ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ಫಲ–ಪುಷ್ಪ ಪ್ರದರ್ಶನಕ್ಕೆ ಸಿದ್ಧತೆ ನಡೆದಿದೆ. ಈ ಬಾರಿ ಭಾರತಕ್ಕೆ ಜಾಗತಿಕವಾಗಿ ದೊಡ್ಡ ಹೆಸರು ತಂದುಕೊಟ್ಟ ‘ಚಂದ್ರಯಾನ’ದ ಯಶಸ್ಸನ್ನು ಬಿಂಬಿಸುವ ಕಲಾಕೃತಿಯು ಸಾರ್ವಜನಿಕರನ್ನು ಕೈಬೀಸಿ ಕರೆಯಲಿದೆ. ಈ ಮೂಲಕ ವಿಜ್ಞಾನಿಗಳ ಶ್ರಮವನ್ನು ಗೌರವಿಸಲು ಉದ್ದೇಶಿಸಲಾಗಿದೆ.

ನಗರದ ಹಾರ್ಡಿಂಜ್ ವೃತ್ತ ಸಮೀಪದಲ್ಲಿರುವ ಕುಪ್ಪಣ್ಣ ಉದ್ಯಾನದಲ್ಲಿ ಹೂವುಗಳ ಚೆಲುವನ್ನು ಪ್ರವಾಸಿಗರು, ಸಂದರ್ಶಕರು ಕಣ್ತುಂಬಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ತೋಟಗಾರಿಕೆ ಇಲಾಖೆಯ ವಿವಿಧ ನರ್ಸರಿಗಳಲ್ಲಿ 35ಕ್ಕೂ ಹೆಚ್ಚು ರೀತಿಯ ಹೂವುಗಳ 85 ಸಾವಿರ ಸಸಿಗಳನ್ನು ಬೆಳೆಸಿದ್ದು, ಅವುಗಳನ್ನು ಪ್ರದರ್ಶಿಸಲಾಗುವುದು. ಇದಲ್ಲದೇ, ಮಾದರಿಗಳಿಗೆ ಬಿಡಿ ಹೂವುಗಳನ್ನು ಬಳಸಲಾಗುತ್ತದೆ. ಹಸಿರು ಚಪ್ಪರವನ್ನೂ ರೂಪಿಸಲಾಗುವುದು.

ಊಟಿ, ಪುಣೆ, ಕೋಲ್ಕತ್ತಾದಿಂದಲೂ 35ಸಾವಿರ ಹೂಕುಂಡಗಳನ್ನು ತರಿಸಲಾಗುತ್ತಿದೆ. ಅಲ್ಲಿಂದ ವಿಶೇಷ ಹೂವುಗಳ ಗಿಡಗಳನ್ನು ತರಿಸಲು ಆದ್ಯತೆ ನೀಡಲಾಗಿದೆ. ಮೈಸೂರು ಅರಮನೆ, ಸ್ವಾಮಿ ವಿವೇಕಾನಂದ ಪ್ರತಿಮೆ, ವಿಧಾನಸೌಧ ಮೊದಲಾದ ಮಾದರಿಗಳನ್ನೂ ಹೂವುಗಳಲ್ಲಿ ರೂಪಿಸುವ ಯೋಜನೆಯನ್ನು ಹೊಂದಲಾಗಿದೆ. ರಾಜ್ಯ ಸರ್ಕಾರದ ‘ಪಂಚ ಗ್ಯಾರಂಟಿ’ಗಳಲ್ಲಿ ಯಾವುದಾರೊಂದನ್ನು ಬಿಂಬಿಸುವ ಪ್ರಸ್ತಾವವಿದೆ ಎಂದು
ತಿಳಿದುಬಂದಿದೆ.

ಎಲ್ಲ ವರ್ಗದವರನ್ನೂ ಸೆಳೆಯಲು: ಈ ಬಾರಿ ಅ.15ರಿಂದ 24ರವರೆಗೆ ದಸರಾ ಮಹೋತ್ಸವ ನಡೆಯಲಿದೆ. ದಸರಾ ಉದ್ಘಾಟನೆಯಂದೇ ಆರಂಭಗೊಳ್ಳುವ ಫಲಪುಷ್ಪ ಪ್ರದರ್ಶನವನ್ನು ಅ.25 ಅಥವಾ 26ರವರೆಗೂ ಮುಂದುವರಿಸಲು ಯೋಜಿಸಲಾಗಿದೆ. ವಿವಿಧ ಬಗೆಯ ಹಣ್ಣುಗಳನ್ನೂ ಬಳಸಿ ಕಲಾಕೃತಿಗಳನ್ನು ಸಿದ್ಧಪಡಿಸಿ ಪ್ರದರ್ಶಿಸಲಾಗುವುದು. ಈ ಮೂಲಕ ಮಹಿಳೆಯರು, ಮಕ್ಕಳು, ವೃದ್ಧರು, ಯುವಜನರು ಸೇರಿದಂತೆ ಎಲ್ಲ ವರ್ಗದವರನ್ನೂ ಸೆಳೆಯಲು ಯೋಜಿಸಲಾಗಿದೆ.

ಹೋದ ವರ್ಷ ಹೂಗಳ ನಡುವೆ ಚಲನಚಿತ್ರ ನಟ ದಿವಂಗತ ಪುನೀತ್ ರಾಜ್ಕುಮಾರ್ ನೆನಪು ಹಾದು ಹೋಗುವಂತಹ ರೂಪಕವನ್ನು ಸಿದ್ಧಪಡಿಲಾಗಿತ್ತು. ಅಪ್ಪುಗೆ ಪ್ರಿಯವಾದ, ವರನಟ ರಾಜ್ಕುಮಾರ್ ಹುಟ್ಟೂರು ಚಾಮರಾಜನಗರ ಜಿಲ್ಲೆಯ ಗಾಜನೂರಿನಲ್ಲಿರುವ ಮನೆಯ ಮಾದರಿಯನ್ನು ರೂಪಿಸಲಾಗಿತ್ತು. ಸುತ್ತಲೂ ಇದ್ದ ಪ್ರತಿಮೆ ಕಲಾಕೃತಿಗಳು, ನಗು ಮೊಗದ ರಾಜಕುಮಾರನ ನೆನಪನ್ನು ಅವು ತಂದುಕೊಟಿದ್ದವು. ಗಾಜಿನ ಮನೆಯಲ್ಲಿ 3.5 ಲಕ್ಷ ಗುಲಾಬಿ, ಸೇವಂತಿ ಹೂಗಳಲ್ಲಿ ರಾಷ್ಟ್ರಪತಿ ಭವನದ ಮಾದರಿಯನ್ನು ಸಿದ್ಧಪಡಿಸಲಾಗಿತ್ತು. ದಸರಾ ಉದ್ಘಾಟನೆಗೆ ಮೊದಲ ಬಾರಿಗೆ ರಾಷ್ಟ್ರಪತಿಯೊಬ್ಬರು ಆಗಮಿಸಿದ್ದ ಕಾರಣದಿಂದ, ತೋಟಗಾರಿಕಾ ಇಲಾಖೆಯು 50 ಅಡಿ ಅಗಲ, 30 ಅಡಿ ಉದ್ದ, 27 ಅಡಿ ಎತ್ತರದ ಭವನದ ಪ್ರತಿಕೃತಿಯನ್ನು ಪುಷ್ಪಗಳಿಂದ ಅಲಂಕರಿಸಿತ್ತು. ವಯಸ್ಕರಿಗೆ ₹ 30 ಹಾಗೂ ಮಕ್ಕಳಿಗೆ ₹ 20 ಪ್ರವೇಶ ದರ ನಿಗದಿಪಡಿಸಲಾಗಿತ್ತು. ಪ್ರಾಯೋಜಕತ್ವ ಪಡೆದಿದ್ದ ಕೆಲವು ಖಾಸಗಿ ಕಂಪನಿಗಳವರು ತಮ್ಮ ಉತ್ಪನ್ನಗಳ ಪ್ರಚಾರಕ್ಕೆ ಮಾದರಿಗಳನ್ನು ಹೂವುಗಳಲ್ಲೇ ಮಾಡಿ ಪ್ರದರ್ಶಿಸಿದ್ದವು. ಈ ಬಾರಿಯೂ ಪ್ರಾಯೋಜಕತ್ವ ಪಡೆಯಲು ಯೋಜಿಸಲಾಗಿದೆ ಎಂದು ಇಲಾಖೆಯ ಮೂಲಗಳು
ತಿಳಿಸಿವೆ.

ಉದ್ಯಾನದ ಹೊಸ ಮತ್ತು ಹಳೆಯ ಗಾಜಿನ ಮನೆಯಲ್ಲಿ ಪ್ರದರ್ಶನ ಇರಲಿದೆ. ನಡಿಗೆ ಪಥ ಸೇರಿದಂತೆ ಆಯ್ದ ಸ್ಥಳದಲ್ಲ್ಲಿಕುಂಡಗಳನ್ನು ಜೋಡಿಸಿ ಉದ್ಯಾನದ ಮೆರುಗು ಹೆಚ್ಚಿಸಲಾಗುವುದು. ಕೇಂದ್ರ ಸಸ್ಯಗಾರ, ಕುಪ್ಪಣ್ಣ ಉದ್ಯಾನ, ಸರ್ಕಾರಿ ಅತಿಥಿ ಗೃಹ, ಜಲದರ್ಶನಿ ವಿಭಾಗ, ಕರ್ಜನ್ ಪಾರ್ಕ್ ಮತ್ತು ದಸರಾ ವಸ್ತುಪ್ರದರ್ಶನದಲ್ಲಿರುವ ತೋಟಗಾರಿಕೆ ವಿಭಾಗಗಳಲ್ಲಿ ಸಸಿಗಳನ್ನು ಬೆಳೆಸಲಾಗುತ್ತಿದ್ದು, ಅವುಗಳನ್ನು ಆಕರ್ಷಕವಾಗಿ
ಜೋಡಿಸಲಾಗುತ್ತದೆ.

Highlights - 35ಕ್ಕೂ ಹೆಚ್ಚು ವಿವಿಧ ರೀತಿಯ ಹೂಕುಂಡಗಳು ಹೊರ ರಾಜ್ಯದಿಂದಲೂ ತರಿಸಲು ಯೋಜನೆ ವಿವಿಧ ನರ್ಸರಿಗಳಲ್ಲಿ ಸಸಿಗಳು ಸಿದ್ಧ

ಕುಪ್ಪಣ್ಣ ಉದ್ಯಾನದಲ್ಲಿ ನಡೆಯಲಿರುವ ದಸರಾ ಫಲಪುಷ್ಪ ಪ್ರದರ್ಶನಕ್ಕೆ ಇಲಾಖೆಯಿಂದ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
-ಮಂಜುನಾಥ ಅಂಗಡಿ, ಉಪ ನಿರ್ದೇಶಕ ತೋಟಗಾರಿಕೆ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.