ಆಸ್ಪತ್ರೆಗಾಗಿ ಬಿಡಿ ಭೂಮಿ ಸ್ವಾಧೀನ ಏಕೆ?
ಶಿವಮೊಗ್ಗದ ಮಂಡ್ಲಿಯಲ್ಲಿ ಕೆಐಎಡಿಬಿಯಿಂದ ಕೈಗಾರಿಕಾ ವಸಾಹತು ಸ್ಥಳದಿಂದ 3 ಕಿ.ಮೀ ದೂರದಲ್ಲಿ ಆಸ್ಪತ್ರೆ ಮಾಲೀಕರೊಬ್ಬರ ಹೆಸರಲ್ಲಿ 35 ರಿಂದ 40 ಎಕರೆ ಜಾಗವಿದೆ. ಅದನ್ನು ಬಿಟ್ಟು ಅವರದ್ದೇ ಆಸ್ಪತ್ರೆಗೋಸ್ಕರ ಕೇವಲ ನಾಲ್ಕು ಎಕರೆ ಬಿಡಿ ಭೂಮಿ ಸ್ವಾಧೀನ ಮಾಡಿ ಬಿಜೆಪಿ ಅವಧಿಯಲ್ಲಿ ಅಧಿಕಾರ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಆಯನೂರು ಮಂಜುನಾಥ್ ಆರೋಪಿಸಿದರು. ಆಸ್ಪತ್ರೆ ಮಾಲೀಕರದ್ದೇ ಜಾಗ ಇದ್ದರೂ ಬಡ ರೈತನ ನಾಲ್ಕು ಎಕರೆ ಜಮೀನು ಮಾತ್ರ ಸ್ವಾಧೀನಪಡಿಸಿಕೊಂಡಿದ್ದು ಏಕೆ. ಆ ಆಸ್ಪತ್ರೆ ಮಾಡಿದವರು ಯಾರು? ಇಲ್ಲಿ ಅಧಿಕಾರ ದುರುಪಯೋಗ ಆಗಿಲ್ಲವೇ. ಆಸ್ಪತ್ರೆ ಟ್ರಸ್ಟ್ ಯಾರದ್ದು? ಇಂತಹ ಪ್ರಕರಣ ರಾಜ್ಯದಲ್ಲಿ ಎಲ್ಲಿಯಾದರೂ ನಡೆದಿದೆಯೇ? ಎಂದು ಉತ್ತರಿಸುವ ಧೈರ್ಯ ಇದ್ದರೆ ಬಿಜೆಪಿಯವರು ಸವಾಲನ್ನು ಸ್ವೀಕರಿಸಲಿ. ಇದರ ಬಗ್ಗೆ ಯಾವಾಗ ಪಾದಯಾತ್ರೆ ಮಾಡುತ್ತೀರಿ ಎಂದು ಪ್ರಶ್ನಿಸಿದರು.