ಮೈಸೂರು: ಲೋಕಸಭೆ ಚುನಾವಣೆಯ ಎಲ್ಲ ಪ್ರಕ್ರಿಯೆಯ ಮಾಹಿತಿಯು ಅಂಗೈಯಲ್ಲಿಯೇ ಸಿಗಲಿದೆ.

ಗೂಗಲ್ ಪ್ಲೇಸ್ಟೋರ್ ಹಾಗೂ ಆ್ಯಪಲ್ ಸ್ಟೋರ್ನಲ್ಲಿ ವೋಟರ್ ಹೆಲ್ಪ್ಲೈನ್ ಆ್ಯಪ್ (VHA- Voter Helpline App) ಲಭ್ಯವಿದ್ದು, ಪ್ರತಿಯೊಬ್ಬರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬುದೂ ಸೇರಿದಂತೆ ವಿವಿಧ ಮಾಹಿತಿ ಇಲ್ಲಿ ಅಡಕ.

ಹೊಸ ಮತದಾರರ ನೋಂದಣಿ, ಹೆಸರು ತಿದ್ದುಪಡಿ, ಮರಣ ಹೊಂದಿದ್ದರೆ ರದ್ದುಪಡಿಸುವುದು. ಯಾವ ಮತಗಟ್ಟೆಯಲ್ಲಿ ನೋಂದಣಿಯಾಗಿದೆ ಎಂಬುದನ್ನು ತಿಳಿಯಲು ಆ್ಯಪ್ ಅನ್ನು ಮೊಬೈಲ್ನಲ್ಲಿ ಡೌನ್ಲೋಡ್ ಮಾಡಿಕೊಂಡು ಪರಿಶೀಲಿಸಬಹುದು.

ಇವಿಎಂ, ವಿವಿ ಪ್ಯಾಟ್ಗಳು, ಚುನಾವಣಾ ಅಭ್ಯರ್ಥಿಗಳು ಸೇರಿದಂತೆ ಚುನಾವಣೆಗೆ ಸಂಬಂಧಿಸಿದ ವಿವಿಧ ಮಾಹಿತಿಯನ್ನು ಪ್ರಾದೇಶಿಕ ಭಾಷೆಗಳಲ್ಲಿ ತಿಳಿದುಕೊಳ್ಳಬಹುದು. 12 ಭಾಷೆಗಳಲ್ಲಿ ಈ ಸೇವೆ ಸಿಗುತ್ತಿದೆ.

ಏನೇನಿದೆ: ಆ್ಯಪ್ ಅನ್ನು ತೆರೆಯುತ್ತಿದ್ದಂತೆ ಹೊಸದಾಗಿ ಲಾಗ್ಇನ್ ಆಗಬೇಕು. ಮೊದಲ ಬಾರಿ ಲಾಗ್ಇನ್ ಆಗುವಾಗ ಒಟಿಪಿ (ಒನ್ ಟೈಮ್ ಪಾಸ್ವರ್ಡ್) ಬರುತ್ತದೆ. ನಂತರ ಪಾಸ್ವರ್ಡ್ ಸೆಟ್ ಮಾಡಿಕೊಂಡ ಮೇಲೆ ಆ್ಯಪ್ನ ಸೇವೆಗಳು ತೆರೆದುಕೊಳ್ಳುತ್ತವೆ. ಮತದಾರರ ಸಹಾಯವಾಣಿ ಆ್ಯಪ್ನಲ್ಲಿ (ವಿಎಚ್ಎ) 9 ವಿಭಾಗಗಳಿವೆ.

ಮತದಾರರ ನೋಂದಣಿ: ಹೊಸ ಮತದಾರರ ನೋಂದಣಿಗೆ ನಮೂನೆ–6 ಅರ್ಜಿ, ರದ್ದುಪಡಿಸಲು ನಮೂನೆ–7, ಮತದಾರರ ಚೀಟಿಯಲ್ಲಿ ತಿದ್ದುಪಡಿಗಳಿದ್ದರೆ, ಎಪಿಕ್ ಕಾರ್ಡ್ ಬದಲಾವಣೆ, ವಲಸೆ ಬಂದಿದ್ದರೆ ಹಾಗೂ ಇತರೆ ತಿದ್ದುಪಡಿಗಳಿಗೆ ಫಾರ್ಮ್–8, ಆಧಾರ್ ಸಂಖ್ಯೆಯನ್ನು ಸಲ್ಲಿಸಲು ಫಾರ್ಮ್ 6 ‘ಬಿ’ಯಲ್ಲಿ ಅರ್ಜಿ ಸಲ್ಲಿಸಬಹುದು.

ಮತದಾರರ ಲಭ್ಯವಿರುವ ಸೇವೆಗಳ ವಿಭಾಗದಲ್ಲಿ ಮತಗಟ್ಟೆ ವಿವರ, ಜಿಲ್ಲಾ ಚುನಾವಣಾಧಿಕಾರಿ (ಡಿಇಒ), ಚುನಾವಣಾ ನೋಂದಣಾಧಿಕಾರಿ (ಇಆರ್ಒ) ಹಾಗೂ ಮತಗಟ್ಟೆ ಅಧಿಕಾರಿ (ಬಿಎಲ್ಒ) ಮಾಹಿತಿ ಹಾಗೂ ಫೋನ್ ಸಂಖ್ಯೆ ಲಭ್ಯವಿದ್ದು, ಮತಗಟ್ಟೆಯ ಗೂಗಲ್ ಲೊಕೇಶನ್ ಕೂಡ ಲಭ್ಯವಿದೆ.

ಇ–ಎಪಿಕ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಲು ಅವಕಾಶವಿದ್ದು, ಎಪಿಕ್ ಸಂಖ್ಯೆಯನ್ನು ಹಾಕಿ, ವಾಸಿಸುವ ರಾಜ್ಯವನ್ನು ಆಯ್ಕೆ ಮಾಡಿದರೆ ಬರುವ ಒಟಿಪಿಯನ್ನು ಹಾಕಬೇಕು. ನಂತರ ಇ–ಎಪಿಕ್ ಕಾರ್ಡ್ನ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

ಚುನಾವಣೆಯ ಫಲಿತಾಂಶ ವಿಭಾಗದಲ್ಲಿ ಪಕ್ಷ, ಅಭ್ಯರ್ಥಿ ಗಳಿಸಿದ ಮತಗಳು, ಮುನ್ನಡೆ ಮೊದಲಾದ ಅಂಶಗಳಿವೆ.

ಜ್ಞಾನಾಧಾರಿತ ವಿಭಾಗದಲ್ಲಿ ಚುನಾವಣಾ ಆಯೋಗ, ಇವಿಎಂ, ವಿವಿಪ್ಯಾಟ್, ಚುನಾವಣಾ ಫಲಿತಾಂಶ ಹಾಗೂ ಅಂಕಿ ಅಂಶ, ಆಯೋಗದ ಪ್ರಕಟಣೆಗಳು, ಸೂಚನೆಗಳ ಮಾಹಿತಿಯಿದೆ.

ಹೊಸ ಬೆಳವಣಿಗೆಗಳ ವಿಭಾಗದಲ್ಲಿ ಆಯೋಗದ ಪತ್ರಿಕಾ ಪ್ರಕಟಣೆಗಳು, ಸೂಚನೆಗಳು ಹಾಗೂ ಆ್ಯಪ್ಗಳ ಮಾಹಿತಿ ಇರುತ್ತದೆ. ಆ್ಯಪ್ಗಳಾದ ಕೆವೈಸಿ–ಇಸಿಐ, ಸುವಿಧಾ, ಎನ್ಕೊರ್ ನೋಡಲ್ ಆ್ಯಪ್, ವೋಟರ್ ಟರ್ನೌಟ್, ಸಿವಿಜಿಲ್, ಸಾಕ್ಷಾಂ–ಇಸಿಐ, ಅಬ್ಸರ್ವರ್, ಇಎಸ್ಎಂಎಸ್ ಇವೆ. ಇವುಗಳ ವೆಬ್ ಅಪ್ಲಿಕೇಶನ್ಗಳೂ ಲಭ್ಯವಿವೆ.

ದೂರುಗಳು ಹಾಗೂ ಸಲಹೆಗಳ ವಿಭಾಗವಿದ್ದು, ಎಪಿಕ್ ಸಂಖ್ಯೆಯನ್ನು ನಮೂದಿಸಿ ಸಲ್ಲಿಸಬಹುದು.

Highlights - 12 ಭಾಷೆಗಳಲ್ಲಿ ಸೇವೆ ಲಭ್ಯ ನೋಂದಣಿ, ತಿದ್ದುಪಡಿಗೆ ಅವಕಾಶ ಎಲ್ಲ ಚುನಾವಣೆ, ಅಭ್ಯರ್ಥಿಗಳ ವಿವರ ಲಭ್ಯ

Cut-off box - ಚುನಾವಣೆ ಮಾಹಿತಿ ಲಭ್ಯ ಎಲ್ಲ ಚುನಾವಣೆಗಳ ಮಾಹಿತಿಯೂ ಸಿಗುತ್ತದೆ. ಲೋಕಸಭೆ ವಿಧಾನಸಭೆ ಚುನಾವಣೆಗಳು ಉಪ ಚುನಾವಣೆಗಳ ಫಲಿತಾಂಶ ಚುನಾವಣೆ ಆಯೋಜನೆ ಅವಧಿ ಹಾಗೂ ಎಲ್ಲ ಮಾಹಿತಿಗೆ ಪೂರಕವಾದ ದಾಖಲೆಗಳು ಇಲ್ಲಿ ಲಭ್ಯ. 2024ರ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಎಲ್ಲ ಅಭ್ಯರ್ಥಿಗಳ ಮಾಹಿತಿ ಅಫಿಡವಿಟ್ ಲಭ್ಯ ಇವೆ. ಸ್ವೀಕೃತಗೊಂಡ ಹಾಗೂ ತಿರಸ್ಕೃತವಾದ ನಾಮಪತ್ರಗಳು ವಾಪಸ್ ಪಡೆದವರು ಹಾಗೂ ಅಂತಿಮ ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳ ವಿವರಗಳು ಸಿಗುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.