ಮೈಸೂರು: ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಖ್ಯಾತ ಚಲನಚಿತ್ರ ನಟ ದಿವಂಗತ ಪುನೀತ್ ರಾಜ್ಕುಮಾರ್ ಸ್ಮರಣೆಯಲ್ಲಿ 'ಅಪ್ಪು ಎಕ್ಸ್ಪ್ರೆಸ್' ಆಂಬ್ಯುಲೆನ್ಸ್ ಅನ್ನು ನಗರದ ಮಂಡಿ ಮೊಹಲ್ಲಾದ ಸಿಎಸ್ಐ ಹೋಲ್ಡ್ಸ್ವರ್ತ್ ಸ್ಮಾರಕ (ಮಿಷನ್) ಆಸ್ಪತ್ರೆಗೆ ಶನಿವಾರ ಕೊಡುಗೆ ನೀಡಿದರು.

ನಂತರ ಮಾತನಾಡಿದ ಅವರು, ಈ ಆಸ್ಪತ್ರೆಗೆ ಮುಂದಿನ ದಿನಗಳಲ್ಲಿ ಬ್ಲಡ್ ಬ್ಯಾಂಕ್ ಕೂಡ ಸ್ಥಾಪಿಸಿಕೊಡಲಾಗುವುದು. ಉದ್ಘಾಟನೆ ಕಾರ್ಯಕ್ರಮದಲ್ಲಿ ರಕ್ತದಾನವನ್ನೂ ಮಾಡುತ್ತೇನೆ ಎಂದು ತಿಳಿಸಿದರು.

'ನನ್ನ ಪ್ರಕಾಶ್ ರಾಜ್ ಪ್ರತಿಷ್ಠಾನದಿಂದಅಪ್ಪು ಎಕ್ಸ್ಪ್ರೆಸ್' ಹೆಸರಿನ ಆಂಬ್ಯುಲೆನ್ಸ್ಗಳನ್ನು ರಾಜ್ಯದ ಎಲ್ಲ ಜಿಲ್ಲೆಗಳಿಗೂ ಒಂದು ವರ್ಷದೊಳಗೆ ನೀಡುವ ಯೋಜನೆ ಇದೆ. ಇದಕ್ಕಾಗಿ ಕೈಜೋಡಿಸುವ ಸ್ನೇಹಿತರಿದ್ದಾರೆ. ಯಾರೂ ಕೊಡದಿದ್ದರೂ ನಾನು ದುಡಿಯುವ ಹಣದಲ್ಲೇ ಈ ಸತ್ಕಾರ್ಯವನ್ನು ಮಾಡುತ್ತೇನೆ' ಎಂದು ಹೇಳಿದರು.

'ಬಾಲ್ಯದಿಂದಲೂ ನೋಡಿದ ಹುಡುಗ ಅಪ್ಪು. ಸಮಾಜಮುಖಿಯಾಗಿ ಬೆಳೆದ ವ್ಯಕ್ತಿ. ಆ ಎತ್ತರಕ್ಕೆ ಬೆಳೆದ ವ್ಯಕ್ತಿಯಿಂದ ಇನ್ನೊಂದಷ್ಟು ಕೆಲಸಗಳು ಆಗಬೇಕಾಗಿತ್ತು. ಆ ಜನಪರ ವ್ಯಕ್ತಿತ್ವವನ್ನು ಅನುಕರಿಸುವ ಭಾಗವಾಗಿ ಪ್ರತಿಷ್ಠಾನದಿಂದ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ' ಎಂದರು.

ಇದನ್ನೂ ಓದಿ:ಪುನೀತ್ಗೆ ನ. 1ರಂದು ಕರ್ನಾಟಕ ರತ್ನ ಪ್ರದಾನ

'ಕೋವಿಡ್ ಸಂಕಷ್ಟದ ಸಮಯದಲ್ಲಿ ನಾವು ಸೇವಾ ಕಾರ್ಯ ಮಾಡುತ್ತಿದ್ದೆವು. ಅದನ್ನು ಗಮನಿಸಿ ₹ 2 ಲಕ್ಷವನ್ನು ನಮ್ಮ ಪ್ರತಿಷ್ಠಾನಕ್ಕೆ ಕೊಟ್ಟಿದ್ದರು. ಅವರು ಅಗಲಿರುವ ಈ ಸಂದರ್ಭದಲ್ಲಿ ಅವರ ಇಂಗಿತ ಏನಿತ್ತು ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅವರು ಇದ್ದಿದ್ದರೆ ಮಾಡಬಹುದಾಗಿದ್ದ ಕೆಲಸಗಳನ್ನು ಮಾಡುವ ಮೂಲಕ ಅವರನ್ನು ಉಳಿಸಿಕೊಳ್ಳಬೇಕು' ಎಂದು ಹೇಳಿದರು.

'ಆ ಕ್ಷಣದಲ್ಲಿ ಆಂಬ್ಯುಲೆನ್ಸ್ ಇದ್ದಿದ್ದರೆ ಪುನೀತ್ ಬದುಕುತ್ತಿದ್ದರೋ ಏನೋ? ಹೀಗಾಗಿ ಜನರ ಅನುಕೂಲಕ್ಕಾಗಿ ಆಂಬ್ಯುಲೆನ್ಸ್ ಕೊಡುತ್ತಿದ್ದೇವೆ. ಬಡವರಿಗಾಗಿ ಕೆಲಸ ಮಾಡುತ್ತಿರುವುದರಿಂದಾಗಿ ಮಿಷನ್ ಆಸ್ಪತ್ರೆಯನ್ನು ಆಯ್ಕೆ ಮಾಡಿದೆವು' ಎಂದು ಪ್ರತಿಕ್ರಿಯಿಸಿದರು.

'ಅಪ್ಪು ಬಗ್ಗೆ ಕೇವಲ ಮಾತನಾಡುತ್ತಾ ಕುಳಿತರೆ ಸಾಲದು. ಅವರ ಅಗಲಿಕೆಯ ನೋವನ್ನು ಮಾಗಿಸುವ ಕೆಲಸವಾಗಿ ಈ ಸೇವಾ ಕಾರ್ಯದಲ್ಲಿ ತೊಡಗಿದ್ದೇನೆ. ಈ ಮೂಲಕ, ಜನಪರ ಕಾರ್ಯ ಮಾಡಿದ ಅಪ್ಪುಗೆ ಧನ್ಯವಾದ ಅರ್ಪಿಸುತ್ತಿದ್ದೇನೆ. ಆ ವ್ಯಕ್ತಿತ್ವದ ಮುಂದೆ ನಾವೆಲ್ಲರೂ ಸಣ್ಣವರು' ಎಂದರು.

ಚಲನಚಿತ್ರ ನಿರ್ದೇಶಕ ಸಂತೋಷ್ ಆನಂದ್ರಾಮ್, 'ಮಾನವೀಯತೆಯ ಇನ್ನೊಂದು ಮುಖವಾಗಿ ಅಪ್ಪು ನಮ್ಮ ನಡುವೆ ಉಳಿದಿದ್ದಾರೆ. ಅವರ ಹೆಸರಿನಲ್ಲಿ ಎಲ್ಲ ಜಿಲ್ಲೆಗಳಿಗೂ ಆಂಬ್ಯುಲೆನ್ಸ್ ಕೊಡುತ್ತಿರುವ ಪ್ರಕಾಶ್ ರಾಜ್ ಅವರ ಉಪಕ್ರಮವು ಮಾದರಿಯಾಗಿದೆ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.