು. ಇಲ್ಲವಾದರೆ ಹಾಗೆಯೇ ಇಟ್ಟುಕೊಳ್ಳುವುದು ಇವರ ಹೊಸ ಭ್ರಷ್ಟಾಚಾರ. ಇವರದ್ದು ಬ್ರಹ್ಮರಾಕ್ಷಸ ಸರ್ಕಾರ ಎಂದು ಟೀಕಿಸಿದರು.

ವಿರೋಧ ಪಕ್ಷಗಳೇ ಹೊರತು ಆಡಳಿತ ಪಕ್ಷವಲ್ಲ

ಜೆಡಿಎಸ್ ಮುಖಂಡ ಬಂಡೆಪ್ಪ ಕಾಶೆಂಪೂರ ಮಾತನಾಡಿ ' ಜನಾಂದೋಲನ ಸಮಾವೇಶ ಮಾಡಬೇಕಾದ್ದು ವಿರೋಧ ಪಕ್ಷಗಳೇ ಹೊರತು ಆಡಳಿತ ಪಕ್ಷವಲ್ಲ' ಎಂದು ಟೀಕಿಸಿದರು.

' ಬಿಜೆಪಿ- ಜೆಡಿಎಸ್ ಅವಧಿಯ ಹಗರಣಗಳನ್ನು ಬಿಚ್ಚಿಡುತ್ತೇನೆ ಎನ್ನುತ್ತೀರಿ. ನಾವು ಆಡಳಿತದಲ್ಲಿ ಇದ್ದಾಗ ನೀವೇ ವಿರೋಧ ಪಕ್ಷದ ನಾಯಕರಾಗಿದ್ದೀರಿ. ಆಗ ಏನು ಮಾಡುತ್ತಿದ್ದೀರಿ' ಎಂದು ಪ್ರಶ್ನಿಸಿದರು.

'ಕುಮಾರಸ್ವಾಮಿ ಪಕ್ಷದಿಂದ 19 ಶಾಸಕರು ಗೆದ್ದಿರಬಹುದು. ಸಂಸತ್ತಿಗೆ ಇಬ್ಬರೇ ಆಯ್ಕೆ ಆಗಿದ್ದರೂ ಮೋದಿ ಅವರು ಗೌರವಿಸಿ ಕೇಂದ್ರ ಸಚಿವ ಸ್ಥಾನ ಕೊಟ್ಟಿದ್ದಾರೆ. ನಿಮ್ಮ ಹೈಕಮಾಂಡ್ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹೋದರೂ ಭೇಟಿಗೆ ಅವಕಾಶ ನೀಡುವುದಿಲ್ಲ' ಎಂದು ಟೀಕಿಸಿದರು.

ಮುಂದಿನ ವಿಧಾನಸಭೆ ಚುನಾವಣೆಯನ್ನು ಬಿಜೆಪಿ- ಜೆಡಿಎಸ್ ಒಟ್ಟಾಗಿಯೇ ಎದುರಿಸಲಿವೆ ಎಂದರು.

ದಲಿತರಿಗೆ ಮೀಸಲಿಟ್ಟ 25 ಸಾವಿರ ಕೋಟಿ ಹಣ ಗುಳುಂ

ಮಾಜಿ ಸಚಿವ ಎನ್. ಮಹೇಶ್ ಮಾತನಾಡಿ ' ದಲಿತರಿಗೆ ಮೀಸಲಿಟ್ಟ 25 ಸಾವಿರ ಕೋಟಿ ಹಣವನ್ನು ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಸಿದೆ. ಇದರಿಂದ ಗಂಗಾ ಕಲ್ಯಾಣ, ವಿದ್ಯಾರ್ಥಿ ಸ್ಕಾಲರ್ ಶಿಪ್, ವಿದ್ಯಾರ್ಥಿನಿಲಯಗಳಿಗೆ ಹಣವಿಲ್ಲ. ಪ್ರಬುದ್ಧ ಯೋಜನೆಯನ್ನು ಸರ್ಕಾರ ರದ್ದು ಮಾಡಿದೆ. ಹೀಗಾಗಿ ಈ ಸರ್ಕಾರ ದಲಿತ ವಿರೋಧಿ' ಎಂದು ಟೀಕಿಸಿದರು.

' ವಾಲ್ಮೀಕಿ ಅಭಿವೃದ್ಧಿ ನಿಗಮದ 87 ಕೋಟಿ ರೂಪಾಯಿ ದುರ್ಬಳಕೆಯನ್ನು ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ಹಣಕಾಸು ಸಚಿವರ ಗಮನಕ್ಕೆ ಬಾರದೆಯೇ ಇದು ಸಾಧ್ಯವೇ' ಎಂದು ಪ್ರಶ್ನಿಸಿದರು.

' ಕೆಸರೆ ಗ್ರಾಮದಲ್ಲಿ ಸಿದ್ದರಾಮಯ್ಯ ಕುಟುಂಬ ಜಮೀನು ಖರೀದಿಸಿದ್ದ ಜಮೀನು ಮೂಲತಃ ದಲಿತರದ್ದು. ನಿಂಗನಿಗೆ ಯಾರು ಹುಟ್ಟಿದ್ದಾರೋ ಅವರಿಗೆ ಆ ಬದಲಿ ನಿವೇಶನಗಳು ಸೇರಬೇಕು' ಎಂದರು.

14 ವರ್ಷದ ಹಿಂದಿನ ಪಾದಯಾತ್ರೆ ನೆನೆದ ಶ್ರೀರಾಮುಲು

ಮೈಸೂರು: ಮೈಸೂರು ಚಲೋ ಪಾದಯಾತ್ರೆಯ ಸಮಾರೋಪ ವೇದಿಕೆಗೆ ಬಿ.ಎಸ್. ಯಡಿಯೂರಪ್ಪ ಜೊತೆಗೆ ಬಿ.ಶ್ರೀರಾಮುಲು ಹಾಗೂ ಜನಾರ್ಧನ ರೆಡ್ಡಿ ಒಟ್ಟಿಗೆ ಪ್ರವೇಶ ಕೊಟ್ಟಿದ್ದು, ಒಟ್ಟಿಗೆ ಕೈ ಬೀಸಿದ್ದು ವಿಶೇಷ ವಾಗಿತ್ತು.

ಈ ಸಂದರ್ಭ ಮಾತನಾಡಿದ ಮಾಜಿ ಸಚಿವ ಬಿ. ಶ್ರೀರಾಮುಲು ಬಳ್ಳಾರಿ ಪಾದಯಾತ್ರೆಯನ್ನು ನೆನೆದರು.

' ಬಳ್ಳಾರಿಗೆ 14 ವರ್ಷದ ಹಿಂದೆ ಇದೇ ಸಿದ್ದರಾಮಯ್ಯ ಪಾದಯಾತ್ರೆ ನಡೆಸಿದ್ದಾಗ ಯಡಿಯೂರಪ್ಪ ಸ್ವಯಂಪ್ರೇರಿತರಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಇಂದು ಕಾಲ ಬದಲಾಗಿದ್ದು, ಅದೇ ಸಿದ್ದರಾಮಯ್ಯ ಭ್ರಷ್ಟಾಚಾರದಲ್ಲಿ ಸಿಲುಕಿದ್ದಾರೆ. ಎಲ್ಲಿಯವರೆಗೆ ಅವರು ರಾಜೀನಾಮೆ ಕೊಡುವುದಿಲ್ಲವೋ ಅಲ್ಲಿಯವರೆಗೂ ನಮ್ಮ ಹೋರಾಟ ನಿಲ್ಲದು. ಎಂತಹ ಬಂಡೆಯನ್ನು ಪುಡಿಪುಡಿ ಮಾಡುವ ಶಕ್ತಿ ನಮ್ಮಲ್ಲಿದೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.