ಸಿಂಧನೂರು: ’ನ.10 ರಂದು ಸಿಂಧನೂರು ನಗರದ ಆರ್ಜಿಎಂ ಶಾಲಾ ಮೈದಾನದಲ್ಲಿ ಮಾನಸಿಕ ವಿಕಲಚೇತನರಿಗಾಗಿ ನಾಲ್ಕು ಜಿಲ್ಲೆಗಳ ವಲಯ ಮಟ್ಟದ ವಿಶೇಷ ಒಲಿಂಪಿಕ್ಸ್ ಹಮ್ಮಿಕೊಳ್ಳಲಾಗಿದೆ’ ಎಂದು ಮಾತೃಆಸರೆ ವಿಶೇಷ ಬುದ್ಧಿಮಾಂದ್ಯ ಮಕ್ಕಳ ಶಾಲೆಯ ಸಂಸ್ಥಾಪಕ ಹಾಲಯ್ಯ ಹಿರೇಮಠ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ವಿಶೇಷ ’ಒಲಿಂಪಿಕ್ಸ್ ಭಾರತ್ 2001’ರಲ್ಲಿ ಇಂಡಿಯನ್ ಟ್ರಸ್ಟ್ ಆ್ಯಕ್ಟ್ 1882ರ ಅಡಿಯಲ್ಲಿ ನೋಂದಾಯಿಸಲಾದ ರಾಷ್ಟ್ರೀಯ ಕ್ರೀಡಾ ಒಕ್ಕೂಟವಾಗಿದೆ. ಬೌದ್ಧಿಕ ಅಸಾಮಾರ್ಥ್ಯ ಹೊಂದಿರುವ ಮಕ್ಕಳಿಗೆ ಕ್ರೀಡೆಗಳ ಅಭಿವೃದ್ಧಿಗಾಗಿ ಆದ್ಯತೆಯ ಮೇರೆಗೆ ಭಾರತ ಸರ್ಕಾರವು ರಾಷ್ಟ್ರೀಯ ಕ್ರೀಡಾ ಫೆಡರೇಶನ್ ಎಂದು ಗುರುತಿಸಲ್ಪಟ್ಟಿದೆ. ಮಾಜಿ ಸಚಿವೆ ಶಶಿಕಲಾ ಜೊಲ್ಲೆ ಅವರು ವಿಶೇಷ ಬುದ್ಧಿಮಾಂದ್ಯ ಮಕ್ಕಳ ಬಗ್ಗೆ ಕಾಳಜಿ ವಹಿಸಿ ಕರ್ನಾಟಕ ರಾಜ್ಯದಲ್ಲಿ ಆಗಸ್ಟ್ 2024 ರಿಂದ ವಿಶೇಷ ಒಲಂಪಿಕ್ಸ್ ಪ್ರಾರಂಭಿಸಿದ್ದಾರೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಪ್ರಪ್ರಥಮ ಬಾರಿಗೆ ಸಿಂಧನೂರಿನಲ್ಲಿ ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ನಾಲ್ಕು ಜಿಲ್ಲೆಗಳನ್ನೊಳಗೊಂಡು ವಲಯ ಮಟ್ಟದ ವಿಶೇಷ ಒಲಂಪಿಕ್ಸ್ ಆಯೋಜಿಸಲಾಗಿದೆ. ಇದರ ಯಶಸ್ವಿಯಾಗಿ ಸಮಿತಿ ರಚಿಸಲಾಗಿದ್ದು, ಸಿ.ಟಿ.ಪಾಟೀಲ್ (ಅಧ್ಯಕ್ಷ), ಎಂ.ಅಮರೇಗೌಡ ವಕೀಲ (ಕಾರ್ಯಾಧ್ಯಕ್ಷ), ಎಸ್.ಶರಣೇಗೌಡ, ಚನ್ನನಗೌಡ ಪಾಟೀಲ್ (ಉಪಾಧ್ಯಕ್ಷರು), ಆರ್.ಸಿ.ಪಾಟೀಲ್ (ಖಜಾಂಚಿ), ಆರ್.ಪದ್ಮನಾಭ, ವಿಷ್ಣುವರ್ಧನರೆಡ್ಡಿ, ರವಿ ಹಿರೇಮಠ, ರಾಮದಾಸ್, ಪ್ರಭುರಾಜ್ (ಸದಸ್ಯರು) ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.

ಹೆಚ್ಚು ಸಾಮರ್ಥ್ಯ ಇವಿರುವ 8-11 ವರ್ಷದ ಬಾಲಕ-ಬಾಲಕಿಯರಿಗೆ 50, 100 ಮೀಟರ್ ಸಾಫ್ಟ್ಬಾಲ್ ಥ್ರೋ, 12-15 ವರ್ಷದವರಿಗೆ 100, 200 ಮೀಟರ್ ಶಾಟ್ಫುಟ್, 16-21 ವರ್ಷದವರಿಗೆ 100, 200 ಮೀಟರ್ ಶಾಟ್ಫುಟ್, 4/100 ಮೀಟರ್ ರಿಲೇ, 22 ವರ್ಷ ಮೇಲ್ಪಟ್ಟದವರಿಗೆ 100, 200 ಮೀಟರ್ ಶಾಟ್ಫುಟ್, ಕಡಿಮೆ ಸಾಮರ್ಥ್ಯವಿರುವ 8-11, 12-15, 16-21 ಹಾಗೂ 22 ವರ್ಷ ಮೇಲ್ಪಟ್ಟವರಿಗೆ 25 ಮೀಟರ್ ಟೆನ್ನಿಸ್ ಬಾಲ್ ಥ್ರೋ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದರು.

ರಾಯಚೂರಿನ 4 ಶಾಲೆಯಿಂದ 36, ವಿಜಯನಗರದ 2 ಶಾಲೆಯಿಂದ 42, ಕೊಪ್ಪಳದ 2 ಶಾಲೆಯಿಂದ 36 ಹಾಗೂ ಬಳ್ಳಾರಿಯ 5 ಶಾಲೆಯಿಂದ 56 ಒಟ್ಟು 170 ಮಾನಸಿಕ ವಿಕಲಚೇತನರು ಈ ವಿಶೇಷ ಒಲಂಪಿಕ್ಸ್ನಲ್ಲಿ ಭಾಗವಹಿಸಲಿದ್ದಾರೆ. ಅವರೊಂದಿಗೆ 50 ಜನ ಶಿಕ್ಷಕರು ಇರಲಿದ್ದಾರೆ. ಈ ಸ್ಪರ್ಧೆಯಲ್ಲಿ ವಿಜೇತರಾದವರು ಸೇರಿದಂತೆ ಭಾಗವಹಿಸಿದ ಎಲ್ಲರಿಗೂ ಮೆಡಲ್ ಮತ್ತು ಸರ್ಟಿಫಿಕೆಟ್ ನೀಡಲಾಗುವುದು. ಮೂಡಬಿದರೆಯಲ್ಲಿ ರಾಜ್ಯ ಮಟ್ಟದ ವಿಶೇಷ ಒಲಂಪಿಕ್ಸ್ ನಡೆಯಲಿದೆ ಎಂದು ತಿಳಿಸಿದರು.

ನ.10 ರಂದು ಬೆಳಿಗ್ಗೆ 10 ಗಂಟೆಗೆ ಆರ್ಜಿಎಂ ಶಾಲಾ ಮೈದಾನದಲ್ಲಿ ವಿಶೇಷ ಒಲಿಂಪಿಕ್ಸ್ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಮುಖ್ಯಅತಿಥಿಗಳಾಗಿ ತಹಶೀಲ್ದಾರ್ ಅರುಣ್ ಎಚ್.ದೇಸಾಯಿ, ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ಚಿಂತಕ ಚಿದಾನಂದಯ್ಯ ಗುರುವಿನ್, ವಿಶೇಷ ಬುದ್ದಿಮಾಂದ್ಯ ಮಕ್ಕಳ ಜಿಲ್ಲಾ ಅಧಿಕಾರಿ ಶ್ರೀದೇವಿ ಸೇರಿದಂತೆ ವಿಶೇಷ ಒಲಿಂಪಿಕ್ಸ್ ಕರ್ನಾಟಕ ರಾಜ್ಯ ನಿರ್ದೇಶಕರು, 10 ಜನ ತರಬೇತಿದಾರರು ಆಗಮಿಸಲಿದ್ದಾರೆ ಎಂದು ಹೇಳಿದರು.

ವಿಶೇಷ ಒಲಿಂಪಿಕ್ಸ್ ತಾಲ್ಲೂಕು ಸಮಿತಿ ಅಧ್ಯಕ್ಷ ಸಿ.ಟಿ.ಪಾಟೀಲ್, ಉಪಾಧ್ಯಕ್ಷ ಎಸ್.ಶರಣೇಗೌಡ, ಖಜಾಂಚಿ ಆರ್.ಸಿ.ಪಾಟೀಲ್, ಸದಸ್ಯ ಚಂದ್ರಶೇಖರ ಹಿರೇಮಠ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.