ಸಿಂಧನೂರು ತಾಲ್ಲೂಕಿನ 54ನೇ ವಿತರಣಾ ಕಾಲುವೆಯ ಕೆಳಭಾಗದ ರೈತರ ಜಮೀನು ನೀರಾವರಿ ಪ್ರದೇಶಕ್ಕೊಳಪಟ್ಟಿದ್ದರೂ ಹಲವು ವರ್ಷಗಳಿಂದ ದೀಪದ ಕೆಳಗಿನ ಕತ್ತಲಿನಂತೆ ನೀರಿನಿಂದ ವಂಚಿತರಾಗಿದ್ದರು. ಆದ್ದರಿಂದ ಈಗಾಗಲೇ ವಳಬಳ್ಳಾರಿ ಏತನೀರಾವರಿ ಯೋಜನೆ ಪೂರ್ಣಗೊಳಿಸಲಾಗಿದ್ದು ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹಕಾರದಿಂದ ಇತ್ತೀಚಿಗೆ ತಿಮ್ಮಾಪುರ ಏತನೀರಾವರಿ ಯೋಜನೆಗೆ ಕಾಯಕಲ್ಪ ದೊರೆತಿದೆ
- ಹಂಪನಗೌಡ ಬಾದರ್ಲಿ ಶಾಸಕ
ಸಿಂಧನೂರು ಹಿಂದೆ ನಮ್ಮ ಜಮೀನುಗಳಿಗೆ ಅಲ್ಪಸ್ವಲ್ಪ ನೀರು ಸಿಗುತ್ತಿತ್ತು. ಇತ್ತೀಚಿನ 20 ವರ್ಷಗಳಿಂದ ನೀರು ಕಣ್ಣೀರಾಗಿ ಮಾರ್ಪಟ್ಟಿತ್ತು. ಜಮೀನುಗಳಿದ್ದರೂ ಬೆಂಗಳೂರಿಗೆ ಕೂಲಿ ಕೆಲಸಕ್ಕೆ ಹೋಗಬೇಕಾಗಿತ್ತು. ತಿಮ್ಮಾಪುರ ಏತನೀರಾವರಿಯಿಂದ ನಮ್ಮ ಬಾಳಿಗೆ ಬೆಳಕು ಸಿಕ್ಕಿದೆ
-ಬಿ.ಎಚ್.ನಾಯಕ ರೈತ
ಕಳೆದ 20 ವರ್ಷಗಳಿಂದ ತಿಮ್ಮಾಪುರ ಏತ ನೀರಾವರಿ ಯೋಜನೆ ಜಾರಿಗೊಳಿಸಿ ನೀರಾವರಿ ಸೌಕರ್ಯ ಒದಗಿಸಿ ಕೊಡುವಂತೆ ಪ್ರತಿವರ್ಷ ಹಂಪನಗೌಡರನ್ನು ಬೆಂಬಿಡದೆ ರೈತರು ಕಾಡಿದ್ದರಿಂದ ಈ ಯೋಜನೆ ತೀವ್ರವಾಗಿ ಮುಗಿದಿದೆ
-ಅರುಣಕುಮಾರ ಯಾಪಲಪರ್ವಿ ರೈತ
54ನೇ ವಿತರಣಾ ಕಾಲುವೆ 42 ಕಿ.ಮೀ ಉದ್ದವಿದ್ದು ಈ ಕಾಲುವೆ ವ್ಯಾಪ್ತಿಯಲ್ಲಿ ಬರುವ ಕೆಳಭಾಗದ ರೈತರಿಗೆ ನೀರು ಪೂರೈಸಲು ಸಾಧ್ಯವಾಗುತ್ತಿರಲಿಲ್ಲ. ತಿಮ್ಮಾಪುರ ಏತನೀರಾವರಿ ಯೋಜನೆಯನ್ನು ಬೇಸಿಗೆ ಕಾಲದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದರು. ಈಗ ನದಿಗೆ ನೀರು ಬಂದಿರುವುದರಿಂದ ಯೋಜನೆ ಕಾರ್ಯಾನುಷ್ಠಾನಗೊಂಡಿದೆ