ನೀರು ನಿರ್ವಹಣೆಗೆ ಸಂಬಂಧಿಸಿದಂತೆ ಅಗತ್ಯ ಬಿದ್ದರೆ ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಸಹಕಾರ ಪಡೆಯಬೇಕು
- ಡಾ.ಎಚ್.ಸಿ.ಮಹದೇವಪ್ಪ ಜಿಲ್ಲಾ ಉಸ್ತುವಾರಿ ಸಚಿವ
ಒಳಹರಿವು ಕುಸಿತ
‘ಪ್ರಸ್ತುತ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಕುಂಠಿತವಾಗಿದ್ದು ಶೇಖರಣಾ ಸಾಮರ್ಥ್ಯವು ಗಣನೀಯವಾಗಿ ಕಡಿಮೆಯಾಗಿದೆ. ಈಗ ಸಂಗ್ರಹ ಇರುವುದರಲ್ಲೇ ಆಗಸ್ಟ್‌ನಿಂದ 2024ರ ಮೇವರೆಗೆ ಬೆಂಗಳೂರು ಮೈಸೂರು ಜಿಲ್ಲೆಗೆ ಕುಡಿಯುವ ನೀರಿನ ಆದ್ಯತೆಗೆ 6.13 ಟಿಎಂಸಿ ಅಡಿ ನೀರು ಬಿಡಬೇಕಾಗಿರುತ್ತದೆ. ಇದೆಲ್ಲವನ್ನೂ ಪರಿಗಣಿಸಿದರೆ ಅಕ್ಟೋಬರ್‌ವರೆಗೆ ಕಟ್ಟು ನೀರು ಪದ್ಧತಿಯಲ್ಲಿ ಕಾಲುವೆಗಳಿಗೆ ನೀರು ಹರಿಸಬಹುದಾಗಿದೆ’ ಎಂದು ಅಧಿಕಾರಿಗಳು ಅಂಕಿ–ಅಂಶ ಮಂಡಿಸಿದರು. ಜಲಾಶಯಕ್ಕೆ ಒಳಹರಿವು ಇಲ್ಲದಿದ್ದಲ್ಲಿ ಇದೇ ಪದ್ಧತಿಯಲ್ಲಿ ಸೆಪ್ಟೆಂಬರ್‌ವರೆಗೆ ನಾಲೆಗಳಿಗೆ ನೀರು ಹರಿಸಬಹುದಾಗಿದೆ ಎಂದು ಹೇಳಿದರು. ಉತ್ತಮ ಮಳೆಯಾದಲ್ಲಿ ಡಿಸೆಂಬರ್‌ವರೆಗೂ ಮುಂದುವರಿಸಬಹುದಾಗಿದೆ ಎಂದರು.