ಮಸ್ಕಿ: ಶ್ರಾವಣಮಾಸದ ಮೊದಲ ಸೋಮವಾರ ಪ್ರಸಿದ್ಧಿ ಪಡೆದ ಪಟ್ಟಣದ ಬೆಟ್ಟದ ಮೇಲಿನ ಮಲ್ಲಯ್ಯನ (ಮಲ್ಲಿಕಾರ್ಜುನ) ದರ್ಶನಕ್ಕೆ ಭಕ್ತ ಸಾಗರವೇ ಹರಿದುಬಂತು.

ಕಲ್ಲಿನಲ್ಲಿ ಮೂಡಿರುವ ಮಲ್ಲಯ್ಯನಿಗೆ ಬೆಳಿಗ್ಗೆ ಮೂರು ಗಂಟೆಯಿಂದಲೇ ಅರ್ಚಕರಿಂದ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಮಂತ್ರ ಘೋಷಗಳೊಂದಿಗೆ ನಡೆದವು.

ಮಸ್ಕಿ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಭಕ್ತರ ಜೊತೆಗೆ ಅಕ್ಕಪಕ್ಕದ ಜಿಲ್ಲೆಗಳಿಂದ ಅಗಮಿಸಿದ್ದ ಸಾವಿರಾರು ಭಕ್ತರು ಬೆಟ್ಟ ಹತ್ತಿ ಬೆಳಿಗ್ಗೆ 3ರಿಂದಲೇ ಮಲ್ಯಯ್ಯನ ದರ್ಶನಕ್ಕೆ ಸಾಲುಗಟ್ಟಿ ನಿಂತಿದ್ದು ದೇವಸ್ಥಾನದಲ್ಲಿ ಕಂಡುಬಂತು. ಮಹಿಳೆಯರು, ಮಕ್ಕಳು ಸೇರಿದಂತೆ ಅನೇಕರು ಸಾಲುಗಟ್ಟಿ ಗಂಟೆಗಟ್ಟಲೇ ಕಾದು ದರ್ಶನ ಪಡೆದರು.

ದೇವರ ದರ್ಶನಕ್ಕೆ ನೂಕು ನುಗ್ಗಲು ಆಗದಂತೆ ಮುಂಜಾಗೃತಾ ಕ್ರಮವಾಗಿ ಪೊಲೀಸರು ಬಂದೋಬಸ್ತ್ ಮಾಡಿ ಸರದಿ ಮೇಲೆ ಭಕ್ತರನ್ನು ದೇವಸ್ಥಾನದ ಒಳಗೆ ಬಿಟ್ಟರು.

ಶ್ರಾವಣಮಾಸದ ಸೋಮವಾರ ಸೇರಿದಂತೆ ಪ್ರತಿದಿನ ನೂರಾರು ಭಕ್ತರು ಬೆಟ್ಟ ಹತ್ತಿ ಮಲ್ಲಯ್ಯನಿಗೆ ಹರಕೆ ತೀರಿಸಿ ದರ್ಶನ ಪಡೆಯುವುದು ವಾಡಿಕೆ. ಕೊನೆಯ ಸೋಮವಾರ ಮಲ್ಲಯ್ಯ ಜಾತ್ರೆ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ.

ಎಲ್ಲ ಧರ್ಮ, ಜಾತಿಯ ಜನರು ಬೆಟ್ಟ ಹತ್ತಿ ಮಲ್ಲಯ್ಯನ ದರ್ಶನ ಪಡೆಯುತ್ತಿರುವುದು ಇಲ್ಲಿನ ವಿಶೇಷಗಳಲ್ಲಿ ಒಂದಾಗಿದೆ. ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣವಾದ ಈ ದೇವಸ್ಥಾನ ಕಲ್ಲು ಶಿಲೆಗಳಿಂದ ಕೂಡಿದೆ. ಗಂಡಬೇರುಂಡ, ಎನ್‌ಸಿಆರ್‌ಟಿಯ ಲಾಂಛನ ಸೇರಿದಂತೆ ಅನೇಕ ಕಲಾಕೃತಿಗಳು ಭಕ್ತರ ಗಮನ ಸೆಳೆಯುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.