ರಾಮನಗರ: ಕೋವಿಡ್ನಿಂದ ರಾಜ್ಯದಲ್ಲಿ 4 ಲಕ್ಷ ಜನರು ಮೃತಪಟ್ಟಿದ್ದು, ಅವರೆಲ್ಲರಿಗೂ ಸರ್ಕಾರ ಪರಿಹಾರ ವಿತರಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಗ್ರಹಿಸಿದರು.

ಕನಕಪುರದಲ್ಲಿ ಮಂಗಳವಾರ ಪತ್ರಕರ್ತರ ಜೊತೆ ಅವರು ಮಾತನಾಡಿದರು. ಕೋವಿಡ್ನಿಂದ ಆಸ್ಪತ್ರೆಗಳಲ್ಲಿ ಸತ್ತವರಿಗಷ್ಟೇ ಸರ್ಕಾರ ಪರಿಹಾರ ಕೊಡುತ್ತಿದೆ. ಆದರೆ ವಾಸ್ತವದಲ್ಲಿ ಮೃತರ ಸಂಖ್ಯೆಯೇ ಬೇರೆ ಇದೆ. ಹೀಗಾಗಿ ಸರ್ಕಾರ ಪಿಡಿಒಗಳ ಮನೆ ಮನೆ ಸರ್ವೆ ನಡೆಸಿ ನೊಂದವರಿಗೆ ಸ್ವಯಂಪ್ರೇರಿತವಾಗಿ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.

ಖರೀದಿ ನಿಲ್ಲಿಸದಿರಿ: ಬೆಂಬಲ ಬೆಲೆ ಅಡಿ ರಾಗಿ ಸೇರಿದಂತೆ ಪ್ರಮುಖ ಉತ್ಪನ್ನಗಳ ಖರೀದಿಗೆ ಸರ್ಕಾರ ಮಿತಿ ವಿಧಿಸಿರುವುದು ಸರಿಯಲ್ಲ. ಈ ಹಿಂದಿನ ಪದ್ದತಿಯನ್ನೇ ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು 'ಯತ್ನಾಳ್ ರೀತಿ ನಾನು ರಸ್ತೆಯಲ್ಲಿ ಮಾತನಾಡುವುದಿಲ್ಲ. ಸಮಯ ಬಂದಾಗ ಹೇಳುತ್ತೇನೆ' ಎಂದರು.

ಸಂಪ್ರದಾಯ ಮುರಿಯುವ ಮನೆ ಮುರುಕ ನಿರ್ಧಾರವನ್ನು ಕೇಂದ್ರ ಹಿಂಪಡೆಯಲಿ: ಡಿಕೆಶಿ

ಮುಂಬರುವ ವಿಧಾನಸಭೆ ಚುನಾವಣೆಗೆ ಡಿ.ಕೆ. ಸುರೇಶ್ ಸ್ಪರ್ಧೆ ವದಂತಿ ಕುರಿತು ಪ್ರತಿಕ್ರಿಯಿಸಿ 'ಸದ್ಯ ಅವರನ್ನು ಜನ ಪಾರ್ಲಿಮೆಂಟಿಗೆ ಆರಿಸಿ ಕಳುಹಿಸಿದ್ದಾರೆ. ಅದನ್ನು ನೋಡೋಣ' ಎಂದರು.

ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಗೆ ವಿಧಿಸಿರುವ ನಿರ್ಬಂಧ ತೆಗೆದುಹಾಕಿ: ಸಿದ್ದರಾಮಯ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.