ರಾಮನಗರ: ಬಿಡದಿ ಧ್ಯಾನಪೀಠದ ನಿತ್ಯಾನಂದ ಸ್ವಾಮೀಜಿ ವಿರುದ್ಧ ತನಿಖೆಗೆ ಒತ್ತಾಯಿಸಿ ಅವರ ಮಾಜಿ ಶಿಷ್ಯೆಯೂ ಆಗಿರುವ ಜರ್ಮನಿ ಪ್ರಜೆ ಸಾರಾ ಲಾಂಡ್ರಿ ಎಂಬುವರು ಕರ್ನಾಟಕ ಡಿಜಿಪಿಗೆ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.

ಬಿಡದಿ ಆಶ್ರಮದಲ್ಲಿ ಮಕ್ಕಳಿಗೆ ಕಿರುಕುಳ ನೀಡುತ್ತಿದ್ದು, ಇದರ ತನಿಖೆ ನಡೆಸಬೇಕು ಎಂದು ಕೋರಿ ಸಾರಾ ಎರಡು ವರ್ಷದ ಹಿಂದೆ ರಾಮನಗರ ಹಾಗೂ ಬಿಡದಿ ಪೊಲೀಸರಿಗೆ ಇ–ಮೇಲ್ ಮೂಲಕ ದೂರು ನೀಡಿದ್ದರು. ‘ ಈ ಪ್ರಕರಣದಲ್ಲಿ ದೂರುದಾರರು ಯಾರು ಎಂಬುದನ್ನು ಖಾತ್ರಿಪಡಿಸಿಕೊಳ್ಳುವ ಅಗತ್ಯ ಇದೆ. ಹಾಗಾದಲ್ಲಿ ಮಾತ್ರ ತನಿಖೆ ಮುಂದುವರಿಸಲು ಸಾಧ್ಯ. ಹೀಗಾಗಿ ಬಿಡದಿ ಇಲ್ಲವೇ ಭಾರತದ ಯಾವುದೇ ಠಾಣೆಗೆ ಬಂದು ತಾವು ದೂರು ನೀಡಿದಲ್ಲಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ರಾಮನಗರ ಪೊಲೀಸರು ಉತ್ತರ ನೀಡಿದ್ದರು.

ಅತ್ಯಾಚಾರ ಆರೋಪ:ನಿತ್ಯಾನಂದ ವಿರುದ್ಧ ಬ್ಲೂ ಕಾರ್ನರ್ ನೋಟಿಸ್

ಎರಡು ವರ್ಷದ ಬಳಿಕ, ರಾಮನಗರ ಪೊಲೀಸರ ಹಿಂಬರಹವನ್ನು ಟ್ವೀಟ್ ಮಾಡಿರುವ ಸಾರಾ, ಈ ಬಗ್ಗೆ ಪೊಲೀಸ್ ಇಲಾಖೆಯ ಮೇಲಧಿಕಾರಿಗಳು ಈಗಲಾದರೂ ಪರಿಶೀಲಿಸಿ ಕ್ರಮ ಕೈಗೊಳ್ಳಿ ಎಂದು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.