ಮೈಸೂರು: ಥಿಯೇಟರ್ ಫೊಕ್ಸ್ ತಂಡದಿಂದ ನಗರದ ಕಿರು ರಂಗಮಂದಿರದಲ್ಲಿ ಮೇ 13ರಂದು ಸಂಜೆ 6.30ಕ್ಕೆ ‘ಮೈಸೂರು ಸ್ಟ್ಯಾಂಡಪ್ ಕಾಮಿಡಿಯನ್ಸ್ ಕನ್ನಡ ಓಪನ್ ಮೈಕ್’ ಕಾಮಿಡಿ ಪ್ರದರ್ಶನ ಆಯೋಜಿಸಲಾಗಿದೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಂಡದ ಸಂಚಾಲಕ ಪ್ರಜ್ವಲ್ ಮಾತನಾಡಿ, ‘ಕೆಲಸದ ಒತ್ತಡದಿಂದ ನೆಮ್ಮದಿ ಬಯಸುವ ನಗರವಾಸಿಗಳನ್ನು ರಂಜಿಸಲು ಹಾಗೂ ಹೊಸ ಹಾಸ್ಯ ಕಲಾವಿದರಿಗೆ ವೇದಿಕೆ ಒದಗಿಸಲು ಪ್ರದರ್ಶನ ಆಯೋಜಿಸಲಾಗಿದೆ’ ಎಂದರು.

‘ರಾಜ್ಯದ ವಿವಿಧ ಭಾಗಗಳಿಂದ ಎಂಟು ಕಲಾವಿದರು ಪ್ರದರ್ಶನ ನೀಡಲು ಹೆಸರು ನೋಂದಾಯಿಸಿದ್ದಾರೆ. ಕನ್ನಡ ಸ್ಟ್ಯಾಂಡಪ್ ಕಾಮಿಡಿಯಲ್ಲಿ ಇದೇ ಮೊದಲ ಬಾರಿ ಸಭಿಕರು ನೀಡಿದ ವಿಷಯದ ಮೇಲೆ ಪ್ರದರ್ಶನ ನೀಡುವ ‘ಇಂಪ್ರೂವ್’ ಪ್ರಯೋಗ ಕೂಡ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.

‘ಕುಟುಂಬದೊಡನೆ ಪ್ರತಿಯೊಬ್ಬರೂ ವೀಕ್ಷಿಸಬಹುದಾದ ಸಭ್ಯ ಕಾಮಿಡಿ ಶೋ ಇದು. ಮಾಹಿತಿ ಹಾಗೂ ಟಿಕೆಟ್ಗಾಗಿ ಮೊ.ಸಂ. 81508 06271, 90362 22859 ಸಂಪರ್ಕಿಸಿ’ ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ತಂಡದ ಕಾರ್ಯ ನಿರ್ವಾಹಕರಾದ ಹೃತಿಕ್, ದರ್ಶನ್, ಧೀರಜ್, ಗ್ರಾಫಿಕ್ ಡಿಸೈನರ್ ರಾಕೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.