ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮವು (ಎನ್ಡಬ್ಲುಕೆಆರ್ಟಿಸಿ) ಎಲ್ಲ ಬಸ್ಗಳಲ್ಲೂ ಜಿಪಿಎಸ್ (ಗ್ಲೊಬಲ್ ಪೊಜಿಸಿನಿಂಗ್ ಸಿಸ್ಟಮ್) ತಂತ್ರಜ್ಞಾನದ ಸಾಧನ ಅಳವಡಿಸುವುದಕ್ಕೆ ಸಿದ್ಧತೆ ಆರಂಭಿಸಿದೆ.

ಸಾಧನ ಪೂರೈಸುವ ಕಂಪೆನಿಗಾಗಿ ಟೆಂಡರ್ ಕರೆಯುವುದಕ್ಕೆ ನಿಗಮದ ಅಧಿಕಾರಿಗಳು ಕ್ರಮ ವಹಿಸಿದ್ದಾರೆ. ನಿಗಮದಲ್ಲಿ ಹೊಸದಾಗಿ ಸೇರ್ಪಡೆಯಾದ 372 ಬಸ್ಗಳಲ್ಲಿ ಈಗಾಗಲೇ ಜಿಪಿಎಸ್ ಸಾಧನ ಅಳವಡಿಸಲಾಗಿದೆ. ಇನ್ನುಳಿದ ಎಲ್ಲ ಬಸ್ಗಳಲ್ಲಿಯೂ ಜಿಪಿಎಸ್ ಸಾಧನ ಅಳವಡಿಸುವುದನ್ನು ಸರ್ಕಾರ ಕಡ್ಡಾಯ ಮಾಡಿದ್ದು, ಅಧಿಕಾರಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.

‘ಜಿಎಸ್ಪಿ ಸಾಧನ ಅಳವಡಿಸಿದರೆ, ಅದರಿಂದ ಸಂಚಾರ ಸೇವೆಯಲ್ಲಿ ಮತ್ತಷ್ಟು ನಿಖರತೆ ಬರುತ್ತದೆ. ಯಾವುದೇ ನಿಲ್ದಾಣಗಳಿಗೆ ಬಸ್ಗಳು ಆಗಮಿಸುವ ಮತ್ತು ತೆರಳುವ ನೈಜ ಸಮಯದ ಮಾಹಿತಿಯು ಪ್ರಯಾಣಿಕರಿಗೆ ಗೊತ್ತಾಗುತ್ತದೆ’ ಎಂದು ನಿಗಮದ ಅಧಿಕಾರಿಗಳು ’ಪ್ರಜಾವಾಣಿ’ಗೆ ತಿಳಿಸಿದರು.

ಈಗಾಗಲೇ ಜಿಪಿಎಸ್ ತಂತ್ರಜ್ಞಾನ ಅಳವಡಿಸಿದ ಹೊಸ ಬಸ್ಗಳ ಚಲನವಲನವು ಆನ್ಲೈನ್ ಮೂಲಕ ಕಂಪ್ಯೂಟರ್ ಸಾಫ್ಟ್ವೇರ್ನಲ್ಲಿ ದಾಖಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಪ್ರತಿಯೊಂದು ಬಸ್ಗಳು ಸಂಚರಿಸುವ ಮಾರ್ಗಗಳು ಮತ್ತು ನಿಲುಗಡೆ ಮಾಡಿದ ಸ್ಥಳ, ಎಷ್ಟು ಸಮಯ ನಿಲುಗಡೆ ಮಾಡಲಾಯಿತು ಎಂಬುದರ ಸಂಪೂರ್ಣ ಮಾಹಿತಿ ದಾಖಲಿಸುವ ವ್ಯವಸ್ಥೆ ಆಗಲಿದೆ.

ಸಾರ್ವಜನಿಕ ಬಳಕೆ: ವಾಯುವ್ಯ ಸಾರಿಗೆ ನಿಗಮದ ಬಸ್ಗಳು ಸಂಚರಿಸುವ ನೈಜ ಸ್ಥಳ ಮಾಹಿತಿಯನ್ನು ಸಾರ್ವಜನಿಕರು ಕೂಡಾ ತಮ್ಮ ಮೊಬೈಲ್ಗಳಲ್ಲಿ ಆನ್ಲೈನ್ ಮೂಲಕ ವೀಕ್ಷಿಸುವುದಕ್ಕೆ ಕ್ರಮೇಣ ಅವಕಾಶ ಮಾಡಬೇಕು ಎನ್ನುವುದು ನಿಗಮದ ಉದ್ದೇಶ. ಸಾರ್ವಜನಿಕರ ಬಳಕೆಗೆ ಎಂದಿನಿಂದ ಅವಕಾಶ ನೀಡಬೇಕು ಎನ್ನುವುದು ಇನ್ನೂ ಸಮಯ ನಿಗದಿಯಾಗಿಲ್ಲ. ಆದರೆ, ಆರಂಭದಲ್ಲಿ ನಿಗಮದ ಕಚೇರಿಗಳಲ್ಲಿ ಮಾತ್ರ ಜಿಪಿಎಸ್ ನಿರ್ವಹಣೆ ಸಿಮೀತವಾಗಿ ಜಾರಿಯಾಗಲಿದೆ.

ಅನಗತ್ಯ ವಿಳಂಬವಿಲ್ಲ: ಜಿಪಿಎಸ್ ತಂತ್ರಜ್ಞಾನ ಅಳವಡಿಕೆಯಿಂದಾಗಿ ಬಸ್ಗಳು ಅನಗತ್ಯವಾಗಿ ವಿಳಂಬ ಮಾಡುವುದು ತಪ್ಪಲಿದೆ. ಚಾಲಕರು ಮಾರ್ಗ ಬದಲಾವಣೆ ಮಾಡಿಕೊಂಡು ಸಂಚರಿಸುವುದು, ಬಸ್ ನಿಲುಗಡೆ ಮಾಡದೇ ಸಂಚರಿಸುವುದು ಹಾಗೂ ನಿಯಮಬಾಹಿರವಾಗಿ ನಿಲುಗಡೆ ಮಾಡುವುದೆಲ್ಲವೂ ಇನ್ಮುಂದೆ ಅಧಿಕಾರಿಗಳು ಕುಳಿತಲ್ಲೇ ಪತ್ತೆ ಮಾಡುವುದಕ್ಕೆ ಸಾಧ್ಯವಾಗಲಿದೆ. ಜಿಪಿಎಸ್ ಸಾಧನ ಅಳವಡಿಸಿದ ಬಳಿಕ ಬಸ್ ಚಾಲಕರು ಮತ್ತು ನಿರ್ವಾಹಕರ ಸಮಯ ಪರಿಪಾಲನೆ ಮತ್ತಷ್ಟು ಸಮರ್ಪಕವಾಗಲಿದೆ.

ಪ್ರಯಾಣಿಕರಿಗೆ ಸುರಕ್ಷತೆ ಹಾಗೂ ಸರಿಯಾದ ಮಾಹಿತಿ ಒದಗಿಸುವ ಹಿತದೃಷ್ಟಿಯಿಂದ ಎಲ್ಲ ವಾಹನಗಳಿಗೂ ಜಿಪಿಎಸ್ ಕಡ್ಡಾಯವಾಗಿ ಅಳವಡಿಸಬೇಕು ಎಂಬುದರ ಬಗ್ಗೆ ರಾಜ್ಯ ಸರ್ಕಾರವು 2022ರ ನವೆಂಬರ್ನಲ್ಲಿ ನಡೆದ ಸಚಿವ ಸಂಪುಟದಲ್ಲಿ ತೀರ್ಮಾನಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಎಲ್ಲ ಸಾರಿಗೆ ನಿಗಮಗಳಿಗೂ ಅನುದಾನದ ನೆರವು ಕೂಡಾ ಘೋಷಿಸಿದೆ.

ಒಟ್ಟು ಆರು ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ವಾಯುವ್ಯ ಸಾರಿಗೆ ನಿಗಮಕ್ಕೆ ಸಂಬಂಧಿಸಿದ 175 ಅಧಿಕೃತ ಬಸ್ ನಿಲ್ದಾಣಗಳಿವೆ. ನಿಗಮವು ಒಟ್ಟು 4,500 ಕ್ಕೂ ಹೆಚ್ಚು ಬಸ್ಗಳನ್ನು ಹೊಂದಿದೆ.

ಜಿಪಿಎಸ್ ಸಾಧನ ಅಳವಡಿಸುವ ಬಗ್ಗೆ ಈಗಾಗಲೇ ನಿರ್ಧಾರ ಕೈಗೊಳ್ಳಲಾಗಿದ್ದು ಚುನಾವಣೆ ಕಾರಣದಿಂದ ವಿಳಂಬವಾಗಿತ್ತು. ಈಗ ಟೆಂಡರ್ ಕರೆಯುವ ಪ್ರಕ್ರಿಯೆ ನಡೆಯುತ್ತಿದೆ
- ಪ್ರಿಯಾಂಗಾ ಎಂ., ಎನ್ಡಬ್ಲುಕೆಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕಿ

ಸುದೀರ್ಘವಾದ ಪೂರ್ವಸಿದ್ಧತೆ

‘ಬರೀ ಜಿಪಿಎಸ್ ಸಾಧನ ಅಳವಡಿಸುವುದು ಮುಖ್ಯವಾದ ಸಂಗತಿಯಲ್ಲ. ಜಿಪಿಎಸ್ ಮಾಹಿತಿ ಸಂಗ್ರಹಿಸುವುದು ಮತ್ತು ಅಗತ್ಯ ಇರುವ ಕಡೆಗಳಲ್ಲಿ ಬಳಸುವುದು ತುಂಬಾ ಮುಖ್ಯ. ಇದಕ್ಕಾಗಿ ಅಗತ್ಯ ಸಾಫ್ಟ್ವೇರ್ ಅಭಿವೃದ್ಧಿ ಮಾಡುವುದು ಮತ್ತು ಆ್ಯಪ್ ಸಿದ್ಧಪಡಿಸುವ ವಿಚಾರಗಳು ಪ್ರಸ್ತಾಪಕ್ಕೆ ಬಂದಿವೆ. ಹೊಸ ತಂತ್ರಜ್ಞಾನ ಅಳವಡಿಕೆಗೆ ಬೇಕಾಗುವ ಅನುದಾನ ಮತ್ತು ಅನುಕೂಲತೆಗಳ ಕುರಿತು ಪರಾಮರ್ಶೆ ಇನ್ನೂ ನಡೆಯುತ್ತಿದೆ. ಜಿಪಿಎಸ್ ಸಾಧನ ಪೂರೈಸುವ ಕಂಪೆನಿಗಾಗಿ ಟೆಂಡರ್ ಸಿದ್ಧತೆ ಮಾಡಿದ್ದು ಪೂರ್ವಸಿದ್ಧತೆಯನ್ನು ಸುದೀರ್ಘ ಮತ್ತು ಸ್ಪಷ್ಟವಾಗಿ ಮಾಡಿಕೊಳ್ಳಲಾಗುತ್ತಿದೆ’ ಎಂದು ನಿಗಮದ ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.