ಮೈಸೂರು: ‘ಕನ್ನಡದ ನವ ತಲೆಮಾರಿನ ಲೇಖಕರು, ಓದುಗರನ್ನು ಪ್ರಭಾವಿಸಿದ ಲೇಖಕ ಕೆ.ಪಿ.ಪೂರ್ಣಚಂದ್ರ ತೇಜಸ್ವಿ’ ಎಂದು ಪ್ರೊ.ಎಸ್. ಶಿವರಾಜಪ್ಪ ಹೇಳಿದರು.

ಅಗ್ರಹಾರದ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ‘ಪೂರ್ಣಚಂದ್ರ ತೇಜಸ್ವಿ ನೆನಪು’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕಥೆ, ಕಾದಂಬರಿಗಳಲ್ಲಿ ಪ್ರಕೃತಿ ಹಾಗೂ ವಿಜ್ಞಾನದ ವಿಸ್ಮಯಗಳನ್ನು ಓದುಗರಿಗೆ ದಾಟಿಸಿದರು. ಛಾಯಾಗ್ರಾಹಕ, ಪಕ್ಷಿ ವಿಜ್ಞಾನಿ, ಪ್ರಕಾಶಕ, ವರ್ಣಚಿತ್ರಕಾರ ಮತ್ತು ಪರಿಸರವಾದಿಯಾಗಿಯೂ ಪ್ರಸಿದ್ಧರಾಗಿದ್ದರು’ ಎಂದರು.

ಉಪ ಪ್ರಾಂಶುಪಾಲ ಜಿ.ಪ್ರಸಾದಮೂರ್ತಿ ಮಾತನಾಡಿ, ‘ತೇಜಸ್ವಿ ಬರಹದಲ್ಲಿ ಸ್ವಂತಿಕೆ ಮತ್ತು ಸರಳತೆಯಿತ್ತು. ತಂದೆ ಕುವೆಂಪು ಅವರನ್ನು ಮೀರಿಸಿದ ವ್ಯಕ್ತಿತ್ವ ಅವರದು. ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದ ಸಾಕ್ಷಿಪ್ರಜ್ಞೆಯಾಗಿದ್ದರು.

ಎನ್.ಜಿ.ಲೋಕೇಶ್, ಬಿ.ಆರ್. ಶುಭ ಅರಸ್, ಎಂ.ಎಸ್.ಸಂಧ್ಯಾರಾಣಿ, ಎಚ್.ಬಿ.ಬಸಪ್ಪ, ಟಿ.ಎ.ಚಂದನಾ, ದಿವ್ಯಾ, ಅನುಷಾ, ಮೇಘಾ, ವಿವರ್ಷ, ಗಗನಾ, ಕೃತಿಕಾ, ಲಖಿತ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.