ಶಕ್ತಿನಗರ: ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರದ (ಆರ್ಟಿಪಿಎಸ್) ಒಂದನೇ ವಿದ್ಯುತ್ ಘಟಕದ ಹಳೆಯ ಕಟ್ಟಡ ಕುಸಿದ ಕಾರಣ ಮೂರು ಕೋಲ್ ಫೀಡರ್ಗಳು ಜಖಂಗೊಂಡಿವೆ. ಕಂಟ್ರೋಲ್ ರೂಂ ಕೂಡ ಜಖಂಗೊಂಡಿದೆ.

210 ಮೆಗಾವ್ಯಾಟ್ ಸಾಮರ್ಥ್ಯದ ಒಂದನೇ ವಿದ್ಯುತ್ ಘಟಕದ ಆರು ಪೈಕಿ ಮೂರು ಫೀಡರ್ಗಳು ಕುಸಿದಿವೆ. ಭಾರಿ ಪ್ರಮಾಣದಲ್ಲಿ ತೇವ ಕಲ್ಲಿದ್ದಲು ಸಂಗ್ರಹಿಸಿದ್ದು ಅವಘಡಕ್ಕೆ ಕಾರಣ ಎನ್ನಲಾಗಿದೆ. ವಿದ್ಯುತ್ ಬೇಡಿಕೆಯಿರದ ಕಾರಣ ವಿದ್ಯುತ್ ಘಟಕಗಳಲ್ಲಿ ಉತ್ಪಾದನೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

1 ಮತ್ತು 2 ನೇ ವಿದ್ಯುತ್ ಘಟಕಗಳಿಗೆ ಈ ಮೂರು ಫೀಡರ್ಗಳಿಂದ ಕಲ್ಲಿದ್ದಲು ಪೂರೈಸಲಾಗುತ್ತದೆ. ಕಾಂಕ್ರೀಟ್, ಕಬ್ಬಿಣದಿಂದ ನಿರ್ಮಿತ ಕೋಲ್ ಫೀಡರ್ ಮೂರು ಫೀಡರ್ಗಳು ಬಿದ್ದ ರಭಸಕ್ಕೆ ಕಂಟ್ರೋಲ್ ರೂಂ ಒಂದು ಭಾಗದ ಛಾವಣಿ ಕಿತ್ತು ಹೋಗಿದೆ.

ಪ್ರಸ್ತುತ 6 ಫೀಡರ್ಗಳಲ್ಲಿ 3 ಫೀಡರ್ ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ಆದರೆ, ಈ ಮೂರು ಫೀಡರ್ ನಿರ್ವಹಿಸಲು ಕಂಟ್ರೋಲ್ ರೂಮ್ ಅತ್ಯಗತ್ಯ. ಕುಸಿದು ಬಿದ್ದ ಮೂರು ಫೀಡರ್ ಹಿನ್ನೆಲೆಯಲ್ಲಿ ಕಂಟ್ರೋಲ್ ರೂಮ್ ತೀವ್ರ ಜಖಂಗೊಂಡಿದೆ.

‘ಕೋಲ್ ಫೀಡರ್ ಕುಸಿತದಿಂದ ವಿದ್ಯುತ್ ಘಟಕದ ಮಧ್ಯೆ ನೀರು ಮತ್ತು ಕಲ್ಲಿದ್ದಲು ಸೋರಿಕೆಯಾಗಿದೆ. ಕಲ್ಲಿದ್ದಲು ಸಂಗ್ರಹ ಕೇಂದ್ರದಿಂದ ಒಂದು ಮತ್ತು ಎರಡನೇ ಘಟಕಕ್ಕೆ ಕಲ್ಲಿದ್ದಲು ಪೂರೈಕೆ ಸ್ಥಗಿತಗೊಂಡಿದೆ.

‘ಕೆಪಿಸಿಎಲ್ ನಿಗಮದ ತಾಂತ್ರಿಕ ನಿರ್ದೇಶಕರ ನೇತೃತ್ವದ ತಂಡ ಗುರುವಾರ ಆರ್ಟಪಿಎಸ್ಗೆ ಭೇಟಿ ನೀಡಿ ಪರಿಶೀಲಿಸುತ್ತದೆ’ ಎಂದು ಆರ್ಟಿಪಿಎಸ್ ಮುಖ್ಯ ಕಾರ್ಯನಿರ್ವಹಕ ನಿರ್ದೇಶಕ ಶಶಿಕಾಂತ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.