ತಿ.ನರಸೀಪುರ: ತಾಲ್ಲೂಕಿನಲ್ಲಿ ನಡೆಯುತ್ತಿರುವ ಚಿರತೆ ಸೆರೆ ಕಾರ್ಯಾ ಚರಣೆಗೆ ಅತ್ಯಾಧುನಿಕ ಥರ್ಮಲ್ ಡ್ರೋನ್ ಕ್ಯಾಮೆರಾ ಬಳಸಲಾಗುತ್ತಿದೆ.

ತಿಂಗಳ ಅಂತರದಲ್ಲಿ ತಾಲ್ಲೂಕಿನಲ್ಲಿ ಇಬ್ಬರನ್ನು ಬಲಿ ತೆಗೆದುಕೊಂಡ ಹಿನ್ನೆಲೆಯಲ್ಲಿ ಶುಕ್ರವಾರದಿಂದ ಚಿರತೆ ಸೆರೆ ಕಾರ್ಯಾಚರಣೆ ಆರಂಭಿಸಲಾಗಿದೆ. ಚಿರತೆಯ ಚಲನವಲನ ಕಂಡು ಹಿಡಿಯು ವುದಕ್ಕಾಗಿ ಅರಣ್ಯ ಇಲಾಖೆಯು ಡ್ರೋನ್ ಕ್ಯಾಮೆರಾ ಮೊರೆ ಹೋಗಿದೆ.

ಚಿರತೆ ಕಾಣಿಸಿಕೊಂಡಿದೆ ಎನ್ನಲಾದ ಒಡ್ಗಲ್ ರಂಗನಾಥಸ್ವಾಮಿ ಬೆಟ್ಟ, ಉಕ್ಕಲಗೆರೆ ಮಲ್ಲಿಕಾರ್ಜುನ ಸ್ವಾಮಿ ಬೆಟ್ಟ ಹಾಗೂ ವಿವಿಧ ಗ್ರಾಮಗಳಲ್ಲಿ 10 ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ.

ಈ ಡ್ರೋನ್ ಕ್ಯಾಮೆರಾಗಳು ಅತ್ಯಾಧುನಿಕ ತಂತ್ರಜ್ಞಾನ ಹೊಂದಿವೆ. ಸಮಾರಂಭಗಳಲ್ಲಿ ಬಳಸುವ ಡ್ರೋನ್ಗಿಂತ ಸುಧಾರಿತ ತಂತ್ರಜ್ಞಾನ ಒಳಗೊಂಡಿದೆ. ರಾತ್ರಿಯ ವೇಳೆಯೂ ಚಿತ್ರಣವನ್ನು ಸೆರೆ ಹಿಡಿಯುವ ಸಾಮರ್ಥ್ಯ ಹೊಂದಿದೆ. ಹೆಚ್ಚಿನ ರೆಸಲ್ಯೂಷನ್ ಹೊಂದಿರುವ ಕ್ಯಾಮೆರಾ ಇದು ಎನ್ನುತ್ತಾರೆ ಅಧಿಕಾರಿಗಳು.

‘ಉಕ್ಕಲಗೆರೆ ಬೆಟ್ಟದಲ್ಲಿ ಸೆರೆ ಹಿಡಿದ ದೃಶ್ಯಗಳನ್ನು ಗಮನಿಸಿದಾಗ ಆ ಪ್ರದೇಶದಲ್ಲಿ ಚಿರತೆ ಸಂಚರಿಸಿರುವುದು ಕಂಡು ಬಂದಿದೆ. ನಮ್ಮ ತಂಡವು ಚಿರತೆಯ ಚಲನವಲನಗಳನ್ನು ಗಮನಿಸುತ್ತಿದೆ. ಬೆಟ್ಟದ ಮೇಲೇರಿ ಡ್ರೋನ್ ಬಳಸಲು ಯೋಜಿಸಲಾಗಿದೆ. ಆದಷ್ಟು ಬೇಗ ಸೆರೆ ಹಿಡಿಯುವ ವಿಶ್ವಾಸವಿದೆ’ ಎಂದು ಡಿಸಿಎಫ್ ಕಮಲಾ ಕರಿಕಾಳನ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.