ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಯಚೂರು: ಕೆರೆಯಲ್ಲಿನ ಮೊಸಳೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ ಗ್ರಾಮಸ್ಥರು

Published : 20 ಸೆಪ್ಟೆಂಬರ್ 2024, 8:23 IST
Last Updated : 20 ಸೆಪ್ಟೆಂಬರ್ 2024, 8:23 IST
ಫಾಲೋ ಮಾಡಿ
Comments

ರಾಯಚೂರು: ಕೃಷ್ಣಾ ನದಿ ಮೂಲಕ ತಾಲ್ಲೂಕಿನ ಡಿ.ರಾಂಪುರ ಕೆರೆ ಸೇರಿಕೊಂಡಿದ್ದ ಭಾರೀ ಗಾತ್ರದ ಮೊಸಳೆಯನ್ನು ಗುರುವಾರ ಗ್ರಾಮಸ್ಥರೇ ಸೆರೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.

ಗ್ರಾಮದ ಕೆರೆಗೆ ನೀರು ಕುಡಿಯಲು ಹೋದ ಕುರಿಗಳನ್ನು, ಹಂದಿಗಳನ್ನು ಮೊಸಳೆ ತಿಂದು ಹಾಕುತ್ತಿತ್ತು. ಇದನ್ನು ಗಮನಿಸಿದ್ದ ಗ್ರಾಮಸ್ಥರು ರಾಯಚೂರು ಪ್ರಾದೇಶಿಕ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಫೋನ್‌ ಮೂಲಕ ತಿಳಿಸಿದ್ದರು. ಆದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಗ್ರಾಮಸ್ಥರ ಮನವಿಗೆ ಸ್ಪಂದಿಸಿರಲಿಲ್ಲ.

ಸಾಕು ಜಾನುವಾರುಗಳ ಮೇಲೆ ದಾಳಿ ನಡೆಸಿ ನೀರೊಳಗೆ ಎಳೆದೊಯ್ಯುತ್ತಿದ್ದ ಮೊಸಳೆ ಮನುಷ್ಯರ ಮೇಲೆ ದಾಳಿ ನಡೆಸಿದರೆ ಕಷ್ಟ ಎಂದು ಅರಿತ ಗ್ರಾಮದ ಯುವಕರು ಮೊಸಳೆ ಹಿಡಿಯಲು ಯೋಜನೆ ರೂಪಿಸಿದ್ದರು. ಎರಡು ದಿನ ಕೆರೆ ಬಳಿ ಯಾರೂ ಹೋಗದಂತೆ ಹಾಗೂ ಜಾನುವಾರುಗಳನ್ನು ತರದಂತೆ ಎಚ್ಚರಿಕೆ ನೀಡಿದ್ದರು. ಗುರುವಾರ ಕೆರೆಯಲ್ಲಿ ಮೀನಿನ ಬಲೆ ಹಾಕಿದಾಗ ಮೊಸಳೆ ಅದರೊಳಗೆ ಸಿಕ್ಕಿ ಬಿದ್ದಿದೆ.

ಬಳಿಕ ಅರಣ್ಯ ಇಲಾಖೆ ಸಿಬಂದಿ ಸ್ಥಳಕ್ಕೆ ಬಂದು ಮೊಸಳೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡು ಗ್ರಾಮದಿಂದ ಸ್ವಲ್ಪದಲ್ಲಿ ದೂರದಲ್ಲಿರುವ ಕೃಷ್ಣಾ ನದಿಗೆ ಬಿಟ್ಟಿದ್ದಾರೆ. ಕೆರೆಯಲ್ಲಿ ಇನ್ನೂ ಎರಡು ಮೊಸಳೆಗಳು ಇವೆ ಎಂದು ಗ್ರಾಮಸ್ಥರು ಹೇಳಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಜನ ಹಾಗೂ ಜಾನುವಾರಗಳ ರಕ್ಷಣೆಗೆ ಉಳಿದ ಎರಡು ಮೊಸಳೆಗಳನ್ನಾದರೂ ಹಿಡಿದು ನದಿಗೆ ಬಿಡಬೇಕು ಎಂದು ಡಿ.ರಾಂಪುರ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT