ಇನ್ಫೋಸಿಸ್ ಸಂಸ್ಥೆಯಲ್ಲಿ 15 ವರ್ಷ ಕೆಲಸ ಮಾಡಿ, ಸಮಾಜದಲ್ಲಿ ಬದಲಾವಣೆ ತರಬೇಕೆಂಬ ಆಕಾಂಕ್ಷೆಯಿಂದ ‘ಆಮ್ ಆದ್ಮಿ ಪಕ್ಷ’ಕ್ಕೆ ಸೇರಿದ ಮಾಲವಿಕಾ ಗುಬ್ಬಿವಾಣಿ, ಈ ಬಾರಿ ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಆಪ್‌ನಿಂದ ಕಣಕ್ಕಿಳಿದಿದ್ದಾರೆ.

* ಕ್ಷೇತ್ರದಲ್ಲಿ ಪ್ರತಿಕ್ರಿಯೆ ಹೇಗಿದೆ?

–ಪರ್ಯಾಯ ಹುಡುಕುತ್ತಿದ್ದವರಿಗೆ ದೆಹಲಿ, ಪಂಜಾಬ್‌ನ ಆಮ್ ಆದ್ಮಿ ಪಕ್ಷದ ಸರ್ಕಾರ ಜಾರಿಗೆ ತಂದ ಅಭಿವೃದ್ಧಿ ಕಾರ್ಯಗಳ ಕುರಿತು ಮನವರಿಕೆಯಾಗಿದೆ. ಪಕ್ಷದ ಧ್ಯೇಯೋದ್ದೇಶಗಳನ್ನು ಅರ್ಥ ಮಾಡಿಕೊಂಡಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದನ್ನು ಮಾಡಿಯೇ ತೀರುತ್ತಾರೆ ಎಂದು ಖಾತರಿಯಾಗಿದೆ. ಹೀಗಾಗಿ, ಕ್ಷೇತ್ರದಲ್ಲಿ ಸ್ವಯಂಪ್ರೇರಿತರಾಗಿ ಬೆಂಬಲಿಸುತ್ತಿದ್ದಾರೆ.

* ಕಂಡುಬಂದ ಸಮಸ್ಯೆಗಳೇನು?

ಬಾಡಿಗೆ ಮನೆಯಲ್ಲಿರುವವರು ಸ್ವಂತ ಮನೆಗೆ ಬೇಡಿಕೆಯಿಟ್ಟಿದ್ದಾರೆ. ಸರ್ಕಾರದ ಸೌಲಭ್ಯಗಳು ತಲುಪುತ್ತಿಲ್ಲ. ಉದ್ಯೋಗದ ಅವಕಾಶ, ತರಬೇತಿಗಾಗಿ ಮಹಿಳೆಯರು ಮನವಿ ಮಾಡಿದ್ದಾರೆ. ಹಕ್ಕುಪತ್ರ, ಕಸ, ರಸ್ತೆ ಸಮಸ್ಯೆ ತೀವ್ರವಾಗಿದೆ. ಒಳಚರಂಡಿ ರಿಪೇರಿಯಾಗುತ್ತಿಲ್ಲ ಎಂದು ದೂರಿದ್ದಾರೆ. ಬೆಲೆ ಏರಿಕೆಯಿಂದಲೂ ತತ್ತರಿಸಿದ್ದಾರೆ.

* ಬಿಜೆಪಿ, ಕಾಂಗ್ರೆಸ್‌ಗೆ ಪ್ರಬಲ ಸ್ಪರ್ಧೆ ಒಡ್ಡುವ ನಿರೀಕ್ಷೆಯಿದೆಯಾ?

ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಆಮ್ ಆದ್ಮಿ ಪಕ್ಷದಿಂದ ಸ್ಪರ್ಧಿಸಿದ ಜನಸಾಮಾನ್ಯರೇ ಹೆಚ್ಚು ಆಯ್ಕೆಯಾಗಿದ್ದಾರೆ. ಪ್ರಚಾರ ಕಾರ್ಯ ವಿಭಿನ್ನವಾಗಿದ್ದು, ನಮ್ಮ ಪ್ರಾಮಾಣಿಕತೆ ಜನರಿಗೂ ಅರಿವಾಗಿದೆ.

* ನಿಮ್ಮ ನೇರ ಎದುರಾಳಿ ಯಾರು?

ನಮ್ಮ ಪಕ್ಷಕ್ಕೆ ಮೂರು ಪಕ್ಷದ ಪ್ರತಿನಿಧಿಗಳು ಸಮಾನ ಎದುರಾಳಿಗಳು. ಪ್ರತಿ ವಿಚಾರವನ್ನು ಕಾರ್ಯಕರ್ತರ ಜೊತೆಗೂಡಿ ಎದುರಿಸುತ್ತಿದ್ದೇನೆ.

* ಗೆಲ್ಲುವ ವಿಶ್ವಾಸವಿದೆ?

ಕಳೆದೆರಡು ವರ್ಷದಿಂದ ಪಕ್ಷವನ್ನು ಸಂಘಟಿಸಿದ್ದು, ಜನಸಾಮಾನ್ಯರು ಗೆಲ್ಲಿಸುವ ವಿಶ್ವಾಸವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.