ಸಿಂಧನೂರು: ನಗರದ ಎಪಿಎಂಸಿ ಸಮುದಾಯ ಭವನದಲ್ಲಿ ಸಿಪಿಐಎಂ ಪಕ್ಷದ 12ನೇ ತಾಲ್ಲೂಕು ಸಮ್ಮೇಳನ ಮಂಗಳವಾರ ಯಶಸ್ವಿಯಾಗಿ ನಡೆಯಿತು. ಇದೇ ವೇಳೆ ನೂತನ ತಾಲ್ಲೂಕು ಕಾರ್ಯದರ್ಶಿಯಾಗಿ ಬಸವಂತರಾಯಗೌಡ ಕಲ್ಲೂರು ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ಧ್ವಜರೋಹಣ ಮಾಡುವ ಮೂಲಕ ಹಿರಿಯ ಸದಸ್ಯ ನರಸಿಂಹಪ್ಪ ಚಾಲನೆ ನೀಡಿದರು. ನಂತರ ಪಕ್ಷದ ಜಿಲ್ಲಾ ಸಮಿತಿ ಕಾರ್ಯದರ್ಶಿ ಕೆ.ಜಿ.ವಿರೇಶ ಅವರು ಇಂದಿನ ಪರಿಸ್ಥಿತಿಯಲ್ಲಿ ಪಕ್ಷದ ಜವಾಬ್ದಾರಿ ಮತ್ತು ಮುಂದಿನ ಕಾರ್ಯಯೋಜನೆ ಕುರಿತು ಮಾತನಾಡಿದರು.

ಪಕ್ಷದ ಕಾರ್ಯದರ್ಶಿ ಶೇಕ್ಷಾಖಾದ್ರಿ ಕರಡು ವರದಿ ಮಂಡಿಸಿದರು. ಪ್ರತಿನಿಧಿಗಳು ವಿಮರ್ಶೆ, ಸ್ವವಿಮರ್ಶೆ ಮಾಡಿಕೊಳ್ಳುವುದರ ಜೊತೆಗೆ ಕರಡು ವರದಿ ಪೂರ್ಣಗೊಳಿಸುವ ಕುರಿತು ತಾಲ್ಲೂಕು ಪ್ರಭಾರಿ ಶರಣಣಬಸವ ಮಾರ್ಗದರ್ಶನ ಮಾಡಿದರು. 8 ಶಾಖೆಗಳಿಂದ ಪ್ರತಿನಿಧಿಗಳು ಭಾಗವಹಿಸಿ ವರದಿಯ ಮೇಲೆ ಚರ್ಚಿಸಿದರು.

ಸದಸ್ಯರಾಗಿ ಶೇಕ್ಷಾಖಾದ್ರಿ, ಎಸ್.ದೇವೇಂದ್ರಗೌಡ, ಯಂಕಪ್ಪ ಕೆಂಗಲ್, ಶರಣಮ್ಮ ಪಾಟೀಲ್, ರೇಣುಕಮ್ಮ, ಬಂಡಾರೆಪ್ಪ, ಗೇಸುದರಾಜ, ಗರೀಬಸಾಬ ಕೊಡ್ಲಿ, ಎಂ.ಗೋಪಾಲಕೃಷ್ಣ, ವಿರೇಶ ನಾಯಕ, ಬಸವಂತರಾಯಗೌಡ ಕಲ್ಲೂರು ಅವರನ್ನು ಸಮ್ಮೇಳನ ಆಯ್ಕೆ ಮಾಡಲಾಯಿತು.

’ನ.28-29 ರಂದು ರಾಯಚೂರಿನಲ್ಲಿ ನಡೆಯುವ ಜಿಲ್ಲಾ ಸಮ್ಮೇಳನಕ್ಕೆ 23 ಜನ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗಿದೆ’ ಎಂದು ನೂತನ ಕಾರ್ಯದರ್ಶಿ ಬಸವಂತರಾಯಗೌಡ ಕಲ್ಲೂರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.