ಹೊಸನಗರ: ಸದಾ ಒಂದಿಲ್ಲೊಂದು ಹೊಸತನ್ನು ಯೋಚಿಸುವ, ಮಕ್ಕಳನ್ನು ನಿರಂತರ ಕ್ರಿಯಾಶೀಲರನ್ನಾಗಿಸುವ ತಾಲ್ಲೂಕಿನ ಬಟ್ಟೆ ಮಲ್ಲಪ್ಪ ಗ್ರಾಮದ ಬಸವನ ಬ್ಯಾಣದ ಅಯ್ಯಪ್ಪ ಮೆಮೋರಿಯಲ್ ಟ್ರಸ್ಟ್ ಅಡಿಯಲ್ಲಿ ನಡೆಯುತ್ತಿರುವ ವ್ಯಾಸ ಮಹರ್ಷಿ ಗುರುಕುಲದ ‘ಮಕ್ಕಳ ಯಕ್ಷ ಕುಟೀರ’ ಶುಕ್ರವಾರದಿಂದ ಅಧಿಕೃತ ತಿರುಗಾಟ ಆರಂಭಿಸಲಿದೆ.

ವಿಶೇಷವಾಗಿ ಹಿಮ್ಮೇಳ, ಮುಮ್ಮೇಳ ಹಾಗೂ ರಂಗಸ್ಥಳ ಮತ್ತು ಧ್ವನಿ, ಬೆಳಕು, ಚೌಕಿ ಸೇರಿದಂತೆ ಘಟ್ಟದ ಮೇಲಿನ ಮೊಟ್ಟ ಮೊದಲ ಮಕ್ಕಳ ಯಕ್ಷ ಮೇಳವಾಗಿ ಹೊರಹೊಮ್ಮಿದೆ ಮಕ್ಕಳ ಯಕ್ಷ ಕುಟೀರ. ಈ ಯಕ್ಷ ಕುಟೀರ ಮಕ್ಕಳ ಮೇಳ 15 ದಿನದ ತಿರುಗಾಟ ಆರಂಭಿಸಿದೆ.

ಮೊದಲ ದಿನದ ತಿರುಗಾಟ ಹೂವಿನಕೋಣೆ ರಾಜ ರಾಜೇಶ್ವರಿ ದೇವಾಲಯದ ನವರಾತ್ರಿ ಉತ್ಸವದಿಂದ ಆರಂಭವಾಗಲಿದೆ. ಅಕ್ಟೋಬರ್ 12ರಂದು ಮಾರುತಿಪುರ ಚೌಡೇಶ್ವರಿ ದೇವಿಯ ಸನ್ನಿಧಿಯಲ್ಲಿ ನಡೆಯಲಿದೆ ಎಂದು ಯಕ್ಷಕುಟೀರ ಮಕ್ಕಳ ಮೇಳದ ಸ್ಥಾಪಕ ವ್ಯವಸ್ಥಾಪಕ ಮಂಜುನಾಥ ಬ್ಯಾಣದ ತಿಳಿಸಿದ್ದಾರೆ.

ಈ ಯಕ್ಷಗಾನದಲ್ಲಿ ಬಾಲಕಿಯರೇ ಅಭಿನಯಿಸುತ್ತಿರುವುದು ಮಕ್ಕಳ ಮೇಳದ ವಿಶೇಷ. ಬಾಲ ಕಲಾವಿದ ಶ್ರೀವತ್ಸ ಗುಡ್ಡೆದಿಂಬ, ಹಿಮ್ಮೇಳದ ಭಾಗವಾಗಿ ಎ.ಆರ್.ಗಣಪತಿ ಭಟ್ ಪುರಪ್ಪೇಮನೆ ಅವರ ನಿರ್ದೇಶನ ಹಾಗೂ ಪ್ರಶಾಂತ್ ಮಧ್ಯಸ್ಥ ಅವರ ಸಮರ್ಥ ಹಿಮ್ಮೇಳಯದೊಂದಿಗೆ ಯಕ್ಷ ತಿರುಗಾಟ ಆರಂಭಗೊಳ್ಳುತ್ತಿದೆ.

ಗುರುಕುಲದಲ್ಲಿ ಎ.ಆರ್.ಗಣಪತಿ ಪುರಪ್ಪೆಮನೆ ನೇತೃತ್ವದಲ್ಲಿ ನಡೆಯುತ್ತಿರುವ ನಿರಂತರ ಯಕ್ಷ ಕಲಿಕೆಗೆ ಇದೀಗ ಹತ್ತು ವರ್ಷ ತುಂಬುತ್ತಿದೆ. ಈ ಹೊತ್ತಿನಲ್ಲಿ ತಿರುಗಾಟ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.