ಹುಣಸೂರು: ಮುನೇಶ್ವರ ಕಾವಲ್ ಮೈದಾನದಲ್ಲಿ ಧ್ವಜಾರೋಹಣ ಸಮಯದಲ್ಲಿ ಧ್ವಜಸ್ತಂಭದಿಂದ ರಾಷ್ಟ್ರಧ್ವಜ ಅರ್ಧಕ್ಕೆ ಜಾರಿ ಆತಂಕ ಮೂಡಿತ್ತು. ತಕ್ಷಣವೇ ಎಚ್ಚೆತ್ತುಕೊಂಡ ಸಿಬ್ಬಂದಿ ಸರಿಪಡಿಸಿದರು.

ಪಥ ಸಂಚಲನ ವೇಳೆಯಲ್ಲಿ ಧ್ವಜವಂದನೆ ಸ್ವೀಕರಿಸುವ ಸ್ಥಳಕ್ಕೆ ಸಾರ್ವಜನಿಕರು ಜಮಾಯಿಸಿ ಶಾಲಾ ಮಕ್ಕಳಿಗೆ ಕಿರಿಕಿರಿ ಆಗಿತ್ತು. ನಾಗರಿಕರನ್ನು ಹಿಂದಕ್ಕೆ ಕಳುಹಿಸುವಲ್ಲಿ ಪೊಲೀಸರೂ ಕೈ ಚೆಲ್ಲಿದರು. ಕಾರ್ಯಕ್ರಮ ನಿರೂಪಣೆ ಬಗ್ಗೆ ಸಾರ್ವಜನಿಕರಿಂದ ಅಪಸ್ವರ ಬಂದಿತು. ಈ ಎಲ್ಲಾ ಗೊಂದಲಗಳ ನಡುವೆ ಧ್ವನಿವರ್ಧಕವೂ ಕೆಲ ಕಾಲ ಕೈಕೊಟ್ಟಿತ್ತು.

ನಡೆದ ಲೋಪ ಕುರಿತು ಮಾಧ್ಯಮ ಪ್ರತಿನಿಧಿಗಳು ಶಾಸಕ ಹರೀಶ್ ಗೌಡ ಅವರ ಗಮನಕ್ಕೆ ತಂದಾಗ, ಅವರು ಪೊಲೀಸ್ ಮತ್ತು ತಾಲ್ಲೂಕು ಆಡಳಿತದ ಸಭೆ ಕರೆದು ಚರ್ಚಿಸುವುದಾಗಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.