ಶಿವಮೊಗ್ಗ: ನಗರದ ಜನತೆಗೆ ಸಾಕು ಪ್ರಾಣಿಗಳ ಕುರಿತು ಅರಿವು ಮೂಡಿಸಲು ಗೇಟ್ ವೇ ಕ್ಯಾಟ್ ಕ್ಲಬ್‌ನಿಂದ ಶನಿವಾರ ಬಿ.ಎಚ್. ರಸ್ತೆ, ಸಿಕ್ರೇಟ್ ಹಾರ್ಟ್ ಚರ್ಚ್ ಆವರಣದಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ಮಟ್ಟದ ಕ್ಯಾಟ್ ಶೋ ಆಯೋಜಿಸಲಾಗಿತ್ತು.

ಸ್ಪರ್ಧೆಯಲ್ಲಿ ಏಳು ಪ್ರಭೇದದ ಬೆಕ್ಕುಗಳು ಭಾಗವಹಿಸಿದ್ದವು. ಪರ್ಷಿಯನ್, ಬೆಂಗಾಲ್, ಕ್ಲಾಸಿಕ್ ಲಾಂಗ್ ಹೇರ್, ಜೊತೆಗೆ ಬೀದಿ ಬೆಕ್ಕಿಗೂ ಪಾಲ್ಗೂಳ್ಳಲು ಅವಕಾಶ ಕಲ್ಪಿಸಿಕೊಟ್ಟದ್ದು ವಿಶೇಷವಾಗಿತ್ತು. ಶೋನಲ್ಲಿ ಬೆಂಗಳೂರು, ಚಿಕ್ಕಮಗಳೂರು, ಬೆಳಗಾವಿ ಸೇರಿ ರಾಜ್ಯದ ವಿವಿಧ ಭಾಗಗಳಿಂದ 50ಕ್ಕೂ ಹೆಚ್ಚು ಬೆಕ್ಕುಗಳೊಂದಿಗೆ ಮಾಲೀಕರು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ನಗರದ ನೂರಾರು ಜನರು ಈ ಸ್ಪರ್ಧೆಯನ್ನು ಕಣ್ತುಂಬಿಕೊಂಡರು.

ಮಹಾರಾಷ್ಟ್ರದಿಂದ ತೀರ್ಪುಗಾರರು ಬಂದಿದ್ದರು. ಅವರು ಬೆಕ್ಕು ಪ್ರಿಯರಿಗೆ ಬೆಕ್ಕಿನ ಪೋಷಣೆ, ಆಹಾರ ಕ್ರಮ, ಸ್ವಚ್ಛತೆ ಕುರಿತು ಮಾಹಿತಿ ನೀಡಿದರು. ಆಯೋಜಕ ಮಹಮ್ಮದ್ ಜೈನ್, ಅಫ್ನಾನ್, ಜಬಿ, ರಿಯಾಜ್, ರುಬಿಯಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.