ನಂಜನಗೂಡು: ತಾಲ್ಲೂಕಿನ ಮಡುವಿನಹಳ್ಳಿ ಗ್ರಾಮದಲ್ಲಿ ವ್ಯಕ್ತಿಯ ಕತ್ತು ಕೊಯ್ದು ಕೊಲೆ ಮಾಡಿ, ವಾಮಾಚಾರಕ್ಕಾಗಿ ಕೊಲೆ ಎಂದು ಬಿಂಬಿಸಿದ್ದ ಪ್ರಕರಣವನ್ನು ಹುಲ್ಲಹಳ್ಳಿ ಪೊಲೀಸರು ಭೇದಿಸಿದ್ದು, ಕೊಲೆಯಾದ ಸದಾಶಿವ ಅವರ ಪತ್ನಿ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಮಲ್ಕುಂಡಿ ಗ್ರಾಮದ ರಾಜೇಶ್ವರಿ( 35), ಶಿವಯ್ಯ (33), ರಂಗಸ್ವಾಮಿ (38) ಬಂಧಿತ ಆರೋಪಿಗಳು.

ಮಡುವಿನಹಳ್ಳಿ ಗ್ರಾಮದ ಶಾಲೆಯ ಹಿಂಭಾಗದಲ್ಲಿ ಅ.18ರಂದು ಸದಾಶಿವನ (45) ಕತ್ತನ್ನು ಚಾಕುವಿನಿಂದ ಕೊಯ್ದು ಕೊಲ್ಲಲಾಗಿತ್ತು. ಶವದ ಪಕ್ಕದಲ್ಲಿ ಕುಂಕುಮ, ನಿಂಬೆ ಹಣ್ಣು, ನೂರು ರೂಪಾಯಿ ನೋಟನ್ನು ಇಟ್ಟು ವಾಮಾಚಾರಕ್ಕೆ ಬಲಿ ಕೊಟ್ಟಿರುವ ರೀತಿಯಲ್ಲಿ ಬಿಂಬಿಸಲಾಗಿತ್ತು, ಪ್ರಕರಣದ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಉಪ ವರಿಷ್ಠಾಧಿಕಾರಿ ನಾಗೇಶ್, ಡಿವೈಎಸ್ಪಿ ರಘು ಅವರ ಮಾರ್ಗದರ್ಶನದಲ್ಲಿ ತನಿಖೆ ಆರಂಭಿಸಿದ್ದ ಪಿಎಸ್ಐ ಚೇತನ್ ಕುಮಾರ್ ಮತ್ತು ತಂಡ ತನಿಖೆ ನಡೆಸಿದ್ದರು.

ಕೊಲೆಯಾದ ಸದಾಶಿವ ಗಾರೆ ಕೆಲಸ ಮಾಡಿಕೊಂಡು ಕೆಲಸವಿದ್ದ ಕಡೆಯಲ್ಲೇ ವಾಸ ಮಾಡಿಕೊಂಡು ಮನೆಗೆ ಬರುತ್ತಿರಲಿಲ್ಲ. ಪತ್ನಿ ರಾಜೇಶ್ವರಿ ಅದೇ ಊರಿನ ಶಿವಯ್ಯ ಹಾಗೂ ರಂಗಸ್ವಾಮಿ ಅವರ ನಡುವೆ ಅಕ್ರಮ ಸಂಬಂಧ ಹೊಂದಿದ್ದಳು, ಪತಿ ಬದುಕಿದ್ದರೆ ಅಕ್ರಮ ಸಂಬಂಧಕ್ಕೆ ತಡೆಯಾಗುವುದೆಂದು ಸಂಚು ರೂಪಿಸಿ ಹುಣ್ಣಿಮೆಯ ರಾತ್ರಿ ಕೊಲೆ ಮಾಡಿ, ವಾಮಾಚಾರದಂತೆ ಬಿಂಬಿಸಿ ಆರೋಪಿಗಳು ಪರಾರಿಯಾಗಿದ್ದರು. ಪೊಲೀಸರು ವಿಚಾರಣೆ ನಡೆಸಿದಾಗ ಆರೋಪಿಗಳು ಸಂಚು ರೂಪಿಸಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

ತನಿಖಾ ತಂಡದಲ್ಲಿ ಡಿ.ಆರ್.ರಸೂಲ್ ಪಾಗೇವಾಲ, ಜಿಲ್ಲಾ ಅಪರಾಧ ಪತ್ತೆ ತಂಡದ ಸತೀಶ, ಅಬ್ದುಲ್ ಲತೀಫ್, ಅಶೋಕ, ಭಾಸ್ಕರ, ಶಿವಕುಮಾರ, ದೊಡ್ಡಯ್ಯ, ಮಹಿಳಾ ಪಿಸಿಗಳಾದ ಆಶಾ, ಶ್ರೀದೇವಿ ಭಾಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.