ಮಾಗಡಿ: ಅಂಗನವಾಡಿ ಕಾರ್ಯಕರ್ತರು ಉತ್ತಮ ಸಮಾಜ ನಿರ್ಮಾಣಕ್ಕಾಗಿ ಸಮಾಜಮುಖಿಯಾಗಿ ಕೆಲಸ ಮಾಡಬೇಕು. ದಿನನಿತ್ಯ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಹಾಜರಾತಿ, ಅವರಿಗೆ ಗುಣಮಟ್ಟದ ಪೌಷ್ಟಿಕ ಆಹಾರ ವಿತರಣೆ, ಅಂಗನವಾಡಿಯಲ್ಲಿ ಮೂಲ ಸಮಸ್ಯೆಗಳ ಕುರಿತು ಮೇಲಧಿಕಾರಿಗಳಿಗೆ ಸರ್ಕಾರ ವಿತರಿಸಿರುವ ಸ್ಮಾರ್ಟ್ ಫೋನ್ ಮೂಲಕವೇ ಎಲ್ಲ ಮಾಹಿತಿ ನೀಡಬಹುದು ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸಿಡಿಪಿಒ ಇಲಾಖೆ ಏರ್ಪಡಿಸಿದ್ದ ಅಂಗನವಾಡಿ ಕಾರ್ಯಕರ್ತರಿಗೆ ಸ್ಮಾರ್ಟ್ ಫೋನ್ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸ್ಮಾಟ್ ಫೋನ್ ಮೂಲಕ ಸರ್ಕಾರದ ನಿಯಮ, ಸೌಲಭ್ಯ ಮೊಬೈಲ್ನಲ್ಲಿ ತಿಳಿದುಕೊಳ್ಳುವ ಅವಕಾಶ ಕಲ್ಪಿಸಲಾಗಿದೆ ಎಂದರು.

ಸ್ತ್ರೀಶಕ್ತಿ ಮಹಿಳೆಯರಿಗೆ ಆರ್ಥಿಕ ಶಕ್ತಿ: ಸ್ತ್ರಿಶಕ್ತಿ ಸಂಘಗಳ ಮಹಿಳೆಯರು ತಯಾರಿಸುವ ಅಹಾರ ಪದಾರ್ಥಗಳನ್ನು ಮಾರಾಟ ಮಾಡಿ ಸ್ವಾವಲಂಬನೆ ಸಾಧಿಲಸು ಕೆಎಸ್.ಆರ್.ಟಿ.ಸಿ.ಬಸ್ ನಿಲ್ದಾಣದ ಸಮೀಪದಲ್ಲಿಯೇ ಸ್ಥಳ ಗುರುತಿಸಿ ಮಳಿಗೆ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.

ಕಾಂಗ್ರೆಸ್ ಗ್ಯಾರಂಟಿಗಳು ಲೋಕಸಭೆ ಚುನಾವಣೆಯಲ್ಲಿ ಕೈಹಿಡಿಯಲಿಲ್ಲ. ಆದರೂ ಚಿಂತೆಯಿಲ್ಲ. ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದರು.

ಅಂಗನವಾಡಿ ಕಾರ್ಯಕರ್ತೆ ಮುಖಂಡರಾದ ಯಶೋಧಮ್ಮ. ಗೌರವಧನ ಏರಿಕೆ ಮಾಡದಿದ್ದರೂ ಪರವಾಗಿಲ್ಲ, ಆದರೆ, ನಿವೃತ್ತಿ ವೇತನ ನೀಡಬೇಕು ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಅವರಲ್ಲಿ ಒತ್ತಾಯಿಸಿದರು.

ಇದೇ ವೇಳೆ ಸ್ತ್ರಿಶಕ್ತಿ ಸಂಘಗಳ ಮಹಿಳೆಯರು ಬಗೆಬಗೆ ಖ್ಯಾದ್ಯ ಹಾಗೂ ಸೊಪ್ಪು, ತರಕಾರಿ ತಯಾರಿಸಿದ ಆಹಾರ ಪದಾರ್ಥ ಪ್ರದರ್ಶನ ಮಾಡಿದರು.

ಪುರಸಭೆ ಸದಸ್ಯ ಶಿವಕುಮಾರ್, ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆಗ್ರೋ ಪುರುಷೋತ್ತಮ್, ಕಮಲಮ್ಮ, ರಾಜಮ್ಮ, ನಮ್ಮ ಕರ್ನಾಟಕ ನವ ನಿರ್ಮಾಣ ವೇದಿಕೆ ಅಧ್ಯಕ್ಷ ಎನ್.ರಾಜಣ್ಣ ಮಹಂತೇಶ್, ನರೇಗಾ ಸಹಾಯಕ ನಿರ್ದೇಶಕ ಗಂಗಾಧರ್, ಶಾಂತಮ್ಮ, ಚಿಕ್ಕರಾಜು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.