ತಲಕಾಡು: ಇಲ್ಲಿನ ಹೊಸ ಬೀದಿಯ ಪೊಲೀಸ್ ಠಾಣೆ ಮುಂಭಾಗದ ಮುಖ್ಯ ವೃತ್ತದಲ್ಲಿ ಶುಕ್ರವಾರ ನಾಯಿ ಕಚ್ಚಿ ಆರು ಜನರಿಗೆ ಗಾಯವಾಗಿದ್ದು, ಕೆಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ರಸ್ತೆಯಲ್ಲಿ ಮುಂಜಾನೆಯಿಂದ ಜನರ ಮೇಲೆ ಎರಗಿದೆ. ಕಾಲೇಜು ವಿದ್ಯಾರ್ಥಿ ಮನೋಜ್, ಬೈಕ್ನಲ್ಲಿ ಹೋಗುತ್ತಿದ್ದ ಸವಾರರಿಗೂ ಕಚ್ಚಿ ಗಾಯಗೊಳಿಸಿದೆ. ನಾಯಿ ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ ಬಿದ್ದು, ತಲೆಗೆ ಪೆಟ್ಟಾಗಿ ಅರುಂಧತಿ ನಗರದ ನಿವಾಸಿ ಶಂಕರ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಗ್ರಾಮದ ಜನರು ನಾಯಿ ದಾಳಿಗೆ ಬೆಚ್ಚಿದ್ದು, ನಾಯಿಗಳನ್ನು ರಸ್ತೆಯಲ್ಲಿ ಕಂಡು ಹೆದರಿ ಓಡುವ ಪರಿಸ್ಥಿತಿ ತಲೆದೂರಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು’ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಎಚ್.ರಾಜು ಹಾಗೂ ಗ್ರಾಮಸ್ಥರಾದ ಮಾದೇವ್, ಸೋಮಣ್ಣ ಅಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.