ಶಿವಮೊಗ್ಗ: ಮಲೆನಾಡಿನಲ್ಲಿ ಬೀದಿ ನಾಯಿಗಳ ಹಾವಳಿ ತೀವ್ರಗೊಂಡಿದೆ. ಇದೇ ಜನವರಿಯಿಂದ ಆಗಸ್ಟ್ ಅಂತ್ಯದವರೆಗೆ ಎಂಟು ತಿಂಗಳ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ 17,392 ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ.

ಬೆಚ್ಚಿಬೀಳಿಸುವ ಸಂಗತಿ ಎಂದರೆ ಜಿಲ್ಲೆಯಲ್ಲಿ ಈ ವರ್ಷ ನಾಯಿ ಹಾಗೂ ಬೆಕ್ಕು ಕಡಿತದಿಂದ ಮಾರಕ ರೇಬಿಸ್ ಸೋಂಕಿಗೆ ತುತ್ತಾಗಿ ನಾಲ್ವರು ಸಾವಿಗೀಡಾಗಿದ್ದಾರೆ. ರೇಬಿಸ್ ವಿರುದ್ಧದ ಹೋರಾಟದಲ್ಲಿ ಸದಾ ಮೇಲುಗೈ ಸಾಧಿಸುತ್ತಿದ್ದ ಆರೋಗ್ಯ ಇಲಾಖೆಗೆ ಇದು ಆಘಾತ ಮೂಡಿಸಿದೆ.

2022ರಲ್ಲಿ 19,593 ಜ ನ ನಾಯಿಕಡಿತಕ್ಕೆ ಒಳಗಾಗಿದ್ದು, ಒಬ್ಬರು ಅಸುನೀಗಿದ್ದರು.

ಶಿವಮೊಗ್ಗ ತಾಲ್ಲೂಕಿನ ಆಯನೂರು ಹಾಗೂ ಸಾಗರದಲ್ಲಿ ತಲಾ ಒಬ್ಬರು ಬೆಕ್ಕು ಕಡಿದು ಸಾವನ್ನಪ್ಪಿದರೆ, ಶಿಕಾರಿಪುರ ಹಾಗೂ ಹೊಸನಗರದಲ್ಲಿ ಇಬ್ಬರು ನಾಯಿ ಕಡಿತಕ್ಕೆ ಬಲಿಯಾಗಿದ್ದಾರೆ. ಸಾವಿಗೀಡಾದವರೆಲ್ಲರೂ 35 ವರ್ಷದೊಳಗಿನವರು. ಮನೆಯ ಮುದ್ದಿನ ಬೆಕ್ಕು, ನಾಯಿಗಳ ಮೇಲೆ ಪ್ರೀತಿ ಇಟ್ಟುಕೊಂಡವರೇ ರೇಬಿಸ್ಗೆ ತುತ್ತಾಗಿದ್ದಾರೆ.

‘ಸಾವಿಗೀಡಾದ ನಾಲ್ವರೂ ನಾಯಿ–ಬೆಕ್ಕು ಕಡಿದ ನಂತರ ರೇಬಿಸ್ ವ್ಯಾಕ್ಸಿನ್ ಪಡೆದಿಲ್ಲ. ಸಾಗರದಲ್ಲಿ ಆರೋಗ್ಯ ಇಲಾಖೆಯ ಪ್ರಯೋಗಾಲಯ ತಂತ್ರಜ್ಞರೊಬ್ಬರಿಗೆ ಮನೆಯ ಬೆಕ್ಕು ಕಚ್ಚಿದೆ. ಅದು ನಾವೇ ಸಾಕಿರುವ ಬೆಕ್ಕು ಎಂದು ವ್ಯಾಕ್ಸಿನ್ ಪಡೆಯಲು ಮುಂದಾಗಿಲ್ಲ. ಒಂದು ಸಣ್ಣ ನಿರ್ಲಕ್ಷ್ಯ ಅವರ ಜೀವಕ್ಕೆ ಎರವಾಗಿದೆ’ ಎಂದು ಆರೋಗ್ಯ ಇಲಾಖೆ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ನಾಗರಾಜ ನಾಯ್ಕ ಹೇಳುತ್ತಾರೆ.

ರೇಬಿಸ್ ಸೋಂಕು ತಗುಲಿದರೆ ಸಾವು ನಿಶ್ಚಿತ. ಎರಡು ಮೂರು ದಿನದಲ್ಲಿ ರೋಗಿ ಸಾಯುತ್ತಾನೆ. ಯಾವುದೇ ಪ್ರಾಣಿ ಕಚ್ಚಿದರೂ ರೇಬಿಸ್ ಬರಬಹುದು. ರೇಬಿಸ್ ನಾಯಿ ಕಡಿತದಿಂದ ಶೇ 97ರಷ್ಟು ಪ್ರಮಾಣದಲ್ಲಿ ಬಂದರೆ, ಬೆಕ್ಕು ಹಾಗೂ ಕಾಡುಪ್ರಾಣಿಗಳ ಕಚ್ಚುವಿಕೆಯಿಂದ ಇನ್ನುಳಿದ ಶೇ 3ರಷ್ಟು ಬರುತ್ತದೆ. ಸಾರ್ವಜನಿಕರಲ್ಲಿ ಈ ಬಗ್ಗೆ ಅರಿವು ಮೂಡಬೇಕು. ನಾಯಿ ಇಲ್ಲವೇ ಬೆಕ್ಕು ಸಾಕುವವರು, ಸಾಕು ಪ್ರಾಣಿಗಳೊಂದಿಗೆ ನಿಕಟ ಸಂಪರ್ಕ ಹೊಂದಿರುವವರು ಮೂರು ಡೋಸ್ ರೇಬಿಸ್ ವ್ಯಾಕ್ಸಿನ್ ತೆಗೆದುಕೊಳ್ಳಬೇಕು. ಆರು ತಿಂಗಳಿಗೊಮ್ಮೆ ಬೂಸ್ಟರ್ ಡೋಸ್ ತೆಗೆದುಕೊಳ್ಳುತ್ತಿರಬೇಕು. ಜೊತೆಗೆ ಸಾಕು ಪ್ರಾಣಿಗಳಿಗೂ ಕಡ್ಡಾಯವಾಗಿ ವ್ಯಾಕ್ಸಿನ್ ಹಾಕಿಸಬೇಕು ಎಂದು ಅವರು ಸಲಹೆ ನೀಡುತ್ತಾರೆ.

ನಾಯಿ, ಬೆಕ್ಕು ಸೇರಿದಂತೆ ಯಾವುದೇ ಪ್ರಾಣಿ ಕಚ್ಚಿದರೂ ಆ ಜಾಗವನ್ನು ಮೊದಲು ಸೋಪು ಇಲ್ಲವೇ ಡೆಟಾಲ್ ಹಚ್ಚಿ ಚೆನ್ನಾಗಿ ತೊಳೆಯಬೇಕು. ಅಲ್ಲಿಯೇ ಯಾವುದೇ ಪಟ್ಟಿ ಕಟ್ಟುವುದು ಸಲ್ಲದು. ನಾಟಿ ವೈದ್ಯರ ಬಳಿಗೆ ಹೋಗದೇ, ಏಳು ದಿನಗಳ ಒಳಗೆ ರೇಬಿಸ್ ಪ್ರತಿರೋಧಕ ಚುಚ್ಚುಮದ್ದು ಪಡೆಯಬೇಕು ಎಂದು ಸಲಹೆ ನೀಡುತ್ತಾರೆ.

ಬೀದಿ ನಾಯಿಗಳು ಸೇರಿದಂತೆ ಪ್ರಾಣಿಗಳು ಸಾಮಾನ್ಯವಾಗಿ ಆಹಾರದ ಕೊರತೆ ಆದಾಗ ಜನರ ಮೇಲೆ ದಾಳಿ ಮಾಡುತ್ತವೆ. ಅಕ್ರಮಣಕಾರಿ ಸ್ವಭಾವ, ಹುಚ್ಚು ಕೂಡ ಜನರ ಮೇಲಿನ ದಾಳಿಗೆ ಕಾರಣವಾಗಲಿದೆ. ಕೆಲವೊಮ್ಮೆ ಮರಿಗಳ ರಕ್ಷಣೆ, ಗುಂಪುಗಳ ನಡುವಿನ ಘರ್ಷಣೆಯಿಂದ ಆಗುವ ಆತಂಕದಿಂದಲೂ ಅವು ಜನರಿಗೆ ಕಚ್ಚಬಹುದು. ಇಲ್ಲವೇ ನಿಕಟ ಸಂಪರ್ಕದ ವೇಳೆ ಸ್ವಭಾವತಃ ಕಚ್ಚುವ ಅವಕಾಶವೂ ಇರುತ್ತದೆ. ಹೀಗಾಗಿ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಎಂಬುದು ಆರೋಗ್ಯ ಇಲಾಖೆಯ ಕಳಕಳಿ.

ಶಿಕಾರಿಪುರ: 41 ಜನರಿಗೆ ಕಚ್ಚಿದ ಹುಚ್ಚುನಾಯಿ

ಜಿಲ್ಲೆಯ ಶಿಕಾರಿಪುರದಲ್ಲಿ ಸೆಪ್ಟೆಂಬರ್ 28ರಂದು ಹುಚ್ಚು ನಾಯಿಯೊಂದು 41 ಜನರಿಗೆ ಕಚ್ಚಿದೆ. ಈ ವರ್ಷ ಒಂದೇ ದಿನ ಅತಿ ಹೆಚ್ಚು ಜನರಿಗೆ ನಾಯಿ ಕಚ್ಚಿದ ದಾಖಲೆ ಇದಾಗಿದೆ. ಸಂತೆಯಲ್ಲಿ ಸಿಕ್ಕಸಿಕ್ಕವರಿಗೆ ಕಚ್ಚಿರುವ ನಾಯಿಯನ್ನು ಬೆನ್ನಟ್ಟಿದ ಜನ ಅಲ್ಲಿನ ಆಸ್ಪತ್ರೆ ವೃತ್ತದಲ್ಲಿಯೇ ಹೊಡೆದು ಕೊಂದರು.

ನಾಯಿ ಕಚ್ಚಿಸಿಕೊಂಡವರಲ್ಲಿ ಶಾಲೆಯಿಂದ ಮನೆಗೆ ಹೊರಟಿದ್ದ ಇಬ್ಬರು ಮಕ್ಕಳು ಸೇರಿದ್ದಾರೆ. ಆಟೊದಲ್ಲಿ ಪ್ರಚಾರ ನಡೆಸಿ ಜಾಗೃತಿ ಮೂಡಿಸಿ ನಾಯಿ ಕಚ್ಚಿಸಿಕೊಂಡ ಎಲ್ಲರನ್ನೂ ಪಟ್ಟಣದ ಆಸ್ಪತ್ರೆಗೆ ಕರೆತಂದು ರೇಬಿಸ್ ಹಿಮ್ಯುನೊಗ್ಲೋಬಿನ್ ವ್ಯಾಕ್ಸಿನ್ ಹಾಕಲಾಗಿದೆ.

ರೇಬಿಸ್ ಕಾಯಿಲೆ ಬಂದರೆ ಸಾವು ಖಚಿತ. ಆದ್ದರಿಂದ ಎಲ್ಲರೂ ನಾಯಿ ಮತ್ತು ಇತರೆ ಪ್ರಾಣಿಗಳ ಕಡಿತದಿಂದ ದೂರ ಇರಬೇಕು. ಕೇವಲ ಕಡಿತ ಮಾತ್ರವಲ್ಲ ತರಚಿದ್ದರೂ ಆ್ಯಂಟಿ ರೇಬಿಸ್ ಲಸಿಕೆ ಕಡ್ಡಾಯವಾಗಿ ಪಡೆಯಬೇಕು
ಡಾ.ನಟರಾಜ್, ಡಿಎಚ್ಒ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.