ರಾಯಚೂರು: ರಾಷ್ಟ್ರೀಯ ನೂತನ ಶಿಕ್ಷಣ ನೀತಿ ಅಡಿಯಲ್ಲಿ ಜಾರಿಗೊಳಿಸಿದ್ದ 4 ವರ್ಷದ ಪದವಿಯನ್ನು ಹಿಂಪಡೆದ ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಾರ್ಹ ಎಂದು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್ಒ) ಜಿಲ್ಲಾ ಸಮಿತಿ ತಿಳಿಸಿದೆ.

3 ವರ್ಷವಿದ್ದ ಪದವಿ ಶಿಕ್ಷಣವನ್ನು ಎನ್ಇಪಿ 2020ರ ಭಾಗವಾಗಿ ಬಿಜೆಪಿ ರಾಜ್ಯ ಸರ್ಕಾರ 4 ವರ್ಷವಾಗಿ ಜಾರಿಗೊಳಿಸಿತ್ತು. ಶಿಕ್ಷಣ ತಜ್ಞರ, ಶಿಕ್ಷಕರ, ವಿದ್ಯಾರ್ಥಿಗಳ ಅಭಿಪ್ರಾಯ ಸಂಗ್ರಹಿಸದೇ ಏಕ ಪಕ್ಷೀಯವಾಗಿ ಜಾರಿಗೊಳಿಸಿದ್ದು ಇದು ಅಪ್ರಜಾತಾಂತ್ರಿಕವಾಗಿದೆ. ಎಐಡಿಎಸ್ಒ ನೇತೃತ್ವದಲ್ಲಿ ಅನೇಕ ಹೋರಾಟ ಮಾಡಲಾಗಿತ್ತು. ಈ ಹೋರಾಟಕ್ಕೆ ಸ್ಪಂದಿಸಿ ಮೂರು ವರ್ಷಕ್ಕೆ ಇಳಿಸಿದ್ದು ನಮ್ಮ ಹೋರಾಟಕ್ಕೆ ಸಿಕ್ಕ ಜಯವಾಗಿದೆ.

ವಿದ್ಯಾರ್ಥಿಗಳು ಹಾಗೂ ಜನಸಮೂಹವು ಹೋರಾಟದ ಮೇಲೆ ಹೊಂದಿರುವ ಭರವಸೆಯನ್ನು ಇದು ಬಲಪಡಿಸಿದೆ. ರಾಜ್ಯದಲ್ಲಿ ಒಂದು ಜನಪರ ಶಿಕ್ಷಣ ನೀತಿಯು ಜಾರಿಯಾಗುವವರೆಗೂ ನಮ್ಮ ಹೋರಾಟವು ಮುಂದುವರೆಯುತ್ತದೆ ಎಂದು ಎಐಡಿಎಸ್ಒ ಜಿಲ್ಲಾ ಸಮಿತಿಯ ಕಾರ್ಯದರ್ಶಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.