ಮೈಸೂರು: ಚಾಮರಾಜೇಂದ್ರ ದೃಶ್ಯಕಲಾ ಕಾಲೇಜಿನ (ಕಾವಾ) ಮೊದಲ ಡೀನ್ ಹಾಗೂ ಕಲಾವಿದ ಪ್ರೊ.ವಿ.ಎಂ.ಶೋಲಾಪುರ್ಕರ್ (89) ವಯೋಸಹಜ ಕಾರಣಗಳಿಂದ ವಿ.ವಿ.ಮೊಹಲ್ಲಾದ ತಮ್ಮ ನಿವಾಸದಲ್ಲಿ ಮಂಗಳವಾರ ನಿಧನರಾದರು.

ಇವರಿಗೆ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರ ಇದ್ದಾರೆ. ಮೃತರ ಅಂತ್ಯಕ್ರಿಯೆಯು ಗೋಕುಲಂನ ಸ್ಮಶಾನದಲ್ಲಿ ನಡೆಯಿತು.

ವಿಜಯಪುರದಲ್ಲಿ 1931ರಲ್ಲಿ ಜನಿಸಿದ ಇವರು, ಮುಂಬೈನ ನೂತನ್ ಕಲಾಮಂದಿರ ಹಾಗೂ ಸರ್ ಜೆ.ಜೆ.ಕಲಾಶಾಲೆಯಲ್ಲಿ ಕಲಾ ಶಿಕ್ಷಣ ಪಡೆದರು. ಜೆ.ಜೆ.ಕಲಾಶಾಲೆಯಲ್ಲೇ 1957ರಿಂದ 1979ರವರೆಗೆಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು. ನಂತರ ಮೈಸೂರಿಗೆ ಬಂದ ಇವರು, ಕಾವಾ ಕಾಲೇಜಿನ ಮೊದಲ ಡೀನ್ ಆಗಿ 1982ರಿಂದ 1988ರವರೆಗೆಕಾರ್ಯನಿರ್ವಹಿಸಿದ್ದರು. ನಿವೃತ್ತರಾದ ಬಳಿಕ ಇಲ್ಲಿಯೇ ನೆಲೆ ನಿಂತರು.

ಚಿತ್ರಕಲೆ ಮಾತ್ರವಲ್ಲದೇ; ಮೈಸೂರಿನ ವಿಶೇಷವಾದ ಮರದ ಕಲೆಯತ್ತಲೂ ಆಕರ್ಷಿತರಾಗಿ ಹಲವು ಕಲಾಕೃತಿ ರಚಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.