ಎಚ್.ಡಿ.ಕೋಟೆ (ಮೈಸೂರು ಜಿಲ್ಲೆ): ತಾಲ್ಲೂಕಿನ ಅಂತರಸಂತೆ ವನ್ಯಜೀವಿ ವ್ಯಾಪ್ತಿಯ ಕಬಿನಿ ಹಿನ್ನೀರಿನ ಬಳಿ ಶುಕ್ರವಾರ ಬೆಳಿಗ್ಗೆ ಸಫಾರಿಗೆ ಹೋಗಿದ್ದವರಿಗೆ ತಾಯಿ ಹುಲಿ ಮತ್ತು ನಾಲ್ಕು ಮರಿಗಳು ಮತ್ತೆ ಕಾಣಿಸಿಕೊಂಡಿವೆ. ಅವುಗಳ ಫೋಟೊ ತೆಗೆದ ಛಾಯಾಗ್ರಾಹಕರು ಮತ್ತು ವನ್ಯಜೀವಿ ಪ್ರಿಯರು ಪುಳಕಗೊಂಡಿದ್ದಾರೆ.

ವನ್ಯಪ್ರೇಮಿಗಳಿಂದ ‘ಬ್ಯಾಕ್ ವಾಟರ್ ಫೀಮೇಲ್’ ಎಂದೇ ಕರೆಸಿಕೊಂಡಿರುವ ಹುಲಿಯು ತನ್ನ ಮರಿಗಳೊಂದಿಗೆ ಅ.12ರಂದು ಕಾಣಿಸಿಕೊಂಡಿತ್ತು.

‘ತಾಲ್ಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ 2 ಹೆಣ್ಣು ಹುಲಿಗಳು ತಲಾ 4 ಮರಿಗಳಿಗೆ ಜನ್ಮ ನೀಡಿರುವುದು ಇದೇ ಪ್ರಥಮ ಬಾರಿಯಾಗಿದೆ’ ಎಂದು ಅಂತರಸಂತೆ ವನ್ಯಜೀವಿ ವಲಯದ ಅರಣ್ಯ ಅಧಿಕಾರಿ ಎಸ್.ಎಸ್.ಸಿದ್ದರಾಜು ತಿಳಿಸಿದರು.

‘ಕಬಿನಿ ಹಿನ್ನೀರು ವ್ಯಾಪ್ತಿಯ ಹೆಣ್ಣು ಹುಲಿಯು ನಾಲ್ಕು ಮರಿಗಳಿಗೆ 6 ತಿಂಗಳ ಹಿಂದೆ ಜನ್ಮ ನೀಡಿತ್ತು. ಅದರ ಜೋಡಿಯಾದ ಗಂಡು ಹುಲಿಯನ್ನು ವನ್ಯಜೀವಿ ಪ್ರಿಯರು ‘ಟೈಗರ್ ಟ್ಯಾಂಕ್’ ಎಂದು ಕರೆಯುತ್ತಿದ್ದಾರೆ.

ತಾರಕ ಹಿನ್ನೀರಿನ ವ್ಯಾಪ್ತಿಯ ಹೆಣ್ಣು ಹುಲಿಯು (ರಸುಲ್ ಲೈನ್ ಫೀಮೇಲ್) 4 ಮರಿಗಳಿಗೆ 11 ತಿಂಗಳ ಹಿಂದೆ ಜನ್ಮ ನೀಡಿತ್ತು. ಈ ಹೆಣ್ಣು ಹುಲಿಗೆ ‘ಸೀಳುತುಟಿ’ ಎಂಬ ಗಂಡುಹುಲಿ ಜೋಡಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.