ಕನಕಪುರ: ಹಣ ಡ್ರಾ ಮಾಡಿಕೊಡಲು ಅಪರಿಚಿತ ವ್ಯಕ್ತಿಗೆ ಎಟಿಎಂ ಕಾರ್ಡ್ ಕೊಟ್ಟಾಗ ಅದನ್ನು ಅದಲು ಬದಲು ಮಾಡಿ ಬೇರೆ ಎಟಿಎಂಗಳಲ್ಲಿ ₹ 32,130 ಹಣ ಡ್ರಾ ಮಾಡಿ ವಂಚಿಸಿರುವ ಘಟನೆ ಈಚೆಗೆ ನಡೆದಿದ್ದು, ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲ್ಲೂಕಿನ ತಿಗಳರ ಹೊಸಳ್ಳಿಯ ವೆಂಕಟಗಿರಿ ಹಣ ಕಳೆದುಕೊಂಡಿರುವವರು. ಇವರು ಸೆ. 25ರಂದು ಕನಕಪುರದ ಯೂನಿಯನ್ ಬ್ಯಾಂಕ್ ಪಕ್ಕದಲ್ಲಿರುವ ಎಟಿಎಂನಲ್ಲಿ ಅವರ ಪತ್ನಿ ಜಯಮ್ಮ ಖಾತೆಯಲ್ಲಿರುವ ಹಣವನ್ನು ಡ್ರಾ ಮಾಡಲು ತೆರಳಿದ್ದರು. ಅವಿದ್ಯಾವಂತರಾಗಿದ್ದರಿಂದ ಎಟಿಎಂನಲ್ಲಿ ಇದ್ದಂತಹ ಅಪರಿಚಿತ ವ್ಯಕ್ತಿಗೆ ಹಣ ಡ್ರಾ ಮಾಡಿಕೊಡಲು ಹೇಳಿದ್ದಾರೆ. ಆ ವ್ಯಕ್ತಿ ಎಟಿಎಂ ಕಾರ್ಡ್ ಅದಲು ಬದಲು ಮಾಡಿ ಹಣ ಬರುತ್ತಿಲ್ಲವೆಂದು ಹೇಳಿ, ವೆಂಕಟಗಿರಿ ಅವರಿಗೆ ಅದೇ ರೀತಿ ಇರುವ ಎಟಿಎಂ ಕಾರ್ಡ್ ಕೊಟ್ಟು ಹೋಗಿದ್ದಾನೆ.

ಸೆ.27ರಂದು ಬ್ಯಾಂಕಿನಲ್ಲಿ ಪಾಸ್ ಪುಸ್ತಕ ಎಂಟ್ರಿ ಮಾಡಿಸಿದಾಗ ಬೇರೆ ಬೇರೆ ಎಟಿಎಂಗಳಲ್ಲಿ ₹ 32130 ಹಣ ಡ್ರಾ ಮಾಡಿರುವುದು ನಮೂದಾಗಿದೆ. ವಂಚನೆ ಹೋಗಿರುವುದನ್ನು ಅರಿತ ವೆಂಕಟಗಿರಿ ಅವರು ನಡೆದ ಘಟನೆಯನ್ನು ತಿಳಿಸಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.