ಚನ್ನಪಟ್ಟಣ: ಎನ್‌ಎಸ್‌ಎಸ್ ಶಿಬಿರಗಳು ಗ್ರಾಮೀಣ ಪ್ರದೇಶದಲ್ಲಿರುವ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುತ್ತವೆ ಎಂದು ಎಲೆತೋಟದಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಎ.ನಿವೇದಿತಾ ಹೇಳಿದರು.

ತಾಲ್ಲೂಕಿನ ಎಲೆತೋಟದಹಳ್ಳಿಯಲ್ಲಿ ನಗರದ ಜ್ಞಾನ ಸರೋವರ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಏರ್ಪಡಿಸಿರುವ 2024-25 ನೇ ಸಾಲಿನ ವಿಶೇಷ ವಾರ್ಷಿಕ ಶಿಬಿರಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.

ವಿದ್ಯಾರ್ಥಿಗಳು ಗ್ರಾಮದಲ್ಲಿ ಶ್ರಮದಾನದ ಜೊತೆಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ಶ್ಲಾಘನೀಯವಾಗಿದೆ. ಶಿಬಿರಕ್ಕೆ ಗ್ರಾಮದ ಜನತೆ ಮತ್ತು ಪಂಚಾಯಿತಿಯ ಸಹಕಾರ ಇರುತ್ತದೆ ಎಂದು ತಿಳಿಸಿದರು.

ಮಹದೇಶ್ವರ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಎಂ.ಬಿ. ರಾಹುಲ್ ರಾಜೇ ಅರಸ್ ಮಾತನಾಡಿ, ಇಂತಹ ಶಿಬಿರಗಳಿಂದ ಯುವಕರ ಬೌದ್ಧಿಕ ವಿಕಸನವಾಗುತ್ತದೆ. ಶಿಬಿರದ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳು ಸೇವಾ ಮನೋಭಾವ ರೂಢಿಸಿಕೊಳ್ಳಬೇಕು ಎಂದರು.

ಪದವಿ ಕಾಲೇಜಿನ ಪ್ರಾಂಶುಪಾಲ ಬಿ.ವಿ. ಜಯರಾಮೇಗೌಡ, ಮಹದೇಶ್ವರ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ಆರ್. ಆದರ್ಶ ಕುಮಾರ್, ಕಾಲೇಜಿನ ಪ್ರಾಂಶುಪಾಲೆ ಬಿ.ಎಸ್. ಹೇಮಲತಾ, ಮತ್ತಿಕೆರೆಯ ಸಾರ್ವಜನಿಕ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಹೇಶ್, ಗ್ರಾ.ಪಂ. ಸದಸ್ಯೆ ಬೇಬಿ ಸ್ವಾಮಿ, ಎಂಪಿಸಿಎಸ್ ಅಧ್ಯಕ್ಷ ಬಸವರಾಜು, ರೋಟರಿ ಟಾಯ್ಸ್ ಸಿಟಿ ಶಾಖೆಯ ಅಧ್ಯಕ್ಷ ಎಂ.ರಾಜೇಶ್, ಪದಾಧಿಕಾರಿಗಳಾದ ಯೋಗೇಶ್ ಚಕ್ಕರೆ, ನಿತಿನ್, ರಘು, ಗ್ರಾಮದ ಕೆ.ಪುಟ್ಟಲಿಂಗಯ್ಯ, ವೈ.ವಿ ಬಸವರಾಜು, ಹಳೇಹಳ್ಳಿಯ ಶಿವು, ಅಂಚೀಪುರದ ಹೊನ್ನೇಗೌಡ, ರಾಜೇಶ್ವರಿ ನಾಗೇಶ್, ಶಿಬಿರಾಧಿಕಾರಿ ಎಚ್.ಸಿ ಹೊಳಸಾಲಯ್ಯ, ಸಹ ಶಿಬಿರಾಧಿಕಾರಿಗಳಾದ ಎಚ್.ಎಸ್. ಜಾಕೀರ್ ಹುಸೇನ್, ವಿ.ವಿನಯ್ ಕುಮಾರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.