ಶಿವಮೊಗ್ಗ: ಜಿಲ್ಲೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ತಾಂಡವವಾಡುತ್ತಿದ್ದು, 901 ಹುದ್ದೆಗಳು ಖಾಲಿ ಉಳಿದಿವೆ.

ಖಾಸಗಿ ಶಾಲೆಗಳ ಹಾವಳಿಯಿಂದ ಸರ್ಕಾರಿ ಶಾಲೆಗಳ ಸ್ಥಿತಿ ಚಿಂತಾಜನಕವಾಗಿದೆ. ಜಿಲ್ಲೆಯ ಶಾಲೆಗಳೂ ಇದರಿಂದ ಹೊರತಾಗಿಲ್ಲ. ಮಕ್ಕಳಿಗೆ ಬೋಧನೆ ಮಾಡಬೇಕಾದ ಶಿಕ್ಷಕರ ಕೊರತೆಯಿಂದಾಗಿ ಪ್ರಾಥಮಿಕ ಹಂತದಲ್ಲಿ ವಿದ್ಯಾರ್ಥಿಗಳ ಕಲಿಕಾ ಪ್ರಕ್ರಿಯೆಗೆ ಅಡ್ಡಿಯಾಗಿದ್ದು, ಶೈಕ್ಷಣಿಕ ಪ್ರಗತಿ ಕುಂಠಿತದ ಭೀತಿ ಎದುರಾಗಿದೆ.

ಸರ್ಕಾರಿ ಶಾಲೆಗಳಿಗೆ ಎಲ್ಲ ಸವಲತ್ತು ಕೊಟ್ಟೂ ಮಕ್ಕಳು ಬರುತ್ತಿಲ್ಲ ಎಂಬ ಕೊರಗಿನ ನಡುವೆಯೇ ಬರುವ ಮಕ್ಕಳಿಗೆ ಪಾಠ ಹೇಳಿಕೊಡಲೂ ಶಿಕ್ಷಕರ ಕೊರತೆ ಇದೆ ಎನ್ನುವುದು ಆತಂಕದ ವಿಷಯ. ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ ಸರಿದೂಗಿಸಲು ಅತಿಥಿ ಶಿಕ್ಷಕರನ್ನು ನೇಮಕ ಮಾಡಿರುವ ಶಿಕ್ಷಣ ಇಲಾಖೆ, ಖಾಲಿ ಇರುವ ಕಾಯಂ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿದೆ ಎಂಬುದು ಶಿಕ್ಷಕರ ವಲಯದಲ್ಲೇ ಕೇಳಿಬರುತ್ತಿರುವ
ಗಂಭೀರ ಆರೋಪ.

901 ಖಾಲಿ ಹುದ್ದೆಗಳು: ಜಿಲ್ಲೆಯ ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು 6,383 ಹುದ್ದೆಗಳಲ್ಲಿ 5,482 ಶಿಕ್ಷಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, 901 ಹುದ್ದೆಗಳು ಖಾಲಿ ಇವೆ. ಇದರಲ್ಲಿ 126 ಮುಖ್ಯಶಿಕ್ಷಕರು, 768 ಸಹ ಶಿಕ್ಷಕರು, 7 ವಿಶೇಷ ಶಿಕ್ಷಕರ ಹುದ್ದೆಗಳು ಖಾಲಿ ಇವೆ.

659 ಅತಿಥಿ ಶಿಕ್ಷಕರು: ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿಇರುವ ಕಾಯಂ ಶಿಕ್ಷಕರ ಕೊರತೆ ಸರಿದೂಗಿಸಲು ಒಟ್ಟು 659 ಅತಿಥಿ ಶಿಕ್ಷಕರನ್ನು ಸಾರ್ವಜನಿಕಶಿಕ್ಷಣ ಇಲಾಖೆ ನೇಮಿಸಿದೆ.

ಇದರಲ್ಲಿ ಸೊರಬದಲ್ಲಿ 188, ಸಾಗರದಲ್ಲಿ 146, ಶಿಕಾರಿಪುರದಲ್ಲಿ 59, ತೀರ್ಥಹಳ್ಳಿಯಲ್ಲಿ 98, ಶಿವಮೊಗ್ಗದಲ್ಲಿ 24, ಭದ್ರಾವತಿಯಲ್ಲಿ 25, ಹೊಸನಗರದಲ್ಲಿ 119 ಅತಿಥಿ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ.

ಈಡೇರದ ಬೇಡಿಕೆ: ‘ಜಿಲ್ಲೆಯಲ್ಲಿ ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಸಲುವಾಗಿ 950 ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲುಅನುಮತಿ ನೀಡುವಂತೆ ಕೇಳಿಕೊಂಡಿದ್ದವು. ಆದರೆ, ಸರ್ಕಾರ 659 ಅತಿಥಿ ಶಿಕ್ಷಕರನೇಮಕಕ್ಕೆ ಮಾತ್ರ ಅವಕಾಶ ನೀಡಿತ್ತು.ಇನ್ನೂ 350ರಿಂದ 400 ಅತಿಥಿ ಶಿಕ್ಷಕರಬೇಡಿಕೆ ಇದೆ’ ಎನ್ನುತ್ತಾರೆ ಡಿಡಿಪಿಐಎನ್.ಎಂ.ರಮೇಶ್.

ಜಿಲ್ಲೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ ಇರುವುದರಿಂದ ಮಕ್ಕಳಿಗೆ ತೊಂದರೆಯಾಗದಂತೆ ಈಗಾಗಲೇ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಹೆಚ್ಚುವರಿ ಅತಿಥಿ ಶಿಕ್ಷಕರನ್ನು ನೀಡಬೇಕು ಎಂಬ ಬೇಡಿಕೆ ಇದ್ದು, ಕ್ರಮ ಕೈಗೊಳ್ಳಲಾಗುವುದು.

- ಎನ್.ಎಂ.ರಮೇಶ್, ಡಿಡಿಪಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.