ಮೈಸೂರಿನ ಸರಸ್ವತಿಪುರಂನ ಸರಸ್ವತಿ ಚಿತ್ರಮಂದಿರ ಬಂದ್ ಆಗಿರುವುದು
ಪ್ರಜಾವಾಣಿ ಚಿತ್ರ/ಅನೂಪ್ ರಾಘ. ಟಿ.
ಮೈಸೂರಿನ ಚಾಮರಾಜ ಮೊಹಲ್ಲಾದ ಗಾಯತ್ರಿ ಚಿತ್ರಮಂದಿರ
ನಮ್ಮ ಜನ ನಮ್ಮ ಧ್ವನಿ : ಮೈಸೂರಿನ ಚಾಮರಾಜ ಮೊಹಲ್ಲಾದ ಗಾಯತ್ರಿ ಚಿತ್ರಮಂದಿರ. ಪ್ರಜಾವಾಣಿ ಚಿತ್ರ/ಅನೂಪ್ ರಾಘ. ಟಿ.
ಯಾವ್ಯಾವ ಚಿತ್ರಮಂದಿರಗಳು ಬಂದ್ * ರಣಜಿತ್* ರಿಜೆನ್ಸಿ* ಒಲಂಪಿಯಾ* ಲಕ್ಷ್ಮಿ* ಶಾಂತಲ* ಸರಸ್ವತಿ* ಒಪೆರಾ* ಸ್ಟರ್ಲಿಂಗ್, ಸ್ಕೈಲೈನ್* ಶಾಲಿಮಾರ್* ಶ್ರೀ ನಾಗರಾಜ ಚಾಲ್ತಿಯಲ್ಲಿರುವ ಏಕಪರದೆ ಚಿತ್ರಮಂದಿರಗಳು * ಗಾಯತ್ರಿ* ಸಂಗಮ್* ರಾಜ್‌ಕಮಲ್* ಉಡ್‌ಲ್ಯಾಂಡ್* ಲಿಡೋ* ಪ್ರಭಾ* ಉಮಾ* ಪದ್ಮಾ* ತಿಬ್ಬಾದೇವಿ* ಮಹದೇಶ್ವರ* ಬಾಲಾಜಿ
ಗ್ರಾಮೀಣ ಪ್ರದೇಶದಲ್ಲೂ...
ಗ್ರಾಮೀಣ ಜನರಿಗೂ ತಾವಿದ್ದಲ್ಲೇ ಸಿನಿಮಾ ರಂಜನೆ ಒದಗಿಸುತ್ತಿದ್ದ ಥಿಯೇಟರ್– ಟೆಂಟ್ ಚಿತ್ರಮಂದಿರಗಳು ಕ್ರಮೇಣ ನೆಲಕಚ್ಚುತ್ತಿವೆ. ಪಟ್ಟಣ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿನ ಬಹುತೇಕ ಚಿತ್ರಮಂದಿರಗಳು ಒಂದೊಂದಾಗಿ ಮುಚ್ಚತೊಡಗಿವೆ. ಎಚ್.ಡಿ. ಕೋಟೆ ಪಟ್ಟಣದ ‘ಗಣೇಶ’ ಬಾಗಿಲು ಮುಚ್ಚಿ ದಶಕ ಕಳೆದಿದ್ದು ವರ್ಷದ ಹಿಂದೆ ‘ಮಂಜುನಾಥ’ದಲ್ಲಿನ ಪ್ರದರ್ಶನವೂ ನಿಂತಿದೆ. ಹೊಸ ಚಿತ್ರಗಳೇ ಬಿಡುಗಡೆ ಆಗದ ಕಾರಣಕ್ಕೆ ಸರಗೂರಿನ ‘ಶಂಕರ್’ ಚಿತ್ರ ಮಂದಿರ ಪ್ರದರ್ಶನ ಸ್ಥಗಿತವಾಗಿರುತ್ತದೆ. ಕೆ.ಆರ್. ನಗರದ ಎಸ್‌ಸಿವಿಡಿಎಸ್ ಹಂಪಾಪುರದ ಶಾಂತಿ ಚಿತ್ರಮಂದಿರ ಹೊಮ್ಮರಗಳ್ಳಿ ಗ್ರಾಮದ ಗೌರಿ ಗಣೇಶ ಚಿತ್ರಮಂದಿರ ಪಿರಿಯಾಪಟ್ಟಣದ ಒಂದು ಚಿತ್ರಮಂದಿರ ಬಂದ್ ಆಗಿ ದಶಕ ಕಳೆಯುತ್ತಿದೆ. ಹುಣಸೂರಿನ ಎಸ್.ಸಿ.ವಿ.ಡಿ.ಎಸ್ ಚಿತ್ರಮಂದಿರ ಶಿವಾಜಿ ಚಿತ್ರಮಂದಿರಗಳು ದಶಕದಿಂದ ಮುಚ್ಚಿದೆ. ಜಯಪುರ ಹೋಬಳಿಯ ಡಿ. ಸಾಲುಂಡಿ ಮತ್ತು ಉದ್ಬೂರು ಗ್ರಾಮದಲ್ಲಿದ್ದ ಚಿತ್ರಮಂದಿರ ಮುಚ್ಚಿ 15ವರ್ಷ ಕಳೆದಿವೆ. ಮೈಸೂರಿನ ಜಯಪುರ ಹೋಬಳಿಯ ಡಿ. ಸಾಲುಂಡಿ ಮತ್ತು ಉದ್ಬೂರು ಗ್ರಾಮದಲ್ಲಿದ್ದ ಚಿತ್ರಮಂದಿರಗಳು ಮರೆಯಾಗಿವೆ. ಬನ್ನೂರಿನ ‘ಇಂದಿರಾ’ ಬಂದ್ ಆಗಿದ್ದು ತಲಕಾಡಿನ ಚಿತ್ರಮಂದಿರ ಪಾಳು ಬಿದ್ದಿದೆ. ನಂಜನಗೂಡಿನ ‘ಲಲಿತಾ’ ಐದು ವರ್ಷಗಳ ಹಿಂದೆ ಬಂದ್ ಆಗಿದ್ದು ನಗರ್ಲೆ ಗ್ರಾಮದ ‘ಶಂಭುಲಿಂಗೇಶ್ವರ’ ಚಿತ್ರಮಂದಿರ ಕಲ್ಯಾಣ ಮಂಟಪವಾಗಿ ಬದಲಾಗಿದೆ. ತಿ.ನರಸೀಪುರದ ‘ಬಾಲಾಜಿ’ ಕಣ್ಣು ಮುಚ್ಚಿ ದಶಕವಾಗಿದೆ.