ರಾಯಚೂರು: ‘ಇಲ್ಲಿನ ಸಂತೋಷ ನಗರದಲ್ಲಿ ಸಿ.ಎ ಸೈಟ್ ಕಬಳಿಸಿ ದೇವಸ್ಥಾನ ನಿರ್ಮಾಣ ಮಾಡಲು ಹೊರಟಿದ್ದ ಪಟ್ಟಭದ್ರಶಕ್ತಿಗಳ ವಿರುದ್ಧ ಪ್ರಗತಿಪರ ಸಂಘಟನೆಗಳು ನಡೆಸಿದ ಹೋರಾಟಕ್ಕೆ ಜಯ ಸಿಕ್ಕಿದೆ’ ಎಂದು ಜಿಲ್ಲೆಯ ಪ್ರಗತಿಪರ ಸಂಘಟನೆಗಳ ಹೋರಾಟಗಾರ ಅಶೋಕಕುಮಾರ ಜೈನ್ ಹೇಳಿದ್ದಾರೆ.

‘ಅತಿಕ್ರಮಣ ಮಾಡಿದ ಸರ್ಕಾರಿ ಶಾಲೆಯ ಜಾಗವನ್ನು ತೆರವು ಮಾಡಲು ಈ ಹಿಂದೆ ಹಲವಾರು ಬಾರಿ ಪ್ರತಿಭಟನೆ ಮಾಡಲಾಗಿತ್ತು. ಜಿಲ್ಲಾಡಳಿತ ತಡವಾಗಿಯಾದರೂ ನಮ್ಮ ಹೋರಾಟಕ್ಕೆ ಸ್ಪಂದಿಸಿ ಅತಿಕ್ರಮಣ ತೆರವು ಮಾಡಿದ್ದು ಅಭಿನಂದಾರ್ಹ’ ಎಂದು ತಿಳಿಸಿದ್ದಾರೆ.

ನಗರದ ಹಲವೆಡೆ ಸರ್ಕಾರಿ ಜಾಗ, ಕೋಟೆ ಕೊತ್ತಲ ಜಾಗಗಳನ್ನು ಒತ್ತುವರಿ ತೆರವುಗೊಳಿಸಿ, ಭೂಕಬಳಿಕೆ ಮಾಡಿರುವವ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಅಕ್ರಮವಾಗಿ ನಿರ್ಮಿಸಿದ ಕಟ್ಟಡಗಳನ್ನು ತೆರವುಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.