ರಾಮನಗರ: ಇಲ್ಲಿನ ಕೆಂಗಲ್ ಆಂಜನೇಯ ಸ್ವಾಮಿ ದೇಗುಲದ ಮುಂಭಾಗ ಬೆಂಗಳೂರು–ಮೈಸೂರು ಹೆದ್ದಾರಿ ಪಕ್ಕ ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಶುಕ್ರವಾರ ಮಾವು ಮಾರಾಟ ಮೇಳ ಆರಂಭಗೊಂಡಿತು.

ಒಟ್ಟು 27 ಮಳಿಗೆಗಳಲ್ಲಿ ರೈತರಿಂದ ಗ್ರಾಹಕರಿಗೆ ನೇರ ಮಾವು ಮಾರಾಟ ನಡೆದಿದೆ. ಕಾರ್ಬೈಡ್ ಮುಕ್ತ, ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳನ್ನು ಮಾರಾಟಕ್ಕೆ ಇಡಲಾಗಿದೆ.

ಪ್ರತಿ ಕೆ.ಜಿ.ಗೆ ಬದಾಮಿ₹ 120, ರಸಪುರಿ ₹ 90, ಸೇಂದೂರ ₹ 63 , ಮಲ್ಲಿಕಾ ₹ 110, ಬೈಗಾನ್ ಪಲ್ಲಿ ₹ 80 ಮಲಗೋವಾ ₹ 160, ತೋತಾಪುರಿ ₹ 30 ದರ ನಿಗದಿಪಡಿಸಲಾಗಿದೆ.

'ಇದಲ್ಲದೆ ಕನಕಪುರ ರಸ್ತೆಯಲ್ಲಿ ಇರುವ ರವಿಶಂಕರ್ ಗುರೂಜಿ ಆಶ್ರಮದ ಮುಂಭಾಗವೂ ಮಾವು ಮೇಳ ನಡೆದಿದೆ. ಇದೇ 15ರವರೆಗೆ ಮಾರಾಟ ನಡೆಯಲಿದೆ. ಗ್ರಾಹಕರಿಂದ ಪ್ರತಿಕ್ರಿಯೆ ನೋಡಿಕೊಂಡು ಮೇಳದ ಅವಧಿ ವಿಸ್ತರಿಸಲಾಗುವುದು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಮುನೇಗೌಡ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.