ರಾಯಚೂರು: ಜನರು ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಶಾಪಿಂಗ್ ಮಾರು ಹೋಗಿದ್ದು, ವಸ್ತುಗಳನ್ನು ಖರೀದಿ ಮಾಡುವ ಸಂದರ್ಭದಲ್ಲಿ ಅತ್ಯಂತ ಜಾಗೃತೆ ವಹಿಸಿ ಖರೀದಿ ಮಾಡುವಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಮಲ್ಲಿಕಾರ್ಜುನಗೌಡ ಹೇಳಿದರು.

ನಗರದ ಪ್ರಿನ್ಸಸ್ ಫಾತಿಮಾ ಇ.ಎಸ್.ಐ.ಎನ್ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾಗ್ರಾಹಕರ ಆಯೋಗ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ವಕೀಲರ ಸಂಘದಿಂದ ಗ್ರಾಹಕರ ದಿನಾಚರಣೆಯ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗ್ರಾಹಕರು ತಮ್ಮ ಹಕ್ಕುಗಳನ್ನು ತಿಳಿಯುವುದು ಅತ್ಯಂತ ಅಗತ್ಯ. ಹಣ ನೀಡಿ ಸರಕು, ಸೇವೆಗಳ ಪಡೆಯುವ ವ್ಯಕ್ತಿಯನ್ನು ಗ್ರಾಹಕರೆನ್ನುತ್ತೇವೆ. ಸರಕು, ಸೇವೆಗಳನ್ನು ಖರೀದಿಸುವ ಸಮಯದಲ್ಲಿ ಗುಣಮಟ್ಟ ಮತ್ತು ಕ್ವಾಂಟಿಟಿ ವಿಷಯದಲ್ಲಿ ಮೋಸಕ್ಕೊಳಗಾದಲ್ಲಿ ಗ್ರಾಹಕರ ಸಂರಕ್ಷಣಾ ಅಧಿನಿಯಮ 2019ರ ಅನ್ವಯ ಗ್ರಾಹಕರ ವ್ಯಾಜ್ಯ ಪರಿಹಾರದ ಆಯೋಗದ ಮೊರೆ ಹೋಗಿ ನ್ಯಾಯ ಪಡೆಯಬಹುದಾಗಿದೆ ಎಂದರು.

ಸರಕು, ಸೇವೆಗೆ ನೀಡಿದ ಬೆಲೆಯ ಜೊತೆಗೆ,ಮಾನಸಿಕ ವೇದನೆ, ವ್ಯಾಜ್ಯ ಪರಿಹರಿಸಲು ಆದ ಖರ್ಚು ಸಹ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗದ ಮೂಲಕ ನ್ಯಾಯ ಪಡೆಯುವ ಸಂದರ್ಭದಲ್ಲಿ ಸಿಗುತ್ತದೆ. ಹಿಂದಿನ ದಿನಗಳಲ್ಲಿ ಗ್ರಾಹಕರ ಹಕ್ಕುಗಳ ಕಾಯ್ದೆ ಇರಲಿಲ್ಲ. ಅಂದಿನ ದಿನಗಳಲ್ಲಿ ನಂಬಿಕೆಯ ಮೇಲೆ ವ್ಯವಹಾರ ಮಾಡುವ ಸನ್ನಿವೇಶ ಇತ್ತು. ಆದರೆ ಇಂದಿನ ಪರಿಸ್ಥಿತಿ ಸಂಪೂರ್ಣ ತದ್ವಿರುದ್ದವಾಗಿದ್ದು,ಈ ಕಾರಣದಿಂದ ಮತ್ತು ಗ್ರಾಹಕರ ರಕ್ಷಣೆಗಾಗಿ ಕಾಯ್ದೆ ಜಾರಿಗೆ ಬಂದಿದೆ ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜೆ.ಬಸವರಾಜ ಮಾತನಾಡಿ, ಅಂಗಡಿಗಳಲ್ಲಿ ಗ್ರಾಹಕರೇ ದೇವರು ಎಂದು ಬರೆದುಕೊಂಡಿರುತ್ತಾರೆ. ಆದರೆ ದೇವರನ್ನೇ ಮೋಸ ಮಾಡುವ ಕಾಲ ಇದಾಗಿದ್ದು, ಹಾಗಾಗಿ ಗ್ರಾಹಕರ ರಕ್ಷಣೆಗಾಗಿ ಕಾಯ್ದೆ ಜಾರಿಗೆ ಬಂದಿದೆ. ಇಂದಿಗೂ ಕೂಡ ಜನರಿಗೆ ಕಾಯ್ದೆ ಬಗ್ಗೆ ತಿಳಿಯುತ್ತಿಲ್ಲ ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಜನ ಆರ್.ಎ,, ಪ್ರಿನ್ಸಸ್ ಫಾತೀಮಾ, ಇ.ಎಸ್.ಐ.ಎನ್ ಕಾಲೇಜಿನ ಸಂಸ್ಥೆಯ ಅಧ್ಯಕ್ಷ ಮಹಮೂದ್ ಎಂ.ಪಟೇಲ್, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯ ಪ್ರಭುದೇವ್ ಪಾಟೀಲ್, ಇ.ಎಸ್.ಐ.ಎನ್ ಕಾಲೇಜಿನ ಪ್ರಾಂಶುಪಾಲ ರುಕ್ಸಾನಾ ಬೇಗಂ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.