ಸಿಂಧನೂರು: ಜೋಳ ಖರೀದಿ ಕೇಂದ್ರದಲ್ಲಿ ಭ್ರಷ್ಟಾಚಾರ ನಡೆದಿದ್ದು, ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಗಳನ್ನು ಸೇವೆಯಿಂದ ಅಮಾನತು ಮಾಡಬೇಕು. ಕ್ರಿಮಿನಲ್ ಕೇಸ್ ದಾಖಲಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರೈತ ಸಂಘದ ತಾಲ್ಲೂಕು ಘಟಕದ ಪದಾಧಿಕಾರಿಗಳು ಮಿನಿವಿಧಾನಸೌಧದ ಮುಂದೆ ಪ್ರತಿಭಟಿಸಿ ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಅವರಿಗೆ ಮನವಿ ಸಲ್ಲಿಸಿದರು.

ಸರ್ಕಾರದ ನಿಯಮಾನುಸಾರದ ಪ್ರಕಾರ ಒಬ್ಬ ರೈತ ಬೆಳೆದ ಜೋಳ ಖರೀದಿ ಮಾಡಬೇಕಾದರೆ ಪಹಣಿ, ಆಧಾರ್, ಬ್ಯಾಂಕ್ ಪಾಸ್‍ಬುಕ್ ದಾಖಲಾತಿಗಳು ಬೇಕು. ಸಿಂಧನೂರು ತಾಲ್ಲೂಕಿನಲ್ಲಿ 7 ಲಕ್ಷ ಕ್ವಿಂಟಲ್‍ಗೂ ಹೆಚ್ಚು ಜೋಳ ಖರೀದಿಯಾಗಿದೆ ಎಂದು ವರದಿಯಿದೆ. ತಾಲ್ಲೂಕಿನಲ್ಲಿ ಶೇ 70ರಷ್ಟು ಭತ್ತ, ಶೇ 30ರಷ್ಟು ಮಾತ್ರ ಜೋಳ ಬೆಳೆಯುತ್ತಾರೆ. ಆದರೆ ತಾಲ್ಲೂಕಿನಲ್ಲಿ 7 ಲಕ್ಷ ಕ್ವಿಂಟಲ್ ಜೋಳ ಎಲ್ಲಿಂದ ಬಂದಿದೆ. ಈ ಕುರಿತು ಸಮಗ್ರ ತನಿಖೆ ಮಾಡಬೇಕು. ತೂಕದಲ್ಲಿಯೂ ವ್ಯತ್ಯಾಸ ಕಂಡು ಬಂದಿದೆ. ಈ ಭ್ರಷ್ಟಾಚಾರದಲ್ಲಿ ಅಧಿಕಾರಿಗಳು ಶಾಮೀಲಾಗಿದ್ದು, ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಟಿಯುಸಿಐ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್.ಯರದಿಹಾಳ, ಕೆಆರ್‌ಎಸ್ ಕಾರ್ಯದರ್ಶಿ ಚಿಟ್ಟಿಬಾಬು ಬೂದಿವಾಳ ಕ್ಯಾಂಪ್, ಸದಸ್ಯರಾದ ಪ್ರಸಾದ ಸುಕಾಲಪೇಟೆ, ಮಹ್ಮದ್ ಯಾಸೀನ್, ಯಲ್ಲಪ್ಪ ಭಜಂತ್ರಿ ಬೇರಿಗಿ, ಬುಡ್ಡಸಾಬ್ ಹಾಗೂ ಬಾಲಸ್ವಾಮಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.