ನಂಜನಗೂಡು: ‘ನಗರಸಭೆ ವ್ಯಾಪ್ತಿಗೆ ಸೇರಿಸಲಾಗಿರುವ ದೇವಿರಮ್ಮನಹಳ್ಳಿ, ದೇಬೂರು ಗ್ರಾ.ಪಂ ವ್ಯಾಪ್ತಿಯ 82 ಬಡಾವಣೆಗಳಿಗೆ ನಗರಸಭೆ ಆಡಳಿತ ಇ ಖಾತೆ ಮಾಡಿಕೊಡುವುದನ್ನು ಸ್ಥಗಿತಗೊಳಿಸಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ’ ಎಂದು ನಗರಸಭಾ ಸದಸ್ಯ ಕಪಿಲೇಶ್ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು, ‘ಗ್ರಾ.ಪಂ ವ್ಯಾಪ್ತಿಯಲ್ಲಿದ್ದ 82 ಬಡಾವಣೆಗಳನ್ನು ಕಳೆದ 3 ವರ್ಷಗಳ ಹಿಂದೆ ನಗರಸಭೆ ವ್ಯಾಪ್ತಿಗೆ ಸೇರಿಸಿ ದಾಖಲೆ ಹಸ್ತಾಂತರಿಸಲಾಗಿದೆ. ನಗರಸಭೆ ಆಡಳಿತ ಅವುಗಳೆಲ್ಲವು ನಿಯಮಬದ್ಧವಲ್ಲದ ಬಡಾವಣೆಗಳು. ದಾಖಲಾತಿ ಸರಿಯಿಲ್ಲ ಎಂಬ ನೆಪಹೊಡ್ಡಿ ಕಳೆದ ವರ್ಷ ಮಾರ್ಚ್‍ನಿಂದ ಖಾತೆ ಮಾಡಿಕೊಡುವುದನ್ನು ಸ್ಥಗಿತಗೊಳಿಸಿದ್ದಾರೆ’ ಎಂದು ತಿಳಿಸಿದರು.

ಈ ಬಗ್ಗೆ ಜಿಲ್ಲಾಧಿಕಾರಿಗಳು ಸಮಸ್ಯೆ ಪರಿಹರಿಸಲು ಕ್ರಮವಹಿಸಬೇಕು. ಶಾಸಕರು ಸದನದಲ್ಲಿ ಧ್ವನಿ ಎತ್ತಬೇಕು ಎಂದು ಒತ್ತಾಯಿಸಿದರು.

ದೇವಿರಮ್ಮನಹಳ್ಳಿ ಜಿ.ಬಸವರಾಜು ಮಾತನಾಡಿ, ‘ಬಡಾವಣೆಗಳಿಗೆ ಮೂಡಾ ನಕಾಶೆ ಅನುಮೋದನೆಗೊಳಿಸಿಲ್ಲ ಎಂಬುದನ್ನು ನಗರಸಭೆ ನೆಪ ಮಾಡಿಕೊಂಡಿದೆ. ಗ್ರಾ.ಪಂ ವ್ಯಾಪ್ತಿಯಲ್ಲಿದ್ದ ಸಂದರ್ಭದಲ್ಲಿ ಮಾಲೀಕರೊಡನೆ ಒಪ್ಪಂದ ಕರಾರಿನಲ್ಲಿ ಮನೆ ನಿರ್ಮಿಸಲು ಪರವಾನಗಿ ನೀಡಲಾಗುತಿತ್ತು. ನಗರಸಭೆಗೆ ಹಸ್ತಾಂತರಿಸಿದ ನಂತರ ಕೆಲವು ತಾಂತ್ರಿಕ ದೋಷಗಳಿಂದ ಖಾತೆ ನೀಡುವುದನ್ನು ಸ್ಥಗಿತಗೊಳಿಸಿದ್ದಾರೆ. ಅಕ್ರಮ ಸಕ್ರಮದಡಿಯಲ್ಲಿ ಎಲ್ಲವನ್ನು ಸಕ್ರಿಯೆಗೊಳಿಸಿ ಸಮಸ್ಯೆ ಪರಿಹರಿಸಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಘವೇಂದ್ರ, ಮಧುರಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.