ರಾಯಚೂರು: ಸಂಸದ ಅನಂತಕುಮಾರ ಹೆಗಡೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿ ಸಂಬೋಧಿಸಿ, ನಿಂದಿಸಿರುವುದು ಖಂಡನೀಯ. ಮುಖ್ಯಮಂತ್ರಿ ಸ್ಥಾನದಲ್ಲಿರುವ ಸಿದ್ದರಾಮಯ್ಯ ಅವರಲ್ಲಿ ಅನಂತಕುಮಾರ ಕ್ಷಮೆಯಾಚಿಸಬೇಕು ಎಂದು ಕುರುಬ ಸಮಾಜದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಬಸವಂತಪ್ಪ ಹೇಳಿದರು.

ಸುಸಂಸ್ಕೃತ ಸಮಾಜದಲ್ಲಿ ಹುಟ್ಟಿದ ಅನಂತಕುಮಾರ ಮುಖ್ಯಮಂತ್ರಿಯವರ ಬಗ್ಗೆ ಹಗುರವಾಗಿ ಮಾತನಾಡಿದ್ದು ಸರಿಯಲ್ಲ. ಅವರ ಬಗ್ಗೆ ಮಾತನಾಡುವ ಯೋಗ್ಯತೆಯೂ ಸಂಸದರಿಗೆ ಇಲ್ಲ ಎಂದು ಮಾಧ್ಯಮ ಗೋಷ್ಠಿಯಲ್ಲಿ ಆಕ್ರೋಶ ಹೊರಹಾಕಿದರು.

ಸಂಸದರಾಗಿ ನಾಲ್ಕು ವರ್ಷ ಏನೂ ಕೆಲಸ ಮಾಡದೆ ಈಗ ಚುನಾವಣೆ ಸಮೀಪಿಸಿದಾಗ ರಾಜಕೀಯ ಕಾರಣಕ್ಕಾಗಿ ಏಕ ವಚನದಲ್ಲಿ ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಲುಮತ ಸಮಾಜದ ಎರಡನೇ ಆರಾಧ್ಯದೈವ ಇಂತವರಿಗೆ ಏಕವಚನದಲ್ಲಿ ಮಾತನಾಡಿದರೆ ಸಹಿಸಿಕೊಳ್ಳುವುದಿಲ್ಲ. ರಾಯಚೂರಿಗೆ ಕಾಲಿಟ್ಟರೆ ಅನಂತಕುಮಾರಿಗೆ ಕಲ್ಲಿನಿಂದ ಹೊಡೆಯುತ್ತೇವೆ ಎಂದು ಎಚ್ಚರಿಸಿದರು.

ಸಮಾಜದ ಮುಖಂಡರಾದ ಈಶಪ್ಪ, ನಾಗರಾಜ, ಹನುಮಂತಪ್ಪ, ಭೀರಪ್ಪ, ನಾಗೇಂದ್ರಪ್ಪ ಮಟಮಾರಿ, ಸಂಗಮೇಶ, ಕೆ.ಬಸವರಾಜ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.