ಸಿಂಧನೂರು: ನಗರದಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಕಳೆಗಟ್ಟಿದ್ದು ಹಣ್ಣು, ಹೂ, ಕಬ್ಬು, ಬಾಳೆದಿಂಡು, ಪಟಾಕಿ, ಆಕಾಶ ಬುಟ್ಟಿಳು ಸೇರಿದಂತೆ ಪೂಜಾ ಸಾಮಗ್ರಿಗಳ ಖರೀದಿ ಜೋರಾಗಿತ್ತು.

ಈ ಬಾರಿ ಮುಂಗಾರು ಮಳೆ ಚೆನ್ನಾಗಿ ಸುರಿದು ತುಂಗಭದ್ರಾ ಜಲಾಶಯ ಭರ್ತಿಯಾಗಿ, ಜಮೀನುಗಳಲ್ಲಿ ವಿವಿಧ ಬೆಳೆ ಸಮೃದ್ಧಿಯಾಗಿ ಬೆಳೆದು ನಿಂತಿರುವ ಕಾರಣದಿಂದ ತಾಲ್ಲೂಕಿನ ಜನತೆ ಬೆಳಕಿನ ಹಬ್ಬ ದೀಪಾವಳಿ ಎಲ್ಲೆಡೆ ಸಂಭ್ರಮದಿಂದ ಆಚರಣೆ ಸಿದ್ಧತೆ ನಡೆಸಿದ್ದು, ಗುರುವಾರ ಸಂಜೆಯಂತೂ ರಾಯಚೂರು ಮುಖ್ಯರಸ್ತೆ ಜನಜಂಗುಳಿಯಿಂದ ತುಂಬಿತ್ತು.

ಶುಕ್ರವಾರ ಲಕ್ಷ್ಮೀ ಪೂಜೆ, ಭಾನುವಾರ ಬಲಿಪಾಡ್ಯಮಿ ಇದ್ದು, ಹೀಗಾಗಿ ಎಲ್ಲ ಮಹಿಳೆಯರು ಪೂಜಾ ಸಾಮಗ್ರಿಗಳ ಖರೀದಿಸಿದರು. ವಿಶೇಷವಾಗಿ ಮಕ್ಕಳು ಪಟಾಕಿಗಳನ್ನು ಖರೀದಿಸಿ, ಸಿಡಿಸುವ ಮೂಲಕ ಸಂಭ್ರಮಪಟ್ಟರು. ಎಪಿಎಂಸಿ ಗಂಜ್ನಲ್ಲಿ ಹಲವರು ಅಂಗಡಿಗಳು ಶುಕ್ರವಾರ ಲಕ್ಷ್ಮಿ ಪೂಜೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಎಲ್ಲ ಅಂಗಡಿಗಳು ಬಹುತೇಕವಾಗಿ ತಳಿರು-ತೋರಣಗಳಿಂದ ಅಲಂಕೃತಗೊಂಡಿದ್ದವು. ವಿವಿಧ ಬಗೆಯ ಆಕಾಶ ಬುಟ್ಟಿಗಳು ಅಂಗಡಿಗಳ ಹಬ್ಬಕ್ಕೆ ಮೆರಗು ನೀಡಿದ್ದವು.

ಬೆಲೆ ದುಬಾರಿ: ಒಂದು ಮಾರು ಚಂಡು ಹೂವು ₹60–₹80, ಸೇವಂತಿಗೆ ₹80–₹100, ಮಲ್ಲಿಗೆ, ಕಾಕಾಡ ಹೂವುಗಳು ಮೊಳಕ್ಕೆ ₹50, ಸೇಬು ಹಣ್ಣು ಕೆ.ಜಿ ₹150, ದಾಳಿಂಬೆ ₹80, ಬಾಳೆಹಣ್ಣು ₹50ಕ್ಕೆ ಡಂಜನ್, ಗೊನೆಬಾಳೆ ಹಣ್ಣು ₹500 ರಿಂದ ₹800 ರವರೆಗೆ ಮಾರಾಟವಾದವು.

ತರಕಾರಿ ಬೆಲೆಯೂ ಹೆಚ್ಚಾಗಿತ್ತು.

ನಗರದ ಕನಕದಾಸ ವೃತ್ತ, ಮಹಾತ್ಮಗಾಂಧಿ ವೃತ್ತ, ಕೋರ್ಟ್ ಬಳಿ, ಕಿತ್ತೂರುರಾಣಿ ಚೆನ್ನಮ್ಮ ವೃತ್ತ, ಬಸ್ ನಿಲ್ದಾಣದ ಬಳಿ, ಬಸವ ವೃತ್ತ, ಪಿಡಬ್ಲ್ಯೂಡಿ ಕ್ಯಾಂಪ್ ಮತ್ತಿತರ ಕಡೆಗಳಲ್ಲಿ ರಾಶಿ-ರಾಶಿ ಹೂಗಳು, ವಿವಿಧ ಬಗೆಯ ದಂಟುಗಳು, ಬಾಳೆ ಗೊನೆ, ಮಾವಿನ ಎಲೆಗಳ ದಂಟುಗಳ ಮಾರಾಟ ನಡೆಯಿತು. ಜನರು ಸಹ ಮುಗಿಬಿದ್ದು ಖರೀದಿ ಮಾಡಿದರು. ಕೆಲವೆಡೆ ರಸ್ತೆಯ ಅಕ್ಕಪಕ್ಕದಲ್ಲಿಯೇ ಮಾರಾಟ ನಡೆಯುತ್ತಿರುವುದರಿಂದ ಸಂಚಾರಕ್ಕೆ ವ್ಯತ್ಯಯ ಉಂಟಾಗಿತ್ತು. ಪೊಲೀಸರು ಹರಸಾಹಸ ಪಟ್ಟು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.